Latest

ಗೃಹ ಸಚಿವರ ಹೆಸರಲ್ಲಿ ಕೋಟ್ಯಂತರ ರೂಪಾಯಿ ವಂಚನೆ; ಆರೋಪಿ ಪೊಲೀಸ್ ಬಲೆಗೆ

ಪ್ರಗತಿವಾಹಿನಿ ಸುದ್ದಿ; ಬೆಂಗಳೂರು: ಗೃಹ ಸಚಿವ ಅರಗ ಜ್ಞಾನೇಂದ್ರ ಹೆಸರಲ್ಲಿ ಕೋಟ್ಯಂತರ ರೂಪಾಯಿ ವಂಚನೆ ಎಸಗಿದ್ದ ಆರೋಪದ ಹಿನ್ನೆಲೆಯಲ್ಲಿ ಸಿಸಿಬಿ ಪೊಲೀಸರು ಆರೋಪಿಯೊಬ್ಬನನ್ನು ಬಂಧಿಸಿದ್ದಾರೆ.

ಭವಾನಿ ರಾವ್ ಮೋರೆ ಬಂಧಿತ ಆರೋಪಿ. ರಾಜರಾಜೇಶ್ವರಿ ನಗರ ವಿಧಾನಸಭಾ ಕ್ಷೇತ್ರದ ವಿಸ್ತಾರಕನಾಗಿದ್ದ ಈತ ಡಾನ್ಸ್ ಬಾರ್ ಗಳಿಗೆ ಅನುಮತಿ ಕೊಡುಸುವುದಾಗಿ ಹೇಳಿ ಹಲವರನ್ನು ವಂಚಿಸಿದ್ದ ಎನ್ನಲಾಗಿದೆ.

ಶಿವಮೊಗ್ಗ ಮೂಲದ ಉದ್ಯಮಿ ಸುರೇಶ್ ಎಂಬುವವರಿಗೆ ಗೃಹ ಸಚಿವರ ಬಳಿ ಹೇಳಿ ಡಾನ್ಸ್ ಬಾರ್ ಗೆ ಅನುಮತಿ ಕೊಡಿಸುವುದಾಗಿ ನಂಬಿಸಿ ಕೋಟ್ಯಂತರ ರೂಪಾಯಿ ಹಣ ಪಡೆದು ಪರಾರಿಯಾಗಿದ್ದ. ಆರೋಪಿ ಭವಾನಿ ರಾವ್ ವಿರುದ್ಧ ಕಬ್ಬನ್ ಪಾರ್ಕ್ ಠಾಣೆಯಲ್ಲಿ ಎಫ್ ಐ ಆರ್ ದಾಖಲಾಗಿತು. ಆರೋಪಿ ಪತ್ತೆಗಾಗಿ ವಿಶೇಷ ಟೀಂ ರಚಿಸಿದ್ದ ಪೊಲೀಸರು ಶಿವಮೊಗ್ಗದಲ್ಲಿ ಆರೋಪಿಯನ್ನು ವಶಕ್ಕೆ ಪಡೆದಿದ್ದಾರೆ ಎಂದು ತಿಳಿದುಬಂದಿದೆ.
ಸಕ್ಕರೆ ಕಾರ್ಖಾನೆ ಪಿಲ್ಲರ್ ಕುಸಿತ; ಇಬ್ಬರ ದುರ್ಮರಣ

Home add -Advt

Related Articles

Back to top button