ಪ್ರಗತಿವಾಹಿನಿ ಸುದ್ದಿ, ಕಬ್ಬೂರ – ಸಮೀಪದ ನಿಪ್ಪಾಣಿ -ಮುಧೋಳ ರಾಜ್ಯ ಹೆದ್ದಾರಿ ೧೮ರ ರಾಯಬಾಗ ತಾಲೂಕಿನ ಜಾಗನೂರ ಕ್ರಾಸ್ ಬಳಿಯಲ್ಲಿ ಅ. ೩೦ ರಂದು ಬೆಳಿಗ್ಗೆ ೮.೩೦ರ ಸುಮಾರಿಗೆ ಮೂರು ಬೈಕಗಳ ಮಧ್ಯೆ ಅಫಘಾತ ಸಂಭವಿಸಿತ್ತು.
ಈ ವೇಳೆ ಗಾಯಗೊಂಡಿದ್ದ ಓರ್ವ ಮಹಿಳೆ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಳು. ಆದರೆ ಚಿಕಿತ್ಸೆ ಫಲಕಾರಿಯಾಗದೆ ನ.೮ ರಂದು ಮೃತಪಟ್ಟಿದ್ದಾಳೆ.
ಮೃತ ಮಹಿಳೆಯು ಕಬ್ಬೂರ ಪಟ್ಟಣದ ಭವಾನಿ ನಾಗರಾಜ ಕುಂಬಾರ(೨೧). ಈಕೆ ಪತಿ ಮತ್ತು ಎರಡು ವರ್ಷದ ಮಗುವಿನೊಂದಿಗೆ ಮಹಾಲಿಂಗಪುರದ ಕಡೆಯಿಂದ ಕಬ್ಬೂರ ಕಡೆಗೆ ಬರುವಾಗ ಮುಂದೆ ಹೋಗುತ್ತಿದ್ದ ಬೈಕ್ ಸವಾರ ಸಿಗ್ನಲ್ ಕೊಡದೆ ತನ್ನ ಬೈಕನ್ನು ತಿರುಗಿಸಿದಾಗ ಈ ದುರ್ಘಟನೆ ಸಂಭವಿಸಿದೆ ಎಂದು ರಾಯಬಾಗ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.
Great! – ಬೆಳಗಾವಿ ಜಿಲ್ಲಾ ಪೊಲೀಸ್ ಅಮೋಘ ಸಾಧನೆ
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ