Kannada NewsKarnataka NewsLatest

`ಪ್ರಗತಿ ಮೀಡಿಯಾ ಹೌಸ್’ ನಿಂದ ಮತ್ತೊಂದು ಕೊಡುಗೆ: ಇಂಗ್ಲೀಷ್ ನ್ಯೂಸ್ ಪೋರ್ಟಲ್ ಆರಂಭ

ಭಾನುವಾರ ಸಾಂಕೇತಿಕವಾಗಿ ಉದ್ಘಾಟನೆ

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ – ಕೇವಲ ಎರಡೂವರೆ ವರ್ಷದಲ್ಲಿ ಮಾಧ್ಯಮ ನಿರ್ವಹಣೆಯಲ್ಲಿ (Media Management) ವಿಶ್ವಾಸಗಳಿಸಿರುವ ಪ್ರಗತಿ ಮೀಡಿಯಾ ಹೌಸ್, ಕನ್ನಡ ನ್ಯೂಸ್ ಪೋರ್ಟಲ್  http://Pragativahini.com  ಜೊತೆಗೆ ಇದೀಗ http://pragativahini.in ಎನ್ನುವ ಇಂಗ್ಲೀಷ್ ನ್ಯೂಸ್ ಪೋರ್ಟಲ್ ಆರಂಭಿಸಿದೆ.

ಭಾನುವಾರ (ನವೆಂಬರ್ 28, 2021) ನೂತನ ನ್ಯೂಸ್ ಪೋರ್ಟಲ್ ಲೋಕಾರ್ಪಣೆಯಾಗಿದೆ.

ನವೆಂಬರ್ 21, 2018ರಂದು ಪ್ರಗತಿವಾಹಿನಿ ಸುದ್ದಿ ವಾಹಿನಿ ಆರಂಭಗೊಂಡಿದೆ. ಮೇ 7, 2019ರಂದು ಪ್ರಗತಿ ಮೀಡಿಯಾ ಹೌಸ್ ಉದ್ಘಾಟನೆಯಾಗಿದೆ. (ಮಾಧ್ಯಮ ಲೋಕದಲ್ಲೊಂದು ಹೊಸ ಮೈಲಿಗಲ್ಲು: ಪ್ರಗತಿ ಮೀಡಿಯಾ ಹೌಸ್ ಉದ್ಘಾಟನೆ)

ಪ್ರಗತಿವಾಹಿನಿ ಹಾಗೂ ಪ್ರಗತಿ ಮೀಡಿಯಾ ಹೌಸ್ ಎರಡೂ ಅತ್ಯಂತ ಕಡಿಮೆ ಅವಧಿಯಲ್ಲಿ ಜನರ ವಿಶ್ವಾಸಕ್ಕೆ ಪಾತ್ರವಾಗಿದ್ದು, ಕಾರ್ಯಕ್ಷೇತ್ರ ವಿಸ್ತರಿಸುತ್ತ ಮುನ್ನಡೆದಿವೆ. ಪ್ರಗತಿವಾಹಿನಿ ಕಳೆದ 3 ವರ್ಷದಲ್ಲಿ ಒಂದೇ ಒಂದು ದಿನವೂ ತಪ್ಪದೆ ನಿರಂತರವಾಗಿ ಓದುಗರಿಗೆ ಸ್ಥಳೀಯ, ರಾಜ್ಯ, ದೇಶ, ವಿದೇಶಗಳ ಸುದ್ದಿ, ಲೇಖನಗಳನ್ನು ಹಂಚುತ್ತ ಬಂದಿದೆ. ತನ್ಮೂಲಕ, ಅಲ್ಪಾವಧಿಯಲ್ಲೇ ಮುಂಚೂಣಿ ಮಾಧ್ಯಮಗಳ ಸಾಲಿಗೆ ಸೇರ್ಪಡೆಯಾಗಿದೆ.

Home add -Advt

ಇದೀಗ ಇಂಗ್ಲೀಷ್ ವೆಬ್ ಸೈಟ್ ಆರಂಭವಾಗಿದ್ದು, ಓದುಗರು ತಮ್ಮ ಎಂದಿನ ಪ್ರೀತಿ, ಪ್ರೋತ್ಸಾಹದೊಂದಿಗೆ ಸ್ವಾಗತಿಸಬೇಕೆನ್ನುವ ಬಿನ್ನಹ.

ಇಂಗ್ಲೀಷ್ ನ್ಯೂಸ್ ಪೋರ್ಟಲ್ ಲಿಂಕ್ – http://pragativahini.in

Related Articles

Back to top button