ಪ್ರಗತಿವಾಹಿನಿ ಸುದ್ದಿ, ಬೆಳಗಾವಿ – ಬೆಳಗಾವಿಯ 6 ಜನರಿಗೆ ಭಾನುವಾರ ಕೊರೋನಾ ಪತ್ತೆಯಾಗಿದೆ.
ಬೆಳಗಾವಿ ತಾಲೂಕಿನ 6 ಜನರಿಗೆ ಪಾಸಿಟಿವ್ ಬಂದಿದ್ದು, ಜಿಲ್ಲೆಯ ಬೇರೆ ಯಾವುದೇ ಭಾಗದಲ್ಲಿ ಭಾನುವಾರ ಕೊರೋನಾ ಪತ್ತೆಯಾಗಿಲ್ಲ. ಯಾವುದೇ ಸಾವು ಸಂಭವಿಸಿಲ್ಲ.
ಕಳೆದ ಸುಮಾರು ಒಂದು ತಿಂಗಳಿನಿಂದಲೂ ಕೊರೋನಾ ಪ್ರಮಾಣ ತೀವ್ರ ಇಳಿಮುಖವಾಗಿದೆ. ಪ್ರತಿದಿನ ಒಂದು ಅಥವಾ ಎರಡು ಜನರಿಗೆ ಸೋಂಕು ಪತ್ತೆಯಾಗುತ್ತಿದೆ. ಕೆಲವು ದಿನ ಜೀರೋ ಆಗಿದ್ದೂ ಇದೆ. ಭಾನುವಾರ ಜಿಲ್ಲೆಯ ಬೇರೆಲ್ಲ ತಾಲೂಕುಗಳಲ್ಲಿ ಜೀರೋ ಆಗಿದ್ದು, ಬೆಳಗಾವಿ ತಾಲೂಕಿನಲ್ಲಿ ಮಾತ್ರ 6 ಜನರಿಗೆ ಸೋಂಕು ಪತ್ತೆಯಾಗಿದೆ.
ಮಹಿಳೆಯ ಮೇಲೆ ಸ್ವಯಂ ಘೋಷಿತ ದೇವಮಾನವನ ಅಟ್ಟಹಾಸ
66 ಸಾಧಕರಿಗೆ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಪ್ರಕಟ (ಇಲ್ಲಿದೆ ಸಮಗ್ರ ಪಟ್ಟಿ)
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ