Latest

ನಿರ್ದೇಶಕ ಕರಮಲ ಬಾಲರವೀಂದ್ರನಾಥ್ ಅರೆಸ್ಟ್

ಪ್ರಗತಿವಾಹಿನಿ ಸುದ್ದಿ; ಬೆಂಗಳೂರು: ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮಧುರ ಸ್ವಪ್ನ ಚಿತ್ರದ ನಿರ್ದೇಶಕ ಕರಮಲ ಬಾಲರವೀಂದ್ರನಾಥ್ ಅವರನ್ನು ಬೆಂಗಳೂರಿನಲ್ಲಿ ಪೊಲೀಸರು ಬಂಧಿಸಿದ್ದಾರೆ.

ನಿರ್ದೇಶಕ ಕರಮಲ ರವೀಂದ್ರನಾಥ್ ನಕಲಿ ಚಿನ್ನ ಅಡವಿಟ್ಟು ಬ್ಯಾಂಕ್ ನಿಂದ 42.91 ಲಕ್ಷ ರೂಪಾಯಿ ಸಾಲ ಪಡೆದುಕೊಂಡಿದ್ದರು. ಬಡ್ಡಿ ಕಟ್ಟುವಂತೆ ಸೂಚಿಸಿದ್ದರೂ ನಿರ್ಲಕ್ಷ್ಯವಹಿಸಿದ್ದರು. ಇದರಿಂದ ಬ್ಯಾಂಕ್ ಅಡವಿಟ್ಟ ಚಿನ್ನ ಹರಾಜು ಹಾಕುವುದಾಗಿ ಹೇಳಿ ನೋಟೀಸ್ ನೀಡಿತ್ತು. ನೋಟೀಸ್ ಗೂ ನಿರ್ದೇಶಕರಿಂದ ಯಾವುದೇ ಪ್ರತಿಕ್ರಿಯೆ ಬಾರದ ಕಾರಣ ಅನುಮಾನಗೊಂಡ ಬ್ಯಾಂಕ್ ಸಿಬ್ಬಂದಿ, ಅಡವಿಟ್ಟ ಚಿನ್ನವನ್ನು ಪರಿಶೀಲಿಸಿದ್ದಾರೆ. ಈ ವೇಳೆ ಅದು ನಕಲಿ ಚಿನ್ನ ಎಂಬುದು ಗೊತ್ತಾಗಿದೆ.

ಈ ಬಗ್ಗೆ ಬ್ಯಾಂಕ್ ನಿಂದ ದೂರು ನೀಡಿದ ಹಿನ್ನೆಲೆಯಲ್ಲಿ ನಿರ್ದೇಶಕ ಕರಮಲ ಬಾಲರವೀಂದ್ರನಾಥ್ ಅವರನ್ನು ರಾಜಾಜಿನಗರ ಪೊಲೀಸರು ಬಂಧಿಸಿದ್ದಾರೆ.
ದಂಪತಿ ಆತ್ಮಹತ್ಯೆ ಪ್ರಕರಣಕ್ಕೆ ಟ್ವಿಸ್ಟ್

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button