ಪ್ರಗತಿವಾಹಿನಿ ಸುದ್ದಿ; ಬೆಳಗಾವಿ: ಬಿಜೆಪಿಯವರಿಗೆ ಸಮಾಜ, ಧರ್ಮಗಳನ್ನು ಒಡೆಯುವುದೊಂದೆ ಕೆಲಸ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ್ ಜಾರಕಿಹೊಳಿ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
ಖಾನಾಪುರ ಶಾಸಕಿ ಅಂಜಲಿ ನಿಂಬಾಳ್ಕರ್ ಸಂಘರ್ಷ ಪಾದಯಾತ್ರೆಯಲ್ಲಿ ಪಾಲ್ಗೊಂಡು ಅವರು ಮಾತನಾಡಿ, ಮತಾಂತರ ನಿಷೇಧ ಕಾಯ್ದೆಯನ್ನು ಹೊಸದಾಗಿ ಯಾವ ರೀತಿ ತರುತ್ತಾರೆಂದು ಗೊತ್ತಿಲ್ಲ. ಬಿಜೆಪಿಯವರಿಗೆ ಅಭಿವೃದ್ಧಿಯಿಂದ ಗೆಲ್ಲುವ ಶಕ್ತಿಯೂ ಇಲ್ಲ. ದುರದೃಷ್ಟಿಯೂ ಇಲ್ಲ ಎಂದು ಕಿಡಿಕಾರಿದರು.
ಬಿಜೆಪಿಯವರು ಆರು ತಿಂಗಳಿಗೊಂದು ಹೊಸ ಕಾಯ್ದೆ ತರುತ್ತಾರೆ. ಈಗಾಗಲೇ ಮತಾಂತರ ಕಾಯ್ದೆ ಜಾರಿಯಲ್ಲಿದೆ. ಮತ್ತೆ ಇದನ್ನು ಜಾರಿಗೆ ತರುವ ಅವಶ್ಯಕತೆ ಇಲ್ಲ. ಇದರಿಂದ ಜನರನ್ನು ಗೊಂದಲಕ್ಕೀಡು ಮಾಡುವ ಕೆಲಸ ಮಾಡುತ್ತದೆ. ಆದರೆ ಜನರು ಇದನ್ನು ಗಂಭೀರವಾಗಿ ಪರಿಗಣಿಸುವ ಅವಶ್ಯಕತೆ ಇಲ್ಲ ಎಂದರು.
ಕೇಂದ್ರದಲ್ಲಿ ಮೂರು ಕೃಷಿ ತಿದ್ದುಪಡಿ ಕಾಯ್ದೆಗಳನ್ನು ವಾಪಸ್ ಪಡೆದುಕೊಂಡ ಮೇಲೆ ಇವರು ತೆಗೆಯಲಿ ಬಿಡಲಿ. ತನ್ನಿಂದ ತಾನೇ ಅವುಗಳು ರದ್ಧಾಗುತ್ತವೆ. ಕೇಂದ್ರದಲ್ಲಿ ವಾಪಸ್ ಪಡೆದುಕೊಂಡ ಮೇಲೆ ರಾಜ್ಯದಲ್ಲಿ ಜಾರಿಗೆ ತರಲು ಯಾವುದೇ ಅಧಿಕಾರ ಇಲ್ಲ ಎಂದಿದ್ದಾರೆ. ಇನ್ನೂ ಸದನದಲ್ಲಿ ನೆರೆ ಪರಿಹಾರದ ಬಗ್ಗೆ ಈ ಭಾಗದ ಎಲ್ಲ ಶಾಸಕರೂ ಪಕ್ಷಾತೀತವಾಗಿ ಅಧಿವೇಶನದಲ್ಲಿ ಚರ್ಚೆ ಮಾಡುತ್ತೇವೆ ಎಂದು ಸ್ಪಷ್ಟ ಪಡಿಸಿದರು.
ಸಂಘರ್ಷ ಪಾದಯಾತ್ರೆಗೆ ಸಿದ್ದರಾಮಯ್ಯ, ಸತೀಶ್ ಜಾರಕಿಹೊಳಿ ಸಾಥ್
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ