ಪ್ರಗತಿವಾಹಿನಿ ಸುದ್ದಿ; ಬೆಳಗಾವಿ: ರಾಜ್ಯದಲ್ಲಿ ನೂತನವಾಗಿ ಅಸ್ಥಿತ್ವಕ್ಕೆ ಬಂದಿರುವ ಕರ್ನಾಟಕ ರಾಜ್ಯ ರೆಡ್ಡಿ ನೌಕರರ ಕ್ಷೇಮಾಭಿವೃದ್ಧಿ ಸಂಘವು ಡಿಸೆಂಬರ್ ಕೊನೆಯ ವಾರದಲ್ಲಿ ಸಮಾಜದ ನೌಕರರ ಸದಸ್ಯತ್ವ ಅಭಿಯಾನ ನಡೆಯಲಿದೆ.
ಸಂಘದ ರಾಜ್ಯಾಧ್ಯಕ್ಷ ಎಸ್. ಬಿ. ಮಾಚಾ ಪತ್ರಿಕಾ ಪ್ರಕಟಣೆಯಲ್ಲಿ ಈ ವಿಷಯ ತಿಳಿಸಿದ್ದು, ಈಗಾಗಲೇ ಸಂಘದ ಪದಾಧಿಕಾರಿಗಳ ಆಯ್ಕೆ ಪ್ರಕ್ರಿಯೆ ಮುಗಿದಿದೆ ಶೇಖರಪ್ಪ ಗಿರಡ್ಡಿ ಪ್ರಧಾನ ಕಾರ್ಯದರ್ಶಿ ಹಾಗೂ ನವೀನ ಜಲರಡ್ಡಿ ಖಜಾಂಚಿಯಾಗಿರುತ್ತಾರೆ. ಒಟ್ಟು 19 ಜನರ ನಿರ್ದೇಶಕ ಮಂಡಳಿ ರಚನೆಯಾಗಿದೆ ಎಂದು ತಿಳಿಸಿದ್ದಾರೆ.
ಬೆಳಗಾವಿ ಜಿಲ್ಲಾ ಘಟಕದ ಪದಾಧಿಕಾರಿಗಳ ಆಯ್ಕೆಯ ಸಂಪೂರ್ಣ ಜವಾಬ್ದಾರಿಯನ್ನು ಜಿಲ್ಲೆ ಪ್ರತಿನಿಧಿಸುವ ನಿರ್ದೇಶಕರು ಮತ್ತು ಸಹ ಕಾರ್ಯದರ್ಶಿಗಳಾದ ಶ್ರೀಕಾಂತ ಯರಡ್ಡಿಯವರು ವಹಿಸಿಕೊಳ್ಳಲಿದ್ದಾರೆ. ರೆಡ್ಡಿ ಸಮುದಾಯದ ನೌಕರರು ಮತ್ತು ಅಧಿಕಾರಿ ವರ್ಗದವರು ಸಂಘದಲ್ಲಿ ಸದಸ್ಯತ್ವ ಪಡೆಯಬಹುದು. ನಂತರ ಜಿಲ್ಲಾ ಹಾಗೂ ತಾಲೂಕು ಸಮಿತಿಗಳನ್ನು ರಚಿಸಲಾಗುವುದು. ಡಿಸೆಂಬರ್ ನಂತರ ರಾಜ್ಯ ಸಂಘದ ಉದ್ಘಾಟನೆ ಕಾರ್ಯಕ್ರಮ ಬೆಂಗಳೂರಿನಲ್ಲಿ ಜರುಗಲಿದೆ ಎಂದು ಮಾಚಾ ತಿಳಿಸಿದ್ದಾರೆ.
ರೆಡ್ಡಿ ನೌಕರರ ಹಿತಚಿಂತನೆ, ಕೆರಿಯರ್ ಗೈಡನ್ಸ್ ಸೆಲ್, ಆರ್ಥಿಕವಾಗಿ ಹಿಂದುಳಿದ ಸಮಾಜದ ಪ್ರತಿಭಾವಂತ ವಿದ್ಯಾರ್ಥಿಗಳ ಶೈಕ್ಷಣಿಕ ದತ್ತು ಯೋಜನೆ, ನಿವೃತ್ತ ನೌಕರರ ಸನ್ಮಾನ, ಪ್ರತಿಭಾನ್ವಿತ 50 ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ ನೀಡುವುದು ಸೇರಿದಂತೆ ಹಲವಾರು ಯೋಜನೆಗಳನ್ನು ರೂಪಿಸಿ ಜಾರಿಗೊಳಿಸಲು ಸಂಘ ಉದ್ದೇಶಿಸಿದೆ ಎಂದು ಅಧ್ಯಕ್ಷ ಎಸ್.ಬಿ. ಮಾಚಾ ತಿಳಿಸಿದ್ದಾರೆ.
ಬೆಳಗಾವಿ ದಂತ ವೈದ್ಯಕೀಯ ಕಾಲೇಜಿಗೂ ಕಾಲಿಟ್ಟ ಕೊರೊನಾ ಸೋಂಕು
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ