Kannada NewsLatest

ಕೆಎಲ್ಇ ಸಂಗೀತ ಮಹಾವಿದ್ಯಾಲಯದ ವಿದ್ಯಾರ್ಥಿನಿ ಕಾಜಲ್ ಗೆ ಬೆಸ್ಟ್ ಸಿಂಗರ್ ಅವಾರ್ಡ್

ಪ್ರಗತಿವಾಹಿನಿ ಸುದ್ದಿ; ಬೆಳಗಾವಿ: ಇತ್ತೀಚಿಗೆ ಬೆಳಗಾವಿಯ ಲೋಕಮಾನ್ಯ ಕೋ-ಆಪರೇಟಿವ್ ಸೊಸೈಟಿಯು ಮತ್ತು ರಸಿಕ ರಂಜನ ಇವರ ಸಂಯುಕ್ತಾಶ್ರಯದಲ್ಲಿ ಜರುಗಿದ ಗೋಲ್ಡನ್ ವೈಸ್ ಆಫ್ ಬೆಳಗಾವಿ -2021 ಹಳೆಯ ಹಿಂದಿ ಚಿತ್ರಗೀತೆಗಳ ಗಾಯನ ಸ್ಪರ್ಧೆಯಲ್ಲಿ ಕೆ ಎಲ್ ಇ ಸಂಗೀತ ಮಹಾವಿದ್ಯಾಲಯದ ವಿದ್ಯಾರ್ಥಿನಿ ಕುಮಾರಿ ಕಾಜಲ್ ಧಾಮನೇಕರ ಮತ್ತು ಕೆಎಲ್ಇ ವೈದ್ಯಕೀಯ ಮಹಾವಿದ್ಯಾಲಯದ ಫಾರ್ಮಸಿ ಕಾಲೇಜಿನ ವಿದ್ಯಾರ್ಥಿ ಅನಿಶ್ ಕಿತ್ತೂರ ಇವರಿಬ್ಬರಿಗೂ ಬೆಸ್ಟ್ ಫೀಮೇಲ್ ಸಿಂಗರ್ ಪ್ರಶಸ್ತಿ ಮತ್ತು ಬೆಸ್ಟ್ ಮೇಲ್ ಸಿಂಗರ್ ಪ್ರಶಸ್ತಿಗಳಿಸಿ ಸಂಸ್ಥೆಗೆ ಕೀರ್ತಿ ತಂದಿದ್ದಾರೆ.

ಈ ಗಾಯನ ಸ್ಪರ್ಧೆಯು ಆಗಸ್ಟ್ ತಿಂಗಳಿನಲ್ಲಿ ಪ್ರಾರಂಭವಾಗಿದ್ದು ಪ್ರಥಮದಲ್ಲಿ 14 ತಂಡಗಳಿದ್ದು ನಂತರ ಸೆಮಿಫೈನಲ್ ನಲ್ಲಿ 6 ತಂಡಗಳು ಹಾಗೂ ಅಂತಿಮ ಸ್ಪರ್ಧೆಯಲ್ಲಿ 4 ತಂಡಗಳಿದ್ದು, ಅಂತಿಮ ಸ್ಪರ್ಧೆಯು ನವೆಂಬರ್ 7 ರವಿವಾರದಂದು ಕೊಣವಾಲ ಗಲ್ಲಿಯ ಲೋಕಮಾನ್ಯ ಮಂದಿರದಲ್ಲಿ ಯಶಸ್ವಿಯಾಗಿ ಮುಕ್ತಾಯವಾಯಿತು. ಅಂತಿಮ ಸ್ಪರ್ಧೆಯಲ್ಲಿ ಕೆಎಲ್ಇ ತಂಡಕ್ಕೆ ಪ್ರಥಮ ಸ್ಥಾನ ಒದಗಿದ್ದು ಸಂಗೀತ ವಿಭಾಗದಿಂದ ಕುಮಾರಿ ಕಾಜಲ್ ಧಾಮ್ನೇಕರ್ ಹಾಗೂ ಕೆಎಲ್ ಇ ಫಾರ್ಮಸಿ ಕಾಲೇಜಿನಿಂದ ಕುಮಾರ ಅನಿಷ್ ಕಿತ್ತೂರ್, ಕುಮಾರಿ ಕಾಜಲ್ ಪಾಟೀಲ್ ಭಾಗವಹಿಸಿದ್ದರು. ಇವರಿಗೆಲ್ಲ ಕೆ ಎಲ್ ಇ ವಿಶ್ವವಿದ್ಯಾಲಯದ ವೈಸ್ ಚಾನ್ಸಲರ್, ರೆಜಿಸ್ಟ್ರಾರ್, ಹಾಗೂ ಸಂಗೀತ ಮಹಾವಿದ್ಯಾಲಯದ ಮುಖ್ಯಸ್ಥೆ ಹಾಗೂ ಎಲ್ಲ ಪ್ರಾಧ್ಯಾಪಕರು ಅಭಿನಂದಿಸಿದ್ದಾರೆ.
Great! – ಬೆಳಗಾವಿ ಜಿಲ್ಲಾ ಪೊಲೀಸ್ ಅಮೋಘ ಸಾಧನೆ

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button