Latest

ಬಿಜೆಪಿ ಶಾಸಕರನ್ನು ಸಂಪರ್ಕಿಸಿದ ಡಿಕೆಶಿ; ವಿಪಕ್ಷಗಳ ಬಗ್ಗೆ ಕೇಸರಿ ಮುಖಂಡರಿಗೆ ಬಿಎಸ್ ವೈ ಎಚ್ಚರಿಕೆ ಪಾಠ

ಮೋದಿ ಹೆಸರಲ್ಲಿ ಲೋಕಸಭೆ ಚುನಾವಣೆ ಗೆಲ್ಲೋದು ಸುಲಭ. ಆದರೆ ರಾಜ್ಯದಲ್ಲಿ ಹಾಗಾಗಲ್ಲ. ರಾಜ್ಯದಲ್ಲಿ ಕಾಂಗ್ರೆಸ್ ಎದ್ದು ಕೂತಿದೆ. ನಾವು ಎಚ್ಚೆತ್ತುಕೊಳ್ಳಬೇಕು. ವಿಧಾನಸಭೆ ಚುನಾವಣೆ ಗೆಲುವು ಅಂದುಕೊಂಡಷ್ಟು ಸುಲಭವಲ್ಲ ಎಂದು ಎಚ್ಚರಿಕೆ ಪಾಠ ಮಾಡಿದರು.

 

ಪ್ರಗತಿವಾಹಿನಿ ಸುದ್ದಿ; ದಾವಣಗೆರೆ: ಪ್ರತಿಪಕ್ಷಗಳನ್ನು ಅಷ್ಟು ಹಗುರವಾಗಿ ಪರಿಗಣಿಸುವುದು ಬೇಡ. ನಾವು ಯಾವುದೋ ಭ್ರಮೆಯಲ್ಲಿ ಇರಬಾರದು ಎಂದು ಬಿಜೆಪಿ ಮುಖಂಡರಿಗೆ ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ ಕಿವಿಮಾತು ಹೇಳಿದ್ದಾರೆ.

ದಾವಣಗೆರೆಯಲ್ಲಿ ಬಿಜೆಪಿ ಕಾರ್ಯಕಾರಿಣಿ ಸಭೆಯಲ್ಲಿ ಮಾತನಾಡಿದ ಮಾಜಿ ಸಿಎಂ ಯಡಿಯೂರಪ್ಪ, ಕಾಂಗ್ರೆಸ್ ನವರು ಬಿಜೆಪಿಯ ಕೆಲ ಶಾಸಕರನ್ನು ಸಂಪರ್ಕ ಮಾಡಿದ್ದಾರೆ. ಡಿ.ಕೆ.ಶಿವಕುಮಾರ್ ಅವರು ನಮ್ಮ ಶಾಸಕರನ್ನು ತಮ್ಮತ್ತ ಸೆಳೆಯಲು ಯತ್ನಿಸಿದ್ದಾರೆ. ಆದರೆ ಬಿಜೆಪಿಯ ಯಾರೊಬ್ಬರೂ ಕಾಂಗ್ರೆಸ್ ಗೆ ಹೋಗುವ ಪ್ರಶ್ನೆಯೇ ಇಲ್ಲ. ಡಿಕೆಶಿ ಸುಮ್ಮನೇ ಇಂತಹ ಪ್ರಯತ್ನ ಮಾಡಿ ವಿಫಲರಾಗುತ್ತಾರೆ. ಆದರೆ ಕಾಂಗ್ರೆಸ್ ನ ಕೆಲ ನಾಯಕರೇ ಬಿಜೆಪಿಗೆ ಬರಲಿದ್ದಾರೆ ಎಂದರು.

ಪ್ರತಿಪಕ್ಷಗಳು ತಮ್ಮದೇ ಆದ ಲೆಕ್ಕಾಚಾರದಲ್ಲಿ ತಂತ್ರಗಾರಿಕೆ ನಡೆಸುತ್ತಿವೆ. ಹಾಗಾಗಿ ವಿಪಕ್ಷಗಳನ್ನು ಹಗುರವಾಗಿ ಪರಿಗಣಿಸಬಾರದು. ಮೋದಿ ಹೆಸರಲ್ಲಿ ಲೋಕಸಭೆ ಚುನಾವಣೆ ಗೆಲ್ಲೋದು ಸುಲಭ. ಆದರೆ ರಾಜ್ಯದಲ್ಲಿ ಹಾಗಾಗಲ್ಲ. ರಾಜ್ಯದಲ್ಲಿ ಕಾಂಗ್ರೆಸ್ ಎದ್ದು ಕೂತಿದೆ. ನಾವು ಎಚ್ಚೆತ್ತುಕೊಳ್ಳಬೇಕು. ವಿಧಾನಸಭೆ ಚುನಾವಣೆ ಗೆಲುವು ಅಂದುಕೊಂಡಷ್ಟು ಸುಲಭವಲ್ಲ ಎಂದು ಎಚ್ಚರಿಕೆ ಪಾಠ ಮಾಡಿದರು.

Home add -Advt

ಯಡಿಯೂರಪ್ಪ ಒಬ್ಬನೇ ರಾಜ್ಯಪ್ರವಾಸವನ್ನು ಮಾಡಲ್ಲ, ಎಂಎಲ್ಸಿ, ಎಂಎಲ್ ಎಗಳು, ಕಾರ್ರ್ಯಕರ್ತರು ಕೂಡ ನಮ್ಮ ಜೊತೆ ಬರುತ್ತಾರೆ. ಯುವಮೋರ್ಚಾ ತಂಡದವರು ನಮ್ಮ ಜೊತೆ ಗಟ್ಟಿಯಾಗಿ ನಿಲ್ಲಬೇಕು. 150 ಸ್ಥಾನಗಳನ್ನು ಪ್ರಾಮಾಣಿಕವಾಗಿ ಗೆಲ್ಲಬೇಕು. ಈ ನಿಟ್ಟಿನಲ್ಲಿ ಈಗಿನಿಂದಲೇ ಪಕ್ಷ ಸಂಘಟನೆ ನಿಟ್ಟಿನಲ್ಲಿ ಕಾರ್ಯಪ್ರವೃತ್ತರಾಗಬೇಕು.

ಹಾನಗಲ್, ಸಿಂದಗಿ ಉಪಚುನಾವಣೆ ಅಷ್ಟು ಸುಲಭವಲ್ಲ. ಈ ಎರಡೂ ಕ್ಷೇತ್ರಗಳು ನಮಗೆ ಅಗ್ನಿ ಪರೀಕ್ಷೆ. ಉಪಚುನಾವಣೆ ಗೆಲ್ಲದಿದ್ದರೆ ಯಾವ ಸಂದೇಶ ರವಾನೆಯಾಗುತ್ತೆ ಎಂಬುದನ್ನು ಗಮನದಲ್ಲಿಟ್ಟುಕೊಳ್ಳಬೇಕು. ಈ ವರ್ಷವನ್ನು ಚುನಾವಣೆ ವರ್ಷ ಎಂದೇ ಪರಿಗಣಿಸಿ ಎಲ್ಲರೂ ಒಗ್ಗಟ್ಟಿನಿಂದ ಕೆಲಸ ಮಾಡಬೇಕು ಎಂದು ಬಿಎಸ್ ವೈ ಕರೆ ನೀಡಿದರು.

ಬಿಜೆಪಿ ಕಾರ್ಯಕಾರಿಣಿಯಲ್ಲಿ ಬೊಮ್ಮಾಯಿ ವಾಗ್ದಾಳಿ

Related Articles

Back to top button