ಪ್ರಗತಿವಾಹಿನಿ ಸುದ್ದಿ; ಚಿಕ್ಕೋಡಿ: ನಿಪ್ಪಾಣಿ ಮತಕ್ಷೇತ್ರದ ಬೂದಿಹಾಳ ಮತ್ತು ಕೋಡ್ನಿ ಗ್ರಾಮಕ್ಕೆ ರಾಜ್ಯ ಸರ್ಕಾರದ ಸಚಿವರಾದ ಶಶಿಕಲಾ ಜೊಲ್ಲೆ ಯವರ ಭೇಟಿ ನೀಡಿ ಪ್ರವಾಹ ಪರಿಸ್ಥಿತಿಯನ್ನು ವೀಕ್ಷಿಸಿ, ಜನರ ಸಮಸ್ಯೆಗಳನ್ನು ಆಲಿಸಿ, ಸೂಕ್ತ ಪರಿಹಾರ ಒದಗಿಸಲಾಗುವುದು ಎಂದು ಭರವಸೆ ನೀಡಿದರು.
ತಡರಾತ್ರಿಯಾದರೂ ಕ್ಷೇತ್ರದ ಜನರ ಸಂಕಷ್ಟಕ್ಕೆ ಸಕಾರಾತ್ಮಕವಾಗಿ ಸ್ಪಂದಿಸುವ ನಿಟ್ಟಿನಲ್ಲಿ ಅವರ ನೆರವಿಗೆ ಧಾವಿಸಿ, ಸಮಸ್ಯೆಗಳನ್ನು ಮನಗಂಡಿದ್ದೇನೆ. ಪ್ರವಾಹದಿಂದ ಮನೆ ಕಳೆದುಕೊಂಡವರಿಗೆ ಬಿಜೆಪಿ ಸರ್ಕಾರದ ವತಿಯಿಂದ ಪರಿಹಾರವನ್ನು ಸೂಕ್ತ ಸಮಯದಲ್ಲಿ ನೀಡಲಾಗುವುದು. ಈಗಾಗಲೇ ಪ್ರವಾಹಕ್ಕೀಡಾಗಿರುವ ಪ್ರದೇಶವನ್ನು ಸರ್ವೇ ನಡೆಸುವುವಂತೆ ಅಧಿಕಾರಿಗಳಿಗೆ ಸೂಚಿಸಿದ್ದು, ಶೀಘ್ರದಲ್ಲಿ ಅದರ ವರದಿ ಪರಿಶೀಲಿಸಿ ಪರಿಹಾರ ನೀಡಲಾಗುವುದು ಎಂದು ಹೇಳಿದರುಪ್ರವಾಹ ಸಂಕಷ್ಟಕ್ಕೊಳಗಾಗಿರುವ ಜನರ ಸಮಸ್ಯೆಗಳನ್ನು ಅರಿತಿದ್ದು, ಬಿಜೆಪಿ ಸರ್ಕಾರದ ವತಿಯಿಂದ ಸದ್ಯದಲ್ಲೇ ಸೂಕ್ತ ಪರಿಹಾರ ಒದಗಿಸಲಾಗುವುದು. ಬಿಜೆಪಿ ಸರ್ಕಾರ ನಿಮ್ಮ ಜೊತೆಗಿದೆ. ಕ್ಷೇತ್ರದ ಜನರ ಹಿತ ಕಾಪಾಡುವುದು ನಮ್ಮ ಕರ್ತವ್ಯ. ಹೀಗಾಗಿ ಯಾರೂ ಆತಂಕಕ್ಕೊಳಗಾಬೇಡಿ. ನಿಮ್ಮೆಲ್ಲರ ರಕ್ಷಣೆ ನಮ್ಮ ಕರ್ತವ್ಯ ಎಂದು ಹೇಳಿದರು.
ಈ ಸಂದರ್ಭದಲ್ಲಿ ಬಿಜೆಪಿ ಗ್ರಾಮೀಣ ಅಧ್ಯಕ್ಷರಾದ ಪವನ ಪಾಟೀಲ,ರಾಜೇಂದ್ರ ಕಾನಡೆ, ಅಮಿತ ಸಾಳವೆ, ಬೀರಾ ಡೋಣೆ, ಪ್ರಕಾಶ ಜಂಗಮ, ರಾಜು ಭವರೆ, ಸುನಿಲ ಭವರೆ, ರಾವಸಾಬ ಖೋತ, ವಿಠ್ಠಲ ಖೋತ, ಸತೀಶ ಮಾನೆ, ರಾಜೇಂದ್ರ ಶಿಂಧೆ, ಸದಾಶಿವ ಬುದಿಹಾಳೆ, ಗಣಪತಿ ಖೋತ, ರವೀಂದ್ರ ಖೋತ, ಲಲಿತಾ ತೊರಣೆ, ವಿಠ್ಠಲ ನಾಯ್ಕ್ ಹಾಗೂ ಪಕ್ಷದ ಕಾರ್ಯಕರ್ತರು ಉಪಸ್ಥಿತರಿದ್ದರು.
ಎರಡನೇ ಬಾರಿ ಸಚಿವರಾದ ನಂತರ ಪ್ರಥಮ ಬಾರಿಗೆ ನಿಪ್ಪಾಣಿಗೆ ಆಗಮಿಸಿದ ಸಚಿವೆ ಶಶಿಕಲಾ ಜೊಲ್ಲೆಗೆ ಅದ್ದೂರಿ ಸ್ವಾಗತ
ಯಡಿಯೂರಪ್ಪಗೆ ಸಂಪುಟ ದರ್ಜೆಯ ಸ್ಥಾನ
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ