Latest

ಕಾನ್ಸ್ ಟೇಬಲ್ ಜೊತೆ ಪತ್ನಿ ಕಳ್ಳಾಟ; ಪೊಲೀಸ್ ಪೇದೆಯನ್ನು ಕಟ್ಟಿಹಾಕಿ ಥಳಿಸಿದ ಪತಿ

ಪ್ರಗತಿವಾಹಿನಿ ಸುದ್ದಿ; ಯಾದಗಿರಿ; ತನ್ನ ಪತ್ನಿಯೊಂದಿಗೆ ಅಕ್ರಮ ಸಂಬಂಧ ಹೊಂದಿದ್ದ ಪೊಲೀಸ್ ಕಾನ್ಸ್ ಟೇಬಲ್ ಓರ್ವನನ್ನು ಹಿಡಿದು ಕೈ-ಕಾಲು ಕಟ್ಟಿಹಾಕಿ ಹಿಗ್ಗಾಮುಗ್ಗಾ ಪತಿಯೋರ್ವ ಥಳಿಸಿರುವ ಘಟನೆ ಯಾದಗಿರಿಯಲ್ಲಿ ನಡೆದಿದೆ.

ಜಿಲ್ಲಾ ಡಿಆರ್ ಪೊಲೀಸ್ ಕಾನ್ಸ್ ಟೇಬಲ್ ಗುರಪ್ಪ ಮಹಿಳೆಯೋರ್ವಳ ಜೊತೆ ಅಕ್ರಮ ಸಂಬಂಧ ಹೊಂದಿದ್ದ. ಮಹಿಳೆಯ ಪತಿಗೆ ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದ ಕಾನ್ಸ್ ಟೇಬಲ್ ನನ್ನು ಹಿಡಿದು ಎಸ್ ಪಿ ಕಚೇರಿ ಸಮೀಪವೇ ಕೈ, ಕಾಲುಗಳನ್ನು ಕಟ್ಟಿಹಾಕಿ ಥಳಿಸಿದ್ದಾನೆ.

Home add -Advt

ಹಲವು ದಿನಗಳಿಂದ ಪೊಲೀಸ್ ಕಾನ್ಸ್ ಟೇಬಲ್ ಹಾಗೂ ಮಹಿಳೆಯ ನಡುವೆ ಕಳ್ಳಾಟ ನಡೆಯುತ್ತಿತ್ತು ಎನ್ನಲಾಗಿದೆ. ಪತಿಗೆ ವಿಷಯ ಗೊತ್ತಾಗುತ್ತಿದ್ದಂತೆಯೇ ಮಹಿಳೆ ಪೊಲೀಸ್ ಕಾನ್ಸ್ ಟೇಬಲ್ ವಿರುದ್ಧ ದೂರು ನೀಡಲು ಮುಂದಾಗಿದ್ದಳು. ಆದರೆ ಅಷ್ಟರಲ್ಲಿ ಕಾನ್ಸ್ ಟೇಬಲ್ ನನ್ನು ಹಿಡಿದು ಪತಿ ಧರ್ಮದೇಟು ನೀಡಿದ್ದಾನೆ.
ಹಿರಿಯ ಪತ್ರಕರ್ತ, ಬಿಜೆಪಿ ಮುಖಂಡ ಚಂದನ್ ಮಿತ್ರಾ ಇನ್ನಿಲ್ಲ

Related Articles

Back to top button