ಪ್ರಗತಿವಾಹಿನಿ ಸುದ್ದಿ; ಅಹಮದಾಬಾದ್: ಗುಟ್ಕಾ ವಿತರಕರ ಮೇಲೆ ನಡೆದ ಐಟಿ ದಾಳಿ ವೇಳೆ 100 ಕೋಟಿಗೂ ಹೆಚ್ಚು ಆದಾಯ ಮೀರಿದ ಆಸ್ತಿ ಪತ್ತೆಯಾಗಿರುವ ಘಟನೆ ಗುಜರಾತ್ ನಲ್ಲಿ ನಡೆದಿದೆ.
ಅಹಮದಾಬಾದ್ ನ ಗುಟ್ಕಾ ವಿತರಕರ 15 ಸ್ಥಳಗಳಲ್ಲಿ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ಶೋಧ ನಡೆಸಿದ್ದು, ದಾಳಿ ವೇಳೆ 7.5 ಕೋಟಿ ಮೌಲ್ಯದ ನಗದು, 4 ಕೋಟಿ ಮೌಲ್ಯದ ಚಿನ್ನಾಭರಣ, 30 ಕೋಟಿಯಷ್ಟು ಅಘೋಷಿತ ಆದಾಯ ವಶಕ್ಕೆ ಪಡೆಯಲಾಗಿದೆ ಎಂದು ಸರ್ಕಾರ ಹೇಳಿಕೆ ಬಿಡುಗಡೆ ಮಾಡಿದೆ.
ಆದರೆ ಅಘೋಷಿತ ಆಸ್ತಿ ಹೊಂದಿದ್ದವರ ಹೆಸರನ್ನು ಮಾತ್ರ ಬಹಿರಂಗಪಡಿಸಿಲ್ಲ. ಐಟಿ ಶೋಧದ ಕ್ರಮವು ಇಲ್ಲಿಯವರೆಗೆ 100 ಕೋಟಿಗೂ ಹೆಚ್ಚು ಲೆಕ್ಕವಿಲ್ಲದ ಆದಾಯವನ್ನು ಪತ್ತೆ ಹಚ್ಚಿದೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.
ಬೆಳಗಾವಿಯಲ್ಲಿ ಮೂವರು ಅಧಿಕಾರಿಗಳಿಗೆ ಎಸಿಬಿ ಶಾಕ್
ಚಿನ್ನ, ಬೆಳ್ಳಿ ಖರೀದಿಸಬೇಕೆ? ಇಲ್ಲಿದೆ ಗುಡ್ ನ್ಯೂಸ್
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ