Kannada NewsKarnataka NewsLatest

ಬೆಳಗಾವಿಯಲ್ಲಿ ಬಿಜೆಪಿಗೆ ಕಡಿಮೆ ಸೀಟ್ ಬಂದಿದ್ದೇಕೆ?

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ – ಬಹಳ ಕುತೂಹಲ ಮೂಡಿಸಿದ್ದ ಬೆಳಗಾವಿ ಮಹಾನಗರ ಪಾಲಿಕೆಯ ಚುನಾವಣೆ ಮುಂಗಿದು ಫಲಿತಾಂಶವೂ ಪ್ರಕಟವಾಗಿದೆ. 58 ಸ್ಥಾನಗಳ ಪೈಕಿ ಬಿಜೆಪಿಗೆ 35, ಕಾಂಗ್ರೆಸ್ ಗೆ 10, ಇತರರಿಗೆ 13 ಸ್ಥಾನಗಳು ಬಂದಿವೆ.

ಬಿಜೆಪಿ 35 ಸ್ಥಾನಗಳೊಂದಿಗೆ ಸ್ಪಷ್ಟಬಹುಮತ ಪಡೆದು ಆಡಳಿತದ ಚುಕ್ಕಾಣಿ ಹಿಡಿಯುತ್ತಿದೆ. ಆದರೆ ಬಿಜೆಪಿ ಟಾರ್ಗೆಟ್ 45ರಿಂದ 10 ಸ್ಥಾನ ಕೆಳಗಿಳಿದಿದ್ದೇಕೆ?

ಬೆಳಗಾವಿ ದಕ್ಷಿಣ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ 25 ವಾರ್ಡ್ ಗಳ ಪೈಕಿ ಬಿಜೆಪಿ 22 ವಾರ್ಡ್ ಗೆದ್ದಿದೆ. ಕೇವಲ 3 ಸ್ಥಾನಗಳನ್ನು ಕಳೆದುಕೊಂಡಿದೆ. ಶಾಸಕ ಅಭಯ ಪಾಟೀಲ ಬೆಳಗಾವಿ ಪಾಲಿಕೆಯಲ್ಲಿ ಬಿಜೆಪಿಗೆ 45 ಸ್ಥಾನಗಳನ್ನು ಪಡೆಯುವ ಗುರಿ ಇಟ್ಟುಕೊಂಡಿದ್ದರು. ಬೆಳಗಾವಿ ದಕ್ಷಿಣದಲ್ಲಿ ಅದೇ ವಿಶ್ವಾಸದ ಮೇಲೆ ಕೆಲಸ ಮಾಡಿ ಯಶಸ್ವಿಯಾದರು.

ಆದರೆ ಬೆಳಗಾವಿ ಉತ್ತರದಲ್ಲಿ ಹಾಗಾಗಲಿಲ್ಲ.  ಬೆಳಗಾವಿ ಉತ್ತರದಲ್ಲಿ 33 ವಾರ್ಡ್ ಗಳ ಪೈಕಿ ಕೇವಲ 13 ಸ್ಥಾನಗಳನ್ನು ಬಿಜೆಪಿ ಗೆದ್ದಿದೆ. 20 ಸ್ಥಾನಗಳನ್ನು ಕಳೆದುಕೊಂಡಿದೆ. ಬೆಳಗಾವಿ ದಕ್ಷಿಣದಲ್ಲಿ ಬಂದ ಫಲಿತಾಂಶ ಉತ್ತರದಲ್ಲಿ ಬಂದಿಲ್ಲ.

ಇದಕ್ಕೆ ಬಿಜೆಪಿಯ ಶಾಸಕ ಅನಿಲ ಬೆನಕೆ ಸೇರಿದಂತೆ ಕೆಲವು ನಾಯಕರ ಆತ್ಮವಿಶ್ವಾಸದ ಕೊರತೆಯೇ ಕಾರಣ. ಕೆಲವು ಕಡೆಗಳಲ್ಲಿ ಬಿಜೆಪಿ ಬರುವುದಿಲ್ಲ ಎನ್ನುವ ತೀರ್ಮಾನಕ್ಕೆ ಅವರು ಮೊದಲೇ ಬಂದುಬಿಟ್ಟಿದ್ದರು. ಅವು ಎಂಇಎಸ್ ವಾರ್ಡ್ ಗಳು ಎಂದು ನಿರ್ಧರಿಸಿ ಬಿಟ್ಟಿದ್ದರು.

ಹಾಗಾಗಿ ಅಂತಹ ವಾರ್ಡ್ ಗಳಿಗೆ ಪ್ರಚಾರಕ್ಕೇ ಹೋಗಲಿಲ್ಲ. ಇದರಿಂದಾಗಿ ಬಿಜೆಪಿ ಬರಬಹುದಾಗಿದ್ದ ವಾರ್ಡ್ಗಳನ್ನೂ ಕಳೆದುಕೊಂಡಿತು. ದಕ್ಷಿಣದಂತೆ ಹೆಚ್ಚಿನ ಶ್ರಮ ವಹಿಸಿದ್ದರೆ ಇನ್ನು 4 -5 ಸ್ಥಾನಗಳನ್ನು ಬಿಜೆಪಿ ಪಡೆಯಲು ಸಾಧ್ಯವಾಗುತ್ತಿತ್ತು. ಅಭಯ ಪಾಟೀಲ ಅವರ ಟಾರ್ಗೆಟ್ 45 ಸಾಧ್ಯವಾಗುತ್ತಿತ್ತು.

ಅಭಯ ಪಾಟೀಲ ಅವರು ಬೆಳಗಾವಿ ದಕ್ಷಿಣ ಕ್ಷೇತ್ರಕ್ಕೆ ಕಾಲಿಟ್ಟಾಗಿನಿಂದಲೂ ಎಂಇಎಸ್ ಪಾಲಿಗೆ ಸ್ಲೋ ಪಾಯಿಸನ್ ಆಗಿ ಕೆಲಸ ಮಾಡುತ್ತಲೇ ಬಂದಿದ್ದಾರೆ. ಈಗ ಬಹುತೇಕ ಎಂಇಎಸ್ ಮುಗಿಸಲು ಅವರು ಯಶಸ್ವಿಯಾಗಿದ್ದಾರೆ. ಬೆಳಗಾವಿ ಮತ್ತು ಕರ್ನಾಟಕದ ಪಾಲಿಕೆ ಇದು ದೊಡ್ಡ ಜಯವೇ ಸರಿ.

ಬೆಳಗಾವಿ ದಕ್ಷಿಣದ 25ರಲ್ಲಿ 22 ವಾರ್ಡ್ ಬಿಜೆಪಿ ತೆಕ್ಕೆಗೆ ; ಪಾಲಿಕೆಗೆ ಗೆದ್ದವರ ವಿವರ ಇಲ್ಲಿದೆ

 

 

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button