Latest

ಶಾಲೆಗಳ ಆರಂಭಕ್ಕೆ ಇಂದೇ ಮಾರ್ಗಸೂಚಿ ಪ್ರಕಟ

ಪ್ರಗತಿವಾಹಿನಿ ಸುದ್ದಿ; ಬೆಂಗಳೂರು: ಆಗಸ್ಟ್ 23ರಿಂದ ಶಾಲೆಗಳು ಆರಂಭವಾಗಲಿದ್ದು, ಇಂದೇ ಮಾರ್ಗಸೂಚಿ ಪ್ರಕಟಿಸುವುದಾಗಿ ಶಿಕ್ಷಣ ಸಚಿವ ಬಿ.ಸಿ.ನಾಗೇಶ್ ತಿಳಿಸಿದ್ದಾರೆ.

ವಿಧಾನಸೌಧದಲ್ಲಿ ಮಾತನಾಡಿದ ಸಚಿವರು, ಶೇ.2ಕ್ಕಿಂತ ಕಡಿಮೆ ಪಾಸಿಟಿವಿಟಿ ಇರುವ ಕಡೆ ಮಾತ್ರ ಶಾಲೆಗಳನ್ನು ಆರಂಭಿಸಲಾಗುತ್ತದೆ. ಮಕ್ಕಳಿಗೆ ಹಾಜರಾತಿ ಕಡ್ಡಾಯ ಮಾಡಿಲ್ಲ, ಸೋಂಕು ಪತ್ತೆಯಾದರೆ ಅಂತಹ ಶಾಲೆಗಳನ್ನು ಕ್ಲೋಸ್ ಮಾಡುತ್ತೇವೆ ಎಂದು ತಿಳಿಸಿದರು.

ಇನ್ನು ಖಾಸಗಿ ಶಿಕ್ಷಣ ಸಂಸ್ಥೆಗಳ ಜೊತೆ ಮಾತನಾಡಿದ್ದು, ಯಾವುದನ್ನೂ ನಾವು ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಹೇರುವುದಕ್ಕೆ ಆಗಲ್ಲ. ಆದರೆ ಪೋಷಕರನ್ನು ಗ್ರಾಹಕರ ತರ ನೋಡಬೇಡಿ ಅಂತ ಹೇಳಿದ್ದೇನೆ. ಅನೇಕ ಜಿಲ್ಲೆಗಳಲ್ಲಿ ಇಂದಿಗೂ ಅನೇಕ ಖಾಸಗಿ ಶಾಲೆಗಳು ಉಚಿತ ಶಿಕ್ಷಣ ನೀಡಿದ ಖಾಸಗಿ ಶಾಲೆಗಳೂ ಇವೆ. ಹಲವರು ಇಂದು ಖಾಸಗಿ ಶಲಎ ನಂಬಿದ್ದಾರೆ. ಆದರೆ ಪೋಷಕರಿಗೆ ತೊಂದರೆಯಾದರೆ ಕಾನೂನಿನಡಿ ಕ್ರಮ ಕೈಗೊಳ್ಳುತ್ತೇವೆ ಎಂದು ತಿಳಿಸಿದರು.

ಬೆಂಗಳೂರಿಗೆ ಆಗಮಿಸಿದ ಉಪರಾಷ್ಟ್ರಪತಿ ವೆಂಕಯ್ಯ ನಾಯ್ಡು

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button