ಪ್ರಗತಿವಾಹಿನಿ ಸುದ್ದಿ; ನವದೆಹಲಿ: ಮತಾಂತರ ಮಾಡುವ ಅಗತ್ಯವಿಲ್ಲ, ಆದರೆ ಬದುಕುವ ರೀತಿ ಕಲಿಸಿಕೊಡುವ ಅಗತ್ಯವಿದೆ ಎಂದು ಆರ್ ಎಸ್ ಎಸ್ ಮುಖ್ಯಸ್ಥ ಮೋಹನ್ ಭಾಗವತ್ ತಿಳಿಸಿದ್ದಾರೆ.
ಭಾರತವನ್ನು ವಿಶ್ವಗುರುವನ್ನಾಗಿ ಮಾಡಲು ಒಗ್ಗಟ್ಟಾಗಿ ಮುನ್ನಡೆಯಬೇಕು. ನಾವು ಯಾರನ್ನೂ ಮತಾಂತರಗೊಳಿಸಬೇಕಾಗಿಲ್ಲ, ಆದರೆ ಹೇಗೆ ಬದುಕಬೇಕೆಂದು ಕಲಿಸಬೇಕು. ಇಡೀ ಜಗತ್ತಿಗೆ ಈ ಕುರಿತು ಪಾಠ ಹೇಳಲು ನಾವು ಭಾರತದಲ್ಲಿ ಹುಟ್ಟಿದ್ದೇವೆ. ನಮ್ಮ ಪಂಥ ಯಾರ ಆರಾಧನಾ ವ್ಯವಸ್ಥೆಯನ್ನು ಕೂಡ ಬದಲಾಯಿಸದೇ ಉತ್ತಮ ಮನುಷ್ಯರನ್ನು ರೂಪಿಸುತ್ತದೆ ಎಂದು ಹೇಳಿದರು.
ಗುಜರಾತ್ ನಲ್ಲಿ ಉತ್ತಮ ಉದ್ಯೋಗ ಕೊಡಿಸುವ ಆಮಿಷವೊಡ್ಡಿ ಮತಾಂತರ ಮಾಡಲಾಗಿತ್ತು. ಸುಮಾರು 35 ಕುಟುಂಬಗಳ 100 ಜನರನ್ನು ಹಣದ ಆಮಿಷವೊಡ್ದಿ ಬಲವಂತವಾಗಿ ಮತಾಂತರಗೊಳಿಸಿದ ಆರೋಪದಲ್ಲಿ 9 ಜನರನ್ನು ಬಂಧಿಸಲಾಗಿತ್ತು. ಈ ವಿಚಾರವಾಗಿ ಪ್ರತಿಕ್ರಿಯಿಸಿದ ಮೋಹನ್ ಭಾಗವತ್, ಒಗ್ಗಟ್ಟಿನಿಂದ ಎಲ್ಲರೂ ಭಾರತವನ್ನು ವಿಶ್ವದ ನಾಯಕನನ್ನಾಗಿ ಮಾಡಬೇಕಿದೆ. ಇಡೀ ಜಗತ್ತೇ ಒಂದು ಕುಟುಂಬ ಎಂದು ನಂಬುವವರು ಮತಾಂತರದ ಬಗ್ಗೆ ಯೋಚಿಸಲಾರರು ಎಂದು ಹೇಳಿದರು.
ಜಗತ್ತಿಗೆ ಯಾವ ರೀತಿ ಆದರ್ಶವಾಗಿ ಬದುಕಬ್ಕು ಎಂದು ತಿಳಿಸಲು ನಾವು ಭಾರತಲ್ಲಿ ಹುಟ್ಟಿದ್ದೇವೆ. ಯಾರ ಪೂಜಾ ಪದ್ಧತಿಯನ್ನೂ ಬದಲಿಸದೇ ಒಳ್ಳೆಯ ಮನುಷ್ಯರಾಗಿ ಬದುಕುವುದನ್ನು ತಿಳಿಸಬೇಕಿದೆ ಎಂದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ