Latest

ಪ್ರಶಸ್ತಿಗಳು ಕಲಾವಿದರಿಗೆ ಸ್ಪೂರ್ತಿದಾಯಕ: ಉಮೇಶ ತೇಲಿ

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ:

ಪ್ರಶಸ್ತಿಗಳು ಕಲಾವಿದರ ಆತ್ಮ ವಿಶ್ವಾಸವನ್ನು ಹೆಚ್ಚಿಸುತ್ತವೆ. ಮತ್ತು ಇನ್ನಷ್ಟು ಸಕ್ರೀಯವಾಗಿ ರಂಗ ಸೇವೆಯಲ್ಲಿ ತಮ್ಮನ್ನು ತೊಡಗಿಸಿಕೊಳ್ಳಲು ಸ್ಪೂರ್ತಿ ನೀಡುತ್ತವೆ ಎಂದು ರಂಗ ಸಖ ಪ್ರಶಸ್ತಿ ವಿಜೇತ ಉಮೇಶ ತೇಲಿ ಹೇಳಿದರು.
 ವಿಶ್ವ ರಂಗಭೂಮಿ ದಿನಾಚರಣೆ ಅಂಗವಾಗಿ ರಂಗಸಂಪದ ಬೆಳಗಾವಿ ಹಾಗೂ ಕರ್ನಾಟಕ ನಾಟಕ ಅಕ್ಯಾಡೆಮಿ, ಬೆಂಗಳೂರು ಇವರ ಸಂಯುಕ್ತಾಶ್ರಯದಲ್ಲಿ ನಗರದ ಲೋಕಮಾನ್ಯ ರಂಗ ಮಂದಿರಲ್ಲಿ ಹಮ್ಮಿಕೊಂಡ ಕಾರ‍್ಯಕ್ರಮದಲ್ಲಿ ರಂಗ ಸಂಪದ ನೀಡುವ ೨೦೧೯ರ ರಂಗ ಸಖ ಪ್ರಶಸ್ತಿ ಸ್ವೀಕರಿಸಿ ಮಾತನಾಡುತ್ತಿದ್ದರು.
ಇಂದಿನ ದಿನಮಾನಗಳಲ್ಲಿ ಪ್ರತಿಭಾವಂತರನ್ನು ಗುರ್ತಿಸಿ ಗೌರವಿಸುವ ಸಂಸ್ಕ್ರತಿ ಕಡಿಮೆಯಾಗುತ್ತಿದ್ದು, ಇದರಿಂದಾಗಿ ನಿಜವಾಗಿ ಪ್ರತಿಭೆ ಇರುವ ಪ್ರತಿಭಾವಂತರೂ ಅವಕಾಶವಂಚಿತರಾಗುತ್ತಿರುವುದು ವಿಶಾಧನೀಯ ಸಂಗತಿ ಎಂದು ಹೇಳಿರು. 
ರಂಗ ಸಖ ಪ್ರಶಸ್ತಿಯು ನನ್ನ ಜವಾಬ್ದಾರಿಯನ್ನು ಹೆಚ್ಚಿಸಿದ್ದು, ರಂಗ ಭೂಮಿಯಲ್ಲಿ ಇನ್ನಷ್ಟು ಬದ್ಧತೆಯಿಂದ ಕೆಲಸ ಮಾಡಲು ಸ್ಪೂರ್ತಿ ನೀಡಿದೆ ಎಂದು ಅಭಿಪ್ರಾಯ ಪಟ್ಟರು.
ರಂಗ ಸಂಪದದ ಗೌರವಾಧ್ಯಕ್ಷ ಶ್ರೀಪತಿ ಮಂಜನಬೈಲ ಇವರು ವಿಶ್ವ ರಂಗಭೂಮಿ ದಿನಾಚರಣೆಯ ಸಂದೇಶ ವಾಚನ ಮಾಡುವ ಮೂಲಕ ಕಾರ‍್ಯಕ್ರಮ ಉದ್ಘಾಟಿಸಿದರು. ಕಾರ‍್ಯಕ್ರಮದಲ್ಲಿ ಉಪಸ್ಥಿತರಿದ್ದ ಡಾ. ಸರಜೂ ಕಾಟ್ಕರ ಮಾತನಾಡಿದರು.
ಇದೇ ಸಂದರ್ಭದಲ್ಲಿ ಹಿರೀಯ ರಂಗ ನಟ ಎನ್.ಕೆ.ದೇಶಪಾಂಡೆ , ಗಾಯಕಿ, ನಟಿ ನಿರ್ಮಲಾ ಪ್ರಕಾಶ , ಖ್ಯಾತ ತಬಲಾವಾದಕ ಜಿ.ಎ..ಕುಲಕರ್ಣಿ(ಬಂಡೂ ಮಾಸ್ತರ) ಇವರನ್ನು ಸತ್ಕರಿಸಲಾಯಿತು. ಸನ್ಮಾನಿತರ ಕುರಿತು ಶೀರಿಷ ಜೋಶಿ ಅಭಿನಂದನಾಪರ ಭಾಷಣ ಮಾಡಿದರು.
ಕಾರ‍್ಯಕ್ರಮದಲ್ಲಿ ರಂಗ ಸಂಪದದ ಗುರುನಾಥ ಕುಲಕರ್ಣಿ, ಜಯಶ್ರೀ ಕ್ಷೀರಸಾಗರ, ಕಟ್ಟಿ, ಪ್ರಸಾದ ಕಾರಜೋಳ,  ರಮೇಶ ಅನಗಳ ಇತರರು ಉಪಸ್ಥಿತರಿದ್ದರು.
ಸಮಾರಂಭದ ನಂತರ ಅನನ್ಯ ತಂಡ ಬೆಂಗಳೂರು ಇವರು ಅಭಿನಯಿಸಿದ ಎಸ್.ಎನ್.ಸೇತುರಾಮ ಬರೆದು ನಿರ್ದೇಶಿಸಿರುವ ಗತಿ ನಾಟಕ ಪ್ರದರ್ಶಗೊಂಡಿತು. ಪ್ರಸಾದ

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button