ಪ್ರಗತಿವಾಹಿನಿ ಸುದ್ದಿ; ಚೆನ್ನೈ: ಕನಸಿನಲ್ಲಿ ಬರುತ್ತಿದ್ದ ದೆವ್ವದ ಕಾಟಕ್ಕೆ ಹೆದರಿ ಪೊಲೀಸ್ ಕಾನ್ಸ್ ಟೇಬಲ್ ಓರ್ವರು ಆತ್ಮಹತ್ಯೆಗೆ ಶರಣಾಗಿರುವ ಘಟನೆ ತಮಿಳುನಾಡಿನ ಕಡಲೂರು ಜಿಲ್ಲೆಯಲ್ಲಿ ನಡೆದಿದೆ.
33 ವರ್ಷದ ಪ್ರಭಾಕರನ್ ಆತ್ಮಹತ್ಯೆ ಮಾಡಿಕೊಂಡ ಪೊಲೀಸ್. ಕಡಲೂರು ಸಶಸ್ತ್ರ ಪೊಲೀಸ್ ನಲ್ಲಿ ಕಾನ್ ಸ್ಟೇಬಲ್ ಆಗಿ ಸೇವೆ ಸಲ್ಲಿಸುತ್ತಿದ್ದ ಪ್ರಭಾಕರನ್, ವಿಷ್ಣುಪ್ರಿಯಾ ಎಂಬುವವರನ್ನು ವಿವಾಹವಾಗಿದ್ದರು, ದಂಪತಿಗೆ ಓರ್ವ ಮಗ ಹಾಗೂ ಓರ್ವ ಮಗಳು ಇದ್ದರು. ಸುಖಿ ಸಂಸಾರ ನಡೆಸುತಿದ್ದ ಪ್ರಭಾಕರನ್ ಗೆ ದೆವ್ವದ ಕನಸು ಬೀಳುತಿತ್ತು.
ಪ್ರಭಾಕರನ್ ಕನಸಿನಲ್ಲಿ ಬೆಂಕಿಯಲ್ಲಿ ಸುಟ್ಟುಹೋದ ಮಹಿಳೆಯೊಬ್ಬಳು ಕತ್ತು ಹಿಸುಕಲು ಯತ್ನಿಸುತ್ತಿದ್ದಂತೆ ಕಾಣುತ್ತಿತ್ತು. ತನಗೆ ಪದೇ ಪದೇ ಇಂತಹ ಕನಸು ಬೀಳುತ್ತಿರುವ ಬಗ್ಗೆ ಪ್ರಭಾಕರನ್ ತಮ್ಮ ಸ್ನೇಹಿತರಲ್ಲಿಯೂ ಹೇಳಿಕೊಂಡಿದ್ದರು. ಅಲ್ಲದೇ ಜ್ಯೋತಿಷಿಗಳನ್ನು ಕಂಡು ಈ ಬಗ್ಗೆ ವಿಚಾರಿಸಿದ್ದರು. ಜ್ಯೋತಿಷಿಗಳು ಇದು ಪ್ರೇತ, ಆತ್ಮದ ಕಾಟ ಎಂದು ಪೂಜೆ ಮಾಡಿಸಲು ಹೇಳಿದ್ದರು.
15 ದಿನಗಳ ಕಾಲ ರಜೆ ಪಡೆದಿದ್ದ ಪ್ರಭಾಕರನ್ ಹೆಂಡತಿ ಮಕ್ಕಳನ್ನು ಸಂಬಂಧಿಕರ ಮನೆಗೆ ಕಾರ್ಯಕ್ರಕ್ಕೆ ಕಳುಹಿಸಿ ಪೊಲೀಸ್ ಕ್ವಾರ್ಟರ್ಸ್ ನ ಕೊಠಡಿಯಲ್ಲಿ ಬೀಗ ಹಾಕಿಕೊಂಡು ವಾಸವಾಗಿದ್ದರು. ಪತ್ನಿ ಮನೆಗೆ ವಾಪಸ್ ಆಗುವಷ್ಟರಲ್ಲಿ ಫ್ಯಾನಿಗೆ ನೇಣು ಬಿಗಿದುಕೊಂಡು ಪ್ರಭಾಕರನ್ ಆತ್ಮಹತ್ಯೆಗೆ ಶರಣಾಗಿದ್ದರು. ತಕ್ಷಣ ಅವರನ್ನು ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಯಿತಾದರೂ ಅಷ್ಟರಲ್ಲಾಗಲೇ ಪ್ರಭಾಕರನ್ ಕೊನೆಯುಸಿರೆಳೆದಿದ್ದರು.
ಕನಸ್ಸಿನಲ್ಲಿ ಬರುತ್ತಿದ್ದ ದೆವ್ವದ ಭಯಕ್ಕೆ ಪ್ರಭಾಕರನ್ ಆತ್ಮಹತ್ಯೆ ಮಾಡಿಕೊಂದಿದ್ದಾಗಿ ಕಡಲೂರು ಪೊಲೀಸರು ತಿಳಿಸಿದ್ದಾರೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ