Latest

ಅತಿಥಿ ಉಪನ್ಯಾಸಕರಿಗೆ ರೇಷನ್ ಕಿಟ್ ವಿತರಣೆ

ಪ್ರಗತಿವಾಹಿನಿ ಸುದ್ದಿ; ಬೆಳಗಾವಿ: ಕರ್ನಾಟಕ ರಾಜ್ಯ ಮಹಾವಿದ್ಯಾಲಯಗಳ ಶಿಕ್ಷಕ ಸಂಘ, ಸೇವಾಭಾರತಿ ಮತ್ತು ವಿಶ್ವ ಹಿಂದು ಪರಿಷತ್ ನೇತೃತ್ವದಲ್ಲಿ ಶಿಕ್ಷಕರ ದಿನಾಚರಣೆ ನಿಮಿತ್ತ ಸರ್ಕಾರಿ, ಅನುದಾನಿತ ಮತ್ತು ಅನುದಾನ ರಹಿತ ಪದವಿ ಕಾಲೇಜುಗಳು ಅತಿಥಿ ಉಪನ್ಯಾಸಕರಿಗೆ ನ್ಯೂ ಗೂಡ್ಸ್ ಶೇಡ್ ರಸ್ತೆಯ ಕಚೇರಿ ಆವರಣದಲ್ಲಿ ರೇಷನ್ ಕಿಟ್ ವಿತರಿಸಲಾಯಿತು.

ಆರ್‌ಸಿಯು ಸಿಂಡಿಕೇಟ್ ಸದಸ್ಯ ಡಾ.ಆನಂದ ಹೊಸೂರ ಮಾತನಾಡಿ, ಸಾವಿರಾರು ವಿದ್ಯಾರ್ಥಿಗಳಿಗೆ ಜ್ಞಾನ ಮತ್ತು ಶಿಕ್ಷಣ ನೀಡುವ ಮೂಲಕ ರಾಷ್ಟ್ರದ ಪ್ರಗತಿಯಲ್ಲಿ ಶಿಕ್ಷಕರ ಪಾತ್ರ ಅನನ್ಯವಾಗಿದೆ. ವಿದ್ಯಾರ್ಥಿಗಳ ಉಜ್ವಲ ಭವಿಷ್ಯಕ್ಕೆ ನಾಂದಿ ಹಾಡುವ ಶಿಕ್ಷಕರ ಬದುಕು ಕೊರೋನಾ ಮಾಹಾಮಾರಿಯ ಸಂದಿಗ್ಧ ಪರಿಸ್ಥಿತಿಯಲ್ಲಿ ಶೋಚನೀಯವಾಗಿದೆ. ಆದರೂ ಈ ಕಠಿಣ ದಿನಗಳಲ್ಲಿ ಶಿಕ್ಷಕರು ತಮ್ಮ ಪಾಠ ಮತ್ತು ವೃತ್ತಿಯಿಂದ ವಿಮುಖರಾಗಿದೆ, ಅತ್ಯಂತ ಕಾಳಜಿಯಿಂದ ವಿದ್ಯಾರ್ಥಿಗಳ ಬದುಕು ಕಟ್ಟಿಕೊಡುವಲ್ಲಿ ನಿರತರಾಗಿರುವುದು ಶ್ಲಾಘನೀಯ ಎಂದರು.

ವಿಶ್ವ ಹಿಂದೂ ಪರಿಷತ್ ಪ್ರಾಂತ ಖಜಾಂಚಿ ಕೃಷ್ಣ ಭಟ್ ಮಾತನಾಡಿ, ಕೊರೋನಾ ಮೊದಲ ಮತ್ತು ಎರಡನೇ ಅಲೆಯಲ್ಲಿ ವಿಎಚ್‌ಪಿ ಮತ್ತು ಬಜರಂಗದಳ ಸೋಂಕಿತರನ್ನು ಆಸ್ಪತ್ರೆ ದಾಖಲು, ಶವ ಸಂಸ್ಕಾರ, ಆಕ್ಸಿಜನ್ ಸಿಲಿಂಡರ್ ವಿತರಣೆ, ಕೋವಿಡ್ ಕೇರ್ ಸೆಂಟರ್ ಸ್ಥಾಪನೆ, ರಕ್ತದಾನ ಹೀಗೆ ಹತ್ತಾರು ಸೇವಾ ಕಾರ್ಯಗಳಲ್ಲಿ ತೊಡಗಿಸಿಕೊಂಡು ಸಾವಿರಾರು ಕುಟುಂಬಗಳಿಗೆ ನೆರವಾಗಿದ್ದಾರೆ. ಶಿಕ್ಷಕರಿಗೂ ಅಲ್ಪ ಸೇವೆಗೈಯಲು ಅವಕಾಶ ಸದ್ಯ ದೊರಕಿರುವುದೆ ನನ್ನ ಭಾಗ್ಯ ಎಂದು ತಮ್ಮ ಭಾವನೆಗಳನ್ನು ವ್ಯಕ್ತಪಡಿಸಿದರು.
ಎ.ಬಿ. ಇಟಗಿ, ಆನಂದ ಯರೆಗುದ್ದಿ ಮತ್ತು ಅನಿಲ ಹಾಲಭಾವಿ ಹಾಜರಿದ್ದರು.

ಅರುಣ ಹೊಸಮಠ ಪ್ರಾಸ್ತಾವಿಕವಾಗಿ ಮಾತನಾಡಿದರು. ಸಚಿನ ಹಿರೇಮಠ ವಂದಿಸಿದರು. ಮಹಾದೇವ ಧರಿಗೌಡರ ನಿರೂಪಿಸಿದರು.

Home add -Advt

Related Articles

Back to top button