ಪ್ರಗತಿವಾಹಿನಿ ಸುದ್ದಿ; ಚಂಡೀಗಢ: ಪಂಜಾಬ್ ನಲ್ಲಿ ನಡೆದ ದಿಢೀರ್ ರಾಜಕೀಯ ಬೆಳವಣಿಗೆಯಲ್ಲಿ ಸಿಎಂ ಸ್ಥಾನಕ್ಕೆ ಕ್ಯಾಪ್ಟನ್ ಅಮರಿಂದರ್ ಸಿಂಗ್ ರಾಜೀನಾಮೆ ನೀಡಿದ್ದಾರೆ.
ರಾಜ್ಯಪಾಲ ಬನ್ವರಿಲಾಲ್ ಪುರೋಹಿತ್ ಅವರನ್ನು ಭೇಟಿಯಾದ ಸಿಎಂ ಅಮರಿಂದರ್ ಸಿಂಗ್ ತಮ್ಮ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ್ದಾರೆ.
ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅಮರಿಂದರ್ ಸಿಂಗ್, ಕಾಂಗ್ರೆಸ್ ಅಧ್ಯಕ್ಷರೊಂದಿಗೆ ನಾನು ಮಾತನಾಡಿದ್ದೇನೆ. ಸೋನಿಯಾ ಗಾಂಧಿಯವರು ರಾಜೀನಾಮೆ ನೀಡುವಂತೆ ಸೂಚಿಸಿದ್ದರು. ಹೈಕಮಾಂಡ್ ಸೂಚನೆ ಮೇರೆಗೆ ಸಿಎಂ ಸ್ಥಾನಕ್ಕೆ ರಾಜೀನಾಮೆ ನೀಡಿದ್ದೇನೆ. ಹೈಕಮಾಂಡ್ ಗೆ ಯಾರ ಮೇಲೆ ವಿಶ್ವಾಸವಿದೆ ಅವರನ್ನು ಸಿಎಂ ಮಾಡಲಿ ಎಂದಿದ್ದಾರೆ.
ನನಗೆ ಮಾಹಿತಿಯನ್ನೂ ನೀಡದೇ 2 ಬಾರಿ ಸಿಎಲ್ ಪಿ ಸಭೆ ನಡೆಸಿದ್ದರು. ಇತ್ತೀಚಿನ ಕೆಲ ಬೆಳವಣಿಗೆಗಳಿಂದ ನನಗೆ ಅವಮಾನವಾಗಿದೆ, ನೋವುಂಟಾಗಿದೆ. ನನ್ನ ಆಪ್ತರ ಜೊತೆ ಮಾತುಕತೆ ಬಳಿಕ ಮುಂದಿನ ನಿರ್ಧಾರ ಕೈಗೊಳ್ಳುತ್ತೇನೆ ಎಂದು ತಿಳಿಸಿದ್ದಾರೆ.
ಪಂಜಾಬ್ ಕಾಂಗ್ರೆಸ್ ಅಧ್ಯಕ್ಷರನ್ನಾಗಿ ನವಜೋತ್ ಸಿಂಗ್ ಸಿಧು ಅವರನ್ನು ನೇಮಕ ಮಾಡಲಾಗಿತ್ತು. ನವಜೋತ್ ಸಿಂಗ್ ಹಾಗೂ ಸಿಎಂ ಅಮರಿಂದರ್ ಸಿಂಗ್ ನಡುವಿನ ಕಿತ್ತಾಟವೇ ಕಾಂಗ್ರೆಸ್ ಹೈಕಮಾಂಡ್ ಸಿಎಂ ಅಮರಿಂದರ್ ಸಿಂಗ್ ರಾಜೀನಾಮೆ ಕೇಳಲು ಕಾರಣ ಎನ್ನಲಾಗಿದೆ.
ರಾಜ್ಯಸಭೆಗೆ ಭಾಸ್ಕರ್ ರಾವ್ ಸ್ಪರ್ಧೆ?
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ