Latest

ಇಸ್ಲಾಂ ವಿಚ್ಛೇದನ ವಿಚಾರ; ಹೈಕೋರ್ಟ್ ಮಹತ್ವದ ತೀರ್ಪು

ಪ್ರಗತಿವಾಹಿನಿ ಸುದ್ದಿ; ಬೆಂಗಳೂರು: ಇಸ್ಲಾಂ ಧರ್ಮದ ಪ್ರಕಾರ ವಿಚ್ಛೇದನ ನೀಡಿದರೂ ಮಹಿಳೆಗೆ ಜೀವನಾಂಶ ನೀಡಲೇಬೇಕು ಎಂದು ಹೈಕೋರ್ಟ್ ಮಹತ್ವದ ಆದೇಶ ನೀಡಿದೆ.

ಮುಸ್ಲೀಂ ಮಹಿಳೆಯೊಬ್ಬರ ಜೀವನಾಂಶ ಕುರಿತ ಸಲ್ಲಿಕೆಯಾಗಿದ್ದ ಅರ್ಜಿ ವಿಚಾರಣೆ ನಡೆಸಿದ ಹೈಕೋರ್ಟ್ ಏಕಸದಸ್ಯ ಪೀಠದ ನ್ಯಾ.ಕೃಷ್ಣ ಎಸ್ ದೀಕ್ಷಿತ್, ಈ ಮಹತ್ವದ ಆದೇಶ ನೀಡಿದ್ದಾರೆ. ಅಧೀನ ನ್ಯಾಯಾಲಯ ಪತ್ನಿಗೆ ಜೀವನಾಂಶ ನೀಡುವಂತೆ ಆದೇಶ ನೀಡಿತ್ತು. ಆದರೆ ಅದನ್ನು ಪ್ರಶ್ನಿಸಿ ಪತಿ ಎಜಾಜುರ್ ರೆಹಮಾನ್ ಹೈಕೋರ್ಟ್ ನಲ್ಲಿ ಅರ್ಜಿ ಸಲ್ಲಿಸಿದ್ದರು. ರೆಹಮಾನ್ ಅರ್ಜಿ ವಜಾಗೊಳಿಸಿದ ಹೈಕೋರ್ಟ್, ಅಧೀನ ನ್ಯಾಯಾಲಯದ ತೀರ್ಪು ಎತ್ತಿ ಹಿಡಿದಿದೆ.

ಇಸ್ಲಾಂ ಧರ್ಮದಲ್ಲಿ ಮದುವೆ ಸಂಸ್ಕಾರವಲ್ಲ, ಗಂಡು-ಹೆಣ್ಣು ಎರಡು ಕುಟುಂಬಗಳ ನಡುವೆ ನಡೆಯುವ ಒಪ್ಪಂದ. ಹಾಗಂತ ವಿಚ್ಛೇದನ ಪಡೆದ ತಕ್ಷಣ ಪತಿ ಪತ್ನಿಗೆ ನೀಡಬೇಕಿರುವ ಜೀವನಾಂಶದಿಂದ ಮುಕ್ತನಾಗಲ್ಲ. ಮೆಹರ್ ನೀಡಿದಾಕ್ಷಣ ಮಾಡಿಕೊಂಡ ಒಪ್ಪಂದ ಕೊನೆಗೊಳ್ಳುವುದಿಲ್ಲ, ನ್ಯಾಯಯುತ ಹೊಣೆಗಾರಿಕೆ ಪೂರೈಸಬೇಕಾಗುತ್ತದೆ. ವಿಚ್ಛೇಧನದಿಂದ ನಿರ್ಗತಿಕಳಾಗುವ ಮಾಜಿ ಪತ್ನಿಗೆ ಪತಿ ಜೀವನಾಂಶ ನೀಡಬೇಕು. ಈ ಬಗ್ಗೆ ಕುರಾನ್ ಹಾಗೂ ಹದೀಸ್ ನಲ್ಲಿನ ಪದ್ಯಗಳ ಸಾಲಿನಲ್ಲಿಯೂ ಹೇಳಲಾಗಿದೆ ಎಂದು ನ್ಯಾಯಾಧೀಶರು ಉಲ್ಲೇಖಿಸಿದ್ದಾರೆ.

1991ರಲ್ಲಿ ಸಾಯಿರಾಬಾನು ಎಂಬುವವರನ್ನು ವಿವಾಹವಾಗಿದ್ದ ಬೆಂಗಳೂರಿನ ಭುವನೇಶ್ವರಿ ನಗರ ನಿವಾಸಿ 8 ತಿಂಗಳ ಬಳಿಕ 5 ಸಾವಿರ ಮೆಹರ್ ನೀಡಿ ತಲಾಖ್ ನೀಡಿದ್ದ. 2002ರಲ್ಲಿ ಪತ್ನಿ ಸಾಯಿರಾಬಾನು ಪತಿಯಿಂದ ಜೀವನಾಂಶ ಕೋರಿ ಕೌಟುಂಬಿಕ ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಿದ್ದರು. ಸುದೀರ್ಘ 9 ವರ್ಷಗಳ ಕಾಲ ವಿಚಾರಣೆ ನಡೆಸಿದ್ದ ಕೌಟುಂಬಿಕ ನ್ಯಾಯಾಲಯ 2011ರ ಆಗಸ್ಟ್ 12ರಂದು ಪತ್ನಿಗೆ ತಿಂಗಳಿಗೆ 3 ಸಾವಿರ ರೂಪಾಯಿ ಜೀವನಾಂಶ ನೀಡುವಂತೆ ಆದೇಶ ನೀಡಿತ್ತು. ಜೀವನಾಂಶ ನೀಡಲು ನಿರಾಕರಿಸಿ ರೆಹಮಾನ್ ಹೈಕೋರ್ಟ್ ನಲ್ಲಿ ಅರ್ಜಿ ಸಲ್ಲಿಸಿದ್ದರು. ಇದೀಗ ರೆಹಮಾನ್ ಅರ್ಜಿ ವಜಾಗೊಳಿಸಿದ ಹೈಕೋರ್ಟ್, 25 ಸಾವಿರ ರೂಪಾಯಿ ದಂಡ ವಿಧಿಸಿದೆಯಲ್ಲದೇ ಪತ್ನಿಗೆ ಜೀವನಾಂಶ ನೀಡುವಂತೆ ತಾಕೀತು ಮಾಡಿದೆ.

1-5ನೇ ತರಗತಿ ಶಾಲೆ ಆರಂಭ; ಇಲ್ಲಿದೆ ಸುತ್ತೋಲೆ

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button