Kannada NewsKarnataka NewsLatest

ಎಸಿಬಿ ರಾಜ್ಯಮಟ್ಟದ ಕಾರ್ಯಾಗಾರದ ಮುಕ್ತಾಯ

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ – ಭ್ರಷ್ಟಾಚಾರ ನಿರ್ಮೂಲನ ಕಾಯ್ದೆ ಮತ್ತು ಇದಕ್ಕೆ ಸಂಬಂಧಿಸಿದ ಕಾಯ್ದೆಗಳ ಕುರಿತು ನಡೆದ ಮೂರು ದಿನಗಳ ರಾಜ್ಯ ಮಟ್ಟದ ಕಾರ್ಯಾಗಾರದ ಮುಕ್ತಾಯ ಸಮಾರಂಭ ಶುಕ್ರವಾರ ನಡೆಯಿತು.
 ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಹೈಕೋರ್ಟ್ ನ್ಯಾಯಮೂರ್ತಿ ಶಿವಶಂಕರ ಅಮರಣ್ಣವರ,  ಆಯುಧಗಳನ್ನು ಮೇಲಿಂದ ಮೇಲೆ ಹೇಗೆ ಹರಿತ ಮಾಡಲಾಗುತ್ತದೆಯೋ ಹಾಗೇ ಇಂತಹ ಕಾರ್ಯಾಗಾರಗಳಿಂದ ತನಿಖೆಯಲ್ಲಿ ಜ್ಞಾನವನ್ನು ವೃದ್ಧಿಸಿಕೊಳ್ಳಬಹುದು, ಇದರಿಂದ ತನಿಖೆಯ ಕೌಶಲ್ಯ ಉತ್ತಮಗೊಳ್ಳುತ್ತದೆ. ಭ್ರಷ್ಟಾಚಾರ ಒಂದು ಪಿಡುಗು ಇದ್ದಂತೆ. ಜನರಲ್ಲಿ ಹೆಚ್ಚಿನ ಅರಿವು ಮೂಡಿಸುವ ಮೂಲಕ ಭ್ರಷ್ಟಾಚಾರದ ಬಗ್ಗೆ ಸರ್ಕಾರಿ ಕಛೇರಿಗಳಲ್ಲಿ, ಮನೆಯಲ್ಲಿ ಮಕ್ಕಳಿಗೆ, ಕುಟುಂಬ ಸದಸ್ಯರಿಗೆ ಭ್ರಷ್ಟಾಚಾರದ ಅರಿವು ಮೂಡಿಸುವುದರ ಮೂಲಕ ತೊಲಗಿಸಬಹುದು ಎಂದರು.
 ಎಸಿಬಿ ಬೆಂಗಳೂರು ಎಸ್ಪಿ ಉಮಾ ಪ್ರಶಾಂತ ಮುಕ್ತಾಯ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು. ಕಬ್ಬು ಅಭಿವೃದ್ಧಿ ಹಾಗೂ ಸಕ್ಕರೆ ನಿರ್ದೇಶನಾಲಯದ ಆಯುಕ್ತ ಶಿವಾನಂದ ಕಲಕೇರಿ ಉಪಸ್ಥಿತರಿದ್ದರು.
  ಎಸಿಬಿ ಉತ್ತರ ವಲಯ ಎಸ್ಪಿ ಬಿ.ಎಸ್.ನೇಮಗೌಡ ಸ್ವಾಗತಿಸಿದರು. ಎಸಿಬಿ ಡಿವೈಎಸ್ಪಿ ಜೆ.ಎಂ.ಕರುಣಾಕರ ಶೆಟ್ಟಿ ವಂದನಾರ್ಪನೆ ಸಲ್ಲಿಸಿದರು.
 ಎಸಿಬಿ ಕೇಂದ್ರ ಕಛೇರಿಯ ಹಿರಿಯ ಅಧಿಕಾರಿಗಳು, ಎಸಿಬಿ ವಲಯಗಳ ಪೊಲೀಸ್ ಅಧೀಕ್ಷಕರುಗಳು, ಕರ್ನಾಟಕ ರಾಜ್ಯದ ಎಲ್ಲ ಜಿಲ್ಲೆಗಳ ಭ್ರಷ್ಟಾಚಾರ ನಿಗ್ರಹ ದಳದ ಪೊಲೀಸ್ ಉಪಾಧೀಕ್ಷಕರುಗಳು, ಪೊಲೀಸ್ ನಿರೀಕ್ಷಕರು, ಕಾನೂನು ಅಧಿಕಾರಿಗಳು ಹಾಗೂ ಸಿಬ್ಬಂದಿ  ಕಾರ್ಯಾಗಾರದಲ್ಲಿ ನೇರವಾಗಿ ಹಾಗೂ ವರ್ಚುವಲ್ ಮೂಲಕ ಭಾಗವಹಿಸಿದ್ದರು.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button