ಪ್ರಗತಿವಾಹಿನಿ ಸುದ್ದಿ, ಬೆಳಗಾವಿ – ಬೆಳಗಾವಿ ಗ್ರಾಮೀಣ ಕ್ಷೇತ್ರದ ಮುತಗಾ ಗ್ರಾಮದಲ್ಲಿ ಬೀರದೇವರ ಸಮುದಾಯ ಭವನದ ಜೀರ್ಣೋದ್ಧಾರದ ಸಲುವಾಗಿ ಶಾಸಕರ ಅನುದಾನದಲ್ಲಿ 3 ಲಕ್ಷ ರೂ, ಒದಗಿಸಲಾಗುತ್ತಿದ್ದು, ಅದರ ಮೊದಲ ಕಂತಿನ ಚೆಕ್ ನ್ನು ಶಾಸಕಿ ಲಕ್ಷ್ಮಿ ಹೆಬ್ಬಾಳಕರ್ ಶುಕ್ರವಾರ ಹಸ್ತಾಂತರಿಸಿದರು.
ಮೊದಲನೆ ಕಂತಿನಲ್ಲಿ 1.65 ಲಕ್ಷ ರೂ. ನೀಡಲಾಗಿದ್ದು, ಚೆಕ್ ನ್ನು ದೇವಸ್ಥಾನದ ಕಮೀಟಿಯವರಿಗೆ ಶಾಸಕರು ಹಸ್ತಾಂತರಿಸಿದರು.
ಈ ಸಂದರ್ಭದಲ್ಲಿ ಮೃಣಾಲ ಹೆಬ್ಬಾಳಕರ್, ಶ್ರೀ ಬೀರೇಶ್ವರ ದೇವಸ್ಥಾನದ ಕಮೀಟಿಯ ಅಧ್ಯಕ್ಷ ಲಕ್ಷ್ಮಣ ಮಲ್ಲವಗೋಳ, ಸದಸ್ಯರಾದ ಮಾರುತಿ, ರಾಯಣ್ಣ, ಭಾಗಣ್ಣ, ಭರಮಾ, ರಾಜು, ವಿಠ್ಠಲ, ಪ್ರಕಾಶ ಮುಂತಾದವರು ಉಪಸ್ಥಿತರಿದ್ದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ