Latest

ಕಾರಿನಲ್ಲೇ ಬೆಂಕಿಹಚ್ಚಿಕೊಂಡು ಸಜೀವ ದಹನಗೊಂಡ ಪ್ರೇಮಿಗಳು

ಪ್ರಗತಿವಾಹಿನಿ ಸುದ್ದಿ; ಚಾಮರಾಜನಗರ: ಪ್ರೇಮ ವಿವಾಹಕ್ಕೆ ಮನೆಯರು ಅಡ್ಡಿಪಡಿಸಿದ ಹಿನ್ನೆಲೆಯಲ್ಲಿ ಪ್ರೇಮಿಗಳಿಬ್ಬರು ಕಾರಿನಲ್ಲೇ ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆಗೆ ಶರಣಾಗಿರುವ ಘೋರ ಘಟನೆ ಚಾಮರಾಜನಗರದಲ್ಲಿ ನಡೆದಿದೆ.

ಇಲ್ಲಿನ ಯಳಂದೂರು ತಾಲೂಕಿನ ಕಿನಕನಹಳ್ಳಿ ಬಳಿ ಪ್ರೇಮಿಗಳು ಸಜೀವ ದಹನವಾಗಿದ್ದಾರೆ. ಕಾಂಚನಾ (20) ಹಾಗೂ ಶ್ರೀನಿವಾಸ್ (23) ಆತ್ಮಹತ್ಯೆಗೆ ಶರಣಾದವರು.

ಜಿಲ್ಲಾಸ್ಪತ್ರೆಯಲ್ಲಿ ನರ್ಸ್ ಆಗಿ ಕಾರ್ಯನಿರ್ವಹಿಸುತ್ತಿದ್ದ ಕಾಂಚನಾ ಕ್ಯಾಬ್ ಡ್ರೈವರ್ ಶ್ರೀನಿವಾಸ್ ನನ್ನು ಪ್ರೀತಿಸುತ್ತಿದ್ದಳು. ವಿವಾಹಕ್ಕೆ ಇಬ್ಬರ ಮನೆಯಲ್ಲಿಯೂ ವಿರೋಧವಿತ್ತು ಎನ್ನಲಾಗಿದೆ. ಇದರಿಂದ ಮನನೊಂದ ಪ್ರೇಮಿಗಳಿಬ್ಬರು ಯಳಂದೂರು ತಾಲೂಕಿನ ಕಿನಕನಹಳ್ಳಿ ಸಮೀಪ ಜಮೀನಿನ ಬಳಿ ಕಾರು ನಿಲ್ಲಿಸಿ, ಕಾರಿಗೆ ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಮಾಂಬಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಿವಾಹದ ಬಳಿಕ ಬಲವಂತದ ಲೈಂಗಿಕ ಕ್ರಿಯೆ; ಕೋರ್ಟ್ ಹೇಳಿದ್ದೇನು?

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button