ಪ್ರಗತಿವಾಹಿನಿ ಸುದ್ದಿ; ಬೆಳಗಾವಿ: ಪ್ರವಾಹ ಸಂಕಷ್ಟದಿಂದ ನಲುಗಿರುವ ಕೂರ್ಲ್ ಗ್ರಾಮಕ್ಕೆ ಭೇಟಿ ನೀಡಿದ ಫೇಸ್ಬುಕ್ ಫ್ರೆಂಡ್ಸ್ ಸರ್ಕಲ್ ಒಕ್ಕೂಟ ಸದಸ್ಯರು ಆಶಾ ಕಾರ್ಯಕರ್ತರ ಜೊತೆಗೂಡಿ ನೆರೆ ಪೀಡಿತ ಸಂತ್ರಸ್ತರಿಗೆ ಔಷಧಿ ವಿತರಿಸಿದರು.
ಜ್ವರ, ಬಿಪಿ, ಶುಗರ್, ಪೈನ್ ಕಿಲ್ಲರ್, ಮಾಸ್ಕ್ ಹಾಗೂ ಆಂಟಿ ಫಂಗಲ್ ಔಷಧಿ ವಿತರಿಸಲಾಯಿತು. ಸಂತೋಷ್ ದರೇಕರ್ ಮತ್ತು ಕಿರಣ್ ನಿಪ್ಪೋನಿಕರ್ ಗೆ ಇದೇ ವೇಳೆ ಸತ್ಕರಿಸಲಾಯಿತು.
ಫೇಸ್ಬುಕ್ ಫ್ರೆಂಡ್ಸ್ ಸರ್ಕಲ್ ಪ್ರತಿ ಪ್ರವಾಹ ದಲ್ಲಿ ಕೂರ್ಲ್ ಗ್ರಾಮಕ್ಕೆ ಔಷದಿ ವಿತರಿಸುತ್ತದೆ. ಕೂರ್ಲ್ ಗ್ರಾಮದ ಆಶಾ ಕಾರ್ಯಕರ್ತರು, ವೈಶಾಲಿ ಲಕ್ಷ್ಮಣ್ ಮಾಳಿ, ಸವಿತಾ ಅಪ್ಪ ಸಾಹೇಬ ಚೌಗುಲೆ ಸುರೇಖಾ ವಿಟ್ಟಲ್ ಪಾಟೀಲ್ ಭಾರತಿ ಭಗವಾನ್ ಗುರವ ಅನಿತಾ ಅರುಣ್ ಭೂದಾಲೆ ಲಲಿತಾ ಮಹದೇವ್ ಮಾನೆ ಇದ್ದರು.
ವಿಜಯಕುಮಾರ್ ಸಿಂತ್ರೆ ಚೇರ್ಮನ್ ಎನ್ ಜಿ ಯೋ ಪಾರ್ವತಿ ದೇವಿ ಶಿಂತ್ರೆ ರೂರಲ್ ಡೆವಲಪ್ಮೆಂಟ್ ಸೊಸೈಟಿ ಕುರ್ಲಿ ಶ್ರೀ ಅಜಯ್ ಪಾಟೀಲ್ ಮಾಜಿ ಸದಸ್ಯರು ಗ್ರಾಮ ಪಂಚಾಯತಿ ಕುರ್ಲು ಅಮರ ಶಿಂತ್ರೆ, ಮಾಜಿ ಸರ್ಪಂಚ್ ಗ್ರಾಮ ಪಂಚಾಯತ್ ಕುರ್ಲಿ ಮನುಷ್ಯ ಅಜಯ್ ಪಾಟೀಲ್ ಗ್ರಾಮ ಪಂಚಾಯತ್ ಸದಸ್ಯರು ಕುರ್ಲಿ ಅಮುಲ್ ಪಾಟೀಲ್, ರೋಹಿತ್ ಪಾಟೀಲ್, ಫೇಸ್ಬುಕ್ ಫ್ರೆಂಡ್ಸ್ ಸರ್ಕಲ್ ಒಕ್ಕೂಟ ಬೆಳಗಾವಿ ಸಂತೋಷ್ ದರೇಕರ್ ಕಿರಣ್ ನಿಪ್ಪನಿಕರ್, ಡಾಕ್ಟರ್ ದೇವದತ್ ದೇಸಾಯಿ, ಡಾಕ್ಟರ್ ಆನಂದ್ ತೋಟಗಿ, ರೋಹನ್ ಫರ್ಮ ಶೇಖರ್ ಕುಗಜಿ, ಸೂರಜ್ ಅನ್ವೇಕರ್ ವಿಕ್ಟರ್ ಫ್ರಾನ್ಸಿಸ್ ಮುಂತಾದವರಿದ್ದರು.
ಪ್ರವಾಹ ಪೀಡಿತ ಜನರಿಗೆ ಸಹಾಯ ಮಾಡಲು ಇಚ್ಚಿಸುವವರು ವಿಜಯಕುಮಾರ ತಿಂತ್ರೆ ಚೇರ್ಮನ್ ಎನ್ ಜಿ ಓ ಪಿಎಂಎಸ್ ಆರ್ ಡಿ ಎಸ್ ಕುರ್ಲಿ ದೂರವಾಣಿ ಸಂಖ್ಯೆ 797537349 ಸಂಪರ್ಕಿಸಿ
ಘಟಪ್ರಭಾ ನದಿಯಲ್ಲಿ ತೇಲಿ ಬಂತು ಅಪರಿಚಿತ ಶವ
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ