Latest

ಕ್ಯಾಂಟೋನ್ಮೆಂಟ್ ಪ್ರದೇಶದಲ್ಲಿ ಮತದಾನ ಜಾಗೃತಿ ಅಭಿಯಾನ

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ

ಬೆಳಗಾವಿಯ ಕ್ಯಾಂಪ್ ಪ್ರದೇಶದಲ್ಲಿ ಮಂಗಳವಾರ ಮತದಾನ ಜಾಗ್ರತಿ ಜಾಥಾ ನಡೆಯಿತು.

ಲೋಕಸಭಾ ಚುನಾವಣೆ ೨೦೧೯ ರಲ್ಲಿ ಅತಿ ಹೆಚ್ಚಿನ ಮತದಾನವಾಗುವಂತೆ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸುವ ಉದ್ದೇಶದಿಂದ  ಜಿಲ್ಲಾ ಸ್ವೀಪ್ ಸಮಿತಿ ಹಾಗೂ ದಂಡು ಮಂಡಳಿ ವ್ಯಾಪ್ತಿಯ  ಇಂಗ್ಲಿಷ್,  ಮರಾಠಿ,  ಉರ್ದು  ಮಾಧ್ಯಮ  ಶಾಲೆಗಳ ವಿದ್ಯಾರ್ಥಿ ಮತ್ತು ಶಿಕ್ಷಕರಿಂದ ಮತದಾನ ಜಾಗೃತಿ ಜಾಥಾ ಹಮ್ಮಿಕೊಳ್ಳಲಾಗಿತ್ತು.
ಬೆಳಗಾವಿ ದಂಡು ಮಂಡಳಿ ಮುಖ್ಯ ಕಾರ್ಯನಿರ್ವಾಹಕಿ ದಿವ್ಯಾ ಎಸ್. ಹೊಸೂರ ಹಾಗೂ ಜಿಲ್ಲಾ ಸ್ವೀಪ್ ಐಕಾನ್ ರಾಘವೇಂದ್ರ ಅಣ್ವೇಕರ ಜಾಥಾ ಉದ್ಘಾಟಿಸಿದರು. 
ಈ ಸಂದರ್ಭದಲ್ಲಿ ಮಾತನಾಡಿದ ದಿವ್ಯಾ ಎಸ್. ಹೊಸೂರ, ಮತದಾನ ಪವಿತ್ರ ಕರ್ತವ್ಯವಾಗಿದ್ದು ಎಲ್ಲರೂ ತಪ್ಪದೇ ಮತದಾನ ಮಾಡಲು ಕರೆ ನೀಡಿದರು. 
ಜಾಥಾ ದಂಡು ಮಂಡಳಿ ಕಚೇರಿಯಿಂದ ಪ್ರಾರಂಭಗೊಂಡು ಇಂಡಿಪೆಂಡೆಂಟ್ ರಸ್ತೆ, ಹೈಸ್ಟ್ರೀಟ್, ಹ್ಯಾವಲೆಟ್ ರೋಡ್, ಕೊಂಡಪ್ಪ ಸ್ಟ್ರೀಟ್, ಮಾರ್ಕೆಟ್ ಸ್ಟ್ರೀಟ್, ಖಾನಾಪುರ ರಸ್ತೆ ಮಾರ್ಗವಾಗಿ ದಂಡುಮಂಡಳಿ ಕಚೇರಿ ಆವರಣದಲ್ಲಿ ಮುಕ್ತಾಯಗೊಂಡಿತು. 
ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಅಪ್ಪಾಸಾಬ ನರಟ್ಟಿ, ಮಹಾನಗರ ಪಾಲಿಕೆ ಆರೋಗ್ಯಾಧಿಕಾರಿ ನಾಡಗೌಡ, ಜಿಲ್ಲಾ ಸ್ವೀಪ್ ಸಹಾಯಕ ಅಧಿಕಾರಿ ರವಿ ಭಜಂತ್ರಿ, ಜಿಲ್ಲಾ ಅಕ್ಷರ ದಾಸೋಹ ಅಧಿಕಾರಿ ಮಿಲ್ಲಾನಟ್ಟಿ, ಜಿಲ್ಲಾ ಯುವಜನ ಸೇವಾ ಮತ್ತು  ಕ್ರೀಡಾ  ಇಲಾಖೆ  ಅಧಿಕಾರಿ ಸಿ.ಬಿ. ರಂಗಯ್ಯ,  ತಾಲೂಕು  ಯೋಜನಾಧಿಕಾರಿ ಪಿ.ಪಿ. ದೇಶಪಾಂಡೆ, ಜಿಲ್ಲಾ ಪಂಚಾಯತ ಕಚೇರಿಯ ಲೆಕ್ಕ ಅಧೀಕ್ಷಕ ಬಸನಾಳ ಹಾಗೂ ಜಿಲ್ಲಾ ಸ್ವೀಪ್ ಸಮಿತಿ ತಂಡದ ಸದಸ್ಯರು ಉಪಸ್ಥಿತರಿದ್ದರು.

 

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button