Kannada NewsKarnataka NewsLatest

ಬೆಳಗಾವಿ ಸ್ಮಾರ್ಟ್ ಸಿಟಿ ಕಾಮಗಾರಿ ವಿಳಂಬಕ್ಕೆ 7 ಕಾರಣ ನೀಡಿದ ಸರಕಾರ

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ – ಬೆಳಗಾವಿ ಸ್ಮಾರ್ಟ್ ಸಿಟಿ ಯೋಜನೆ ವಿಳಂಬವಾಗಲು ಸರಕಾರ 7 ಕಾರಣಗಳನ್ನು ನೀಡಿದೆ.

ವಿಧಾನಪರಿಷತ್ತಿನಲ್ಲಿ ಮಹಾಂತೇಶ ಕವಟಗಿಮಠ ಅವರ ಪ್ರಶ್ನೆಗೆ ನಗರಾಭಿವೃದ್ಧಿ ಖಾತೆ ಸಚಿವರು ವಿವರಣೆ ನೀಡಿದ್ದಾರೆ.

ನಿಯಮಾವಳಿ ರಚನೆಗೆ ಕಾಲಾವಕಾಶ, ಸರ್ವೆ, ಪರಿಕಲ್ಪನಾ ವರದಿ, ವಿಸ್ತೃತ ಯೋಜನಾ ವರದಿ ತಯಾರಿಕೆ, ನೇಮಕಾತಿ, ಜನನಿಬಿಡ ಪ್ರದೇಶದಲ್ಲಿ ಕಾಮಗಾರಿ, ಯುಟಿಲಿಟಿ ಶಿಪ್ಟಿಂಗ್, ವಿವಿಧ ಇಲಾಖೆಗಳ ಜೊತೆ ಸಮನ್ವಯ, ನಿರಾಕ್ಷೇಪಣಾ ಪತ್ರ ಪಡೆಯಲು ವಿಳಂಬ, ನ್ಯಾಯಾಲಯದಲ್ಲಿ ವ್ಯಾಜ್ಯ, ಕೊರೋನಾ ಮತ್ತು ಅತಿಯಾದ ಮಳೆ ವಿಳಂಬಕ್ಕೆ ಕಾರಣ ಎಂದು ವಿವರಿಸಿದ್ದಾರೆ.

ಈವರೆಗೆ ಬೆಳಗಾವಿ ಸ್ಮಾರ್ಟ್ ಸಿಟಿ ಯೋಜನೆಗೆ 594 ಕೋಟಿ ರೂ. ಬಿಡುಗಡೆಯಾಗಿದ್ದು, 535.55 ಕೋಟಿ ರೂ. ವೆಚ್ಚ ಮಾಡಲಾಗಿದೆ. ಕೇಂದ್ರ ಸರಕಾರ ಯೋಜನೆಯನ್ನು 2023ರ ಜೂನ್ ತಿಂಗಳವರೆಗೆ ವಿಸ್ತರಿಸಿದೆ ಎಂದೂ ಸಚಿವರು ತಿಳಿಸಿದ್ದಾರೆ.

ಮಹಾಂತೇಶ ಕವಟಗಿಮಠ ಅವರ ಪ್ರಶ್ನೆ ಹಾಗೂ ಸಚಿವರ ಉತ್ತರ ಸಮಗ್ರ ವಿವರಕ್ಕೆ ಇಲ್ಲಿ ಕ್ಲಿಕ್ ಮಾಡಿ –  Smart City (2)

 

ಕನ್ನಡದ ಅಭಿಮಾನಕ್ಕೆ 500 ರೂ. ದಂಡ ವಿಧಿಸಿದ ಕರ್ನಾಟಕದ ಪೊಲೀಸರು!

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button