Kannada NewsKarnataka NewsLatest

ನಿರಂತರ ನೀರು ಯೋಜನೆ: ಬಸವನಕೊಳ್ಳದಲ್ಲಿ ಕುಡಿಯುವ ಶುದ್ಧ ನೀರಿನ ಘಟಕಕ್ಕೆ ಶಂಕು ಸ್ಥಾಪನೆ

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ : ಬೆಳಗಾವಿ ನಗರದ ಜನರ ಬಹು ದಿನದ ಬೇಡಿಕೆ ೨೪x೭ ನೀರು ಪೂರೈಸುವ ಯೋಜನೆಗೆ ಕರ್ನಾಟಕ ಸರ್ಕಾರವು ವಿಶ್ವ ಬ್ಯಾಂಕ್‌ನ ನೆರವಿನೊಂದಿಗೆ ಕರ್ನಾಟಕ ನಗರ ನೀರು ಸರಬರಾಜು ವಲಯ ಸುಧಾರಣಾ ಯೋಜನೆ (KUWASIP) ಯನ್ನು ಬೆಳಗಾವಿ ಮಹಾನಗರದಲ್ಲಿ ನೀರು ಪೂರೈಕೆಯಲ್ಲಿ ಸುಧಾರಣಾ ಕ್ರಮಗಳನ್ನು ಕೈಗೆತ್ತಿಕೊಂಡಿದೆ. ಈ ಯೋಜನೆಯು ೯ ಲಕ್ಷ ಜನರಿಗೆ ತಲುಪಲಿದೆ ಎಂದು ಬೆಳಗಾವಿ ಉತ್ತರ ಕ್ಷೇತ್ರದ ಶಾಸಕರಾದ ಅನಿಲ ಬೆನಕೆ ಹೇಳಿದರು.
ಬುಧವಾರ ಬೆಳಗಾವಿಯ ಸಮೀಪದ ಬಸವನಕೊಳ್ಳ ಗ್ರಾಮದಲ್ಲಿ ನೂತನವಾಗಿ ಆರಂಭಿಸಲಿರುವ ಶುದ್ಧ ಕುಡಿಯುವ ನೀರಿನ ಘಟಕದ ಶಂಕು ಸ್ಥಾಪನೆ ನೆರವೇರಿಸಿ ಅವರು ಮಾತನಾಡಿದರು.
ಬೆಳಗಾವಿ ಜನರಿಗೆ ಎಲ್ಲಾ ರೀತಿಯ ಮೂಲಭೂತ ಸೌಲಭ್ಯ ಒದಗಿಸುವ ಪ್ರಾಮಾಣ ಕ ಪ್ರಯತ್ನವನ್ನು ನಾವು ಮಾಡಿದ್ದೇವೆ. ಹಿಡಕಲ್ ಡ್ಯಾಂ ನಿಂದ ಬೆಳಗಾವಿಗೆ ೩೧ ಕೋಟಿ ವೆಚ್ಚದಲ್ಲಿ ಪೈಪ್ ಲೈನ್ ಅಳವಡಿಸುವ ಮೂಲಕ ಕಾಮಗಾರಿಯನ್ನು ಕೈಗೆತ್ತಿಕೊಳ್ಳಲಾಗಿದೆ ಅತಿ ಶೀಘ್ರದಲ್ಲಿ ಈ ಯೋಜನೆಯನ್ನು ಪೂರ್ಣಗೊಳಿಸಲಾಗುವುದು ಎಂದು ಹೇಳಿದರು.
ಈಗಾಗಲೇ 30 MLD ಗಾತ್ರದ ನೀರಿನ ಶುದ್ಧೀಕರಣ ಕೇಂದ್ರವಿದ್ದು, ಈಗ 31MLD ಕೇಂದ್ರದ ಶುದ್ಧೀಕರಣ ಘಟಕಕ್ಕೆ ಭೂಮಿ ಪೂಜೆ ನೆರವೇರಿಸಿದ್ದು ಶೀಘ್ರ ನಿರ್ಮಾಣ ಮಾಡುವ ಗುರಿಯನ್ನು ಹೊಂದಿದ್ದೇವೆ ಎಂದು ಹೇಳಿದರು.
ಶುದ್ಧ ಕುಡಿಯುವ ನೀರಿನ ಯೋಜನೆಯು ಉತ್ತಮ ಯೋಜನೆ ಆಗಿದ್ದು ಶೀಘ್ರ ಕಾಮಗಾರಿ ಪೂರ್ಣಗೊಂಡು ಬೆಳಗಾವಿಯ ಎಲ್ಲಾ ಜನರು ೨೪x೭ ಕಾಲ ನೀರಿನ ಸೌಲಭ್ಯವನ್ನು ಪಡೆಯಲಿ ಎಂದು ಆಶಿಸುತ್ತೇನೆ ಎಂದು ಸಂಸದರಾದ ಮಂಗಲಾ ಅಂಗಡಿ ಹೇಳಿದರು.
ಕೆ.ಆರ್.ಡಿ.ಎಸ್ ವ್ಯವಸ್ಥಾಪಕ ಅಭಿಯಂತರರು ಆದ ಪ್ರಭಾಕರ್ ಶೆಟ್ಟಿ ಅವರು ಮಾತನಾಡಿ ಯೋಜನೆಯ ಕುರಿತು ವಿವರಿಸಿದರು.
ಈ ಯೋಜನೆಯನ್ನು ಕರ್ನಾಟಕ ಸರ್ಕಾರವು ವಿಶ್ವ ಬ್ಯಾಂಕ್ ನ ನೆರವಿನೊಂದಿಗೆ ಕರ್ನಾಟಕ ನಗರ ನೀರು ಸರಬರಾಜು ವಲಯ ಸುಧಾರಣಾ ಯೋಜನೆಯನ್ನು ಬೆಳಗಾವಿ ಮಹಾನಗರದಲ್ಲಿ ನೀರು ಪೂರೈಕೆಯಲ್ಲಿ ಸುಧಾರಣೆಗಳನ್ನು ತರಲು ಕೈಗೆತ್ತಿಕೊಳ್ಳಲಾಗಿದೆ ಎಂದು ಹೇಳಿದರು.
ಸದರಿ ಯೋಜನೆ ಅಡಿಯಲ್ಲಿ ಪ್ರಾಯೋಗಿಕವಾಗಿ ಬೆಳಗಾವಿ ಮಹಾನಗರ ಪಾಲಿಕೆಯ ೧೦ ವಾರ್ಡ್ ಗಳಲ್ಲಿ ೨೪/೭ ನಿರಂತರ ನೀರು ಪೂರೈಸುವ ವ್ಯವಸ್ಥೆಯನ್ನು ಕಲ್ಪಿಸಲಾಗಿದೆ. ಈ ಯೋಜನೆಯಲ್ಲಿ ಇದುವರೆಗು ೧೧೩೭೮ ನೀರಿನ ಸಂಪರ್ಕವನ್ನು ನೀಡಿದ್ದು, ೧೧೭೨೪೬ ಜನರು ಯೋಜನೆಯ ಲಾಭವನ್ನು ೨೦೦೮ ರಿಂದ ಪಡೆಯುತ್ತಿದ್ದಾರೆ ಎಂದು ಹೇಳಿದರು.

ಯೋಜನೆಯ ಪ್ರಮುಖ ಲಾಭಗಳು:

ಸಗಟು ನೀರು ಸರಬರಾಜು ವ್ಯವಸ್ಥೆಯಲ್ಲಿ ಸುಧಾರಣೆಯನ್ನು ಸಾಧಿಸಲಾಗಿದೆ.ವಿತರಣಾ ವ್ಯವಸ್ಥೆಯಲ್ಲಿ  ನೀರಿನ ಪೋಲಾಗುವಿಕೆಯಲ್ಲಿ ಇಳಿಕೆ ಸಾಧಿಸಲಾಗಿದೆ. ಸದ್ಯದಲ್ಲಿ ಸದರಿ ಪ್ರಮಾಣ ಶೇ.೧೨ ರಷ್ಟು ಇರುತ್ತದೆ.
ಕಂದಾಯ ವಸೂಲಿ ಶೇ.೧೦೦ ರಷ್ಟು ಗ್ರಾಹಕರಿಗೆ ಮೀಟರ ಅಳವಡಿಸಲಾಗಿದ್ದು, W ಪ್ರಮಾಣದಲ್ಲಿ ಇಳಿಕೆಯನ್ನು ಸಾಧಿಸಲಾಗಿದೆ.ನಿಯಮಿತ ಬಿಲ್ಲುಗಳನ್ನು ವಿತರಿಸಿ ಶೇ. ೯೦ ರಷ್ಟು ನೀರಿನ ಕರ ವಸೂಲಾತಿ ಸಾಧಿಸಲಾಗಿದೆ.
ಸಾರ್ವಜನಿಕರ ಆರೋಗ್ಯ ವಿತರಣಾ ಜಾಲದಲ್ಲಿ ನಿರಂತರ ನೀರು ಸರಬರಾಜುವಿನಿಂದ ನೀರು ಕಲುಷಿತವಾಗುವ ಪ್ರಮಾಣ ಕಡಿಮೆ ಇರುವುದರಿಂದ ನೀರಿನ ಗುಣಮಟ್ಟ ಸಾಧಿಸಲಾಗಿದ್ದು, ನೀರಿನ ಮೂಲಕ ಬರುವ ರೋಗಗಳ ಹರಡುವಿಕೆ ಕಡಿಮೆಯಾಗಿ ಸಾರ್ವಜನಿಕರ ಆರೋಗ್ಯದಲ್ಲಿ ಸುಧಾರಣೆ ಕಂಡುಬಂದಿದೆ.
ವಿದ್ಯುತ್ ಶಕ್ತಿ, ನಿರ್ವಹಣೆ ಮತ್ತು ಉಸ್ತುವಾರಿ ವೆಚ್ಚವು ನಿರಂತರ ಒತ್ತಡ ಸಹಿತ ನೀರು ಸರಬರಾಜುವಿನಿಂದ ಪಂಪ್ ಬಳಿಸುವ ಅವಶ್ಯಕತೆ ಇರುವುದಿಲ್ಲ. ಕಾರಣ ಗ್ರಾಹಕರ ವಿದ್ಯುತ್ ಬಿಲ್ಲಿನಲ್ಲಿ ಶೇ.೨೦ ರಷ್ಟು ಉಳಿತಾಯ ಗಮನಿಸಲಾಗಿದೆ.
ನೀರಿನ ಬಳಕೆ ಪ್ರಮಾಣದಲ್ಲಿ ಉಳಿತಾಯದ ಪ್ರಾತ್ಯಕ್ಷಿಕ ವಲಯದ ಅನುಭವದ ಪ್ರಕಾರ ನೀರಿನ ಬಳಕೆ ಪ್ರಮಾಣ ಪ್ರತಿ ವ್ಯಕ್ತಿಗೆ ೯೦ ಲೀಟರ ದಿನಂಪ್ರತಿ ಇರುತ್ತದೆ.ಕಾರಣ ನೀರಿನ ಬಳಕೆಯ ಪ್ರಮಾಣದಲ್ಲಿ ಶೇ. ೩೨ ರಷ್ಟು ಉಳಿತಾಯ ಸಾಧಿಸಲಾಗಿದೆ.

ಕುಂದು ಕೊರತೆ :
ನೀರು ಸರಬರಾಜು ಯೋಜನೆಗೆ ಸಂಬಂಧಪಟ್ಟ ದೂರುಗಳನ್ನು ನಿರ್ವಾಹಕರು ನಿರ್ದಿಷ್ಟ ಅವಧಿಯಲ್ಲಿ ಸರಿಪಡಿಸುವದು ಗುರಿ ಇರುವುದರಿಂದ ನಿಗದಿತ ಅವಧಿಯಲ್ಲಿ ದೂರುಗಳನ್ನು ಸ್ಪಂದಿಸಲಾಗುತ್ತದೆ.
ನೀರಿನ ಗುಣಮಟ್ಟವನ್ನು ವಾರದಲ್ಲಿ ೨ ಬಾರಿ ಪರೀಕ್ಷಿಸಲಾಗುತ್ತಿದ್ದು, ತುರ್ತು ಪರಿಸ್ಥಿತಿಯಲ್ಲಿ ಗುಣಮಟ್ಟ ಕಾಪಾಡಲು ತುರ್ತು ಕ್ಲೋರಿನೇಶನ್ ಘಟಕಗಳು ಅಳವಡಿಸಲಾಗಿದೆ.
ಸದರಿ ಯೋಜನೆಯನ್ನು ಯಶಸ್ವಿಯಾಗಿ ಅನುಷ್ಠಾನಗೊಳಿಸಿದ ಹಿನ್ನೆಲೆಯಲ್ಲಿ ಕರ್ನಾಟಕ ಸರ್ಕಾರವು ಬೆಳಗಾವಿ, ಹುಬ್ಬಳ್ಳಿ- ಧಾರವಾಡ ಮತ್ತು ಕಲಬುರ್ಗಿ ಮಹಾನಗರ ಪಾಲಿಕೆಯ ಎಲ್ಲಾ ವಾರ್ಡ್ ಗಳಲ್ಲಿ ನಿರಂತರ ನೀರು ಸರಬರಾಜು ವ್ಯವಸ್ಥೆಯನ್ನು ಉನ್ನತೀಕರಿಸಿ ಜಾರಿಗೊಳಿಸಲು ಅನುಮೋದಿಸಿದೆ.
ಸದರಿ ಯೋಜನೆಯ ಯೋಜನಾ ವರದಿ ಹಾಗೂ ಹಣಕಾಸಿನ ಮಾದರಿಗೆ ಸರ್ಕಾರವು ಅನುಮೋದನೆ ನೀಡಿದೆ.

ಪ್ರಸ್ತುತ ಯೋಜನೆಯ ಉಪಯೋಗಗಳು
ಯೋಜನೆಯು ೫೮ ವಾರ್ಡ್ ಗಳಿಗೆ ನೀರು ಪೂರೈಸ ಲಾಗುವುದು ೨೦೧೧ರ ಜನಗಣತಿಯ ಪ್ರಕಾರ ೪.೮ ಲಕ್ಷ ಯೋಜನೆಯ ಸದುಪಯೋಗವನ್ನು ಪಡೆದುಕೊಳ್ಳಲಿದ್ದು ೨೦೫೩ ನೇ ಸಾಲಿನ ಜನಗಣತಿಗೆ ಹಾಕಿದ ಯೋಜನೆಯ ಪ್ರಕಾರ ೯.೬೭ ಲಕ್ಷ ಜನ ಈ ಯೋಜನೆಯ ಸದುಪಯೋಗ ಪಡೆದುಕೊಳ್ಳಲಿದ್ದಾರೆ.

ಸರದಿ ಯೋಜನೆಯನ್ನು ೨೦೫೩ನೇ ಸಾಲಿನ ಜನಸಂಖ್ಯೆಗೆ ಅನುಗುಣವಾಗಿ ತಯಾರಿಸಲಾಗಿದ್ದು ೨೦೫೩ನೆ ಹೊತ್ತಿಗೆ ೯.೬೭ ಲಕ್ಷ ಜನ ಆಗುವ ನಿರೀಕ್ಷೆ ಇದ್ದು ಸದರಿ ಜನಸಂಖ್ಯೆಗೆ ೧೮೪ ಎಂ.ಎಲ್. ಡಿ ರಷ್ಟು ನೀರಿನ ಬೇಡಿಕೆ ಇದ್ದು ಹಾಲಿ ಇರುವ ೨ ಜಲಾಶಯಗಳಿಂದ ೧೩೬ ಎಂ.ಎಲ್.ದಿ ನೀರು ಲಭ್ಯವಿರುತ್ತದೆ.
ಉಳಿದ ೪೮ ಎಂ.ಎಲ್.ಡಿ ಸಲುವಾಗಿ ಹಿಡಕಲ್ ಜಲಾಶಯದಿಂದ ಹೆಚ್ಚಿನ ನೀರನ್ನು ಹಂಚಿಕೆ ಮಾಡಲು ನೀರಾವರಿ ಇಲಾಖೆಯಿಂದ ಅನುಮೋದನೆ ಪಡೆಯಲಾಗಿದೆ.
ಮಹಾನಗರ ಪಾಲಿಕೆಯ ಆಯುಕ್ತರಾದ ರುದ್ರೇಶ ಘಾಳಿ, ಬಿಜೆಪಿ ಮುಖಂಡರಾದ ಮಹಾದೇವ ಕೆ. ರಾಠೋಡ ಮುರುಘೇಂದ್ರಗೌಡಾ ಪಾಟೀಲ, ಭೈರೇಗೌಡ ಪಾಟೀಲ, ನಗರ ಸೇವಕರಾದ* *ರಾಜಶೇಖರ ಡೋಣಿ, ಮಾಜಿ ಮೇಯರ್ ಬಸಪ್ಪ ಚಿಕ್ಕಲದಿನ್ನಿ, L&T ಕಂಪನಿಯ ಅಧಿಕಾರಿಗಳಾದ ಹರಿಕಾಂತ ದೇಸಾಯಿ, ದುರ್ಗೇಶ, ಸ್ಥಳೀಯ ಗ್ರಾಮಸ್ಥರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button