Latest

ವಿಧಾನ ಪರಿಷತ್ ಚುನಾವಣೆ: ರಾಜ್ಯದ ಸಮಗ್ರ ಫಲಿತಾಂಶ, ಗಣ್ಯರ ಪ್ರತಿಕ್ರಿಯೆ

ಪ್ರಗತಿವಾಹಿನಿ ಸುದ್ದಿ, ಬೆಂಗಳೂರು – ರಾಜ್ಯದಲ್ಲಿ ತೀವ್ರ ಕುತೂಹಲ ಮೂಡಿಸಿದ್ದಂತ 25 ಕ್ಷೇತ್ರಗಳ ವಿಧಾನಪರಿಷತ್ ಚುನಾವಣೆಯ ಬಹುತೇಕ ಫಲಿತಾಂಶ ಹೊರ ಬಿದ್ದಿದೆ. 25 ಕ್ಷೇತ್ರಗಳಲ್ಲಿ ಬಿಜೆಪಿ 12 ಕ್ಷೇತ್ರಗಳಲ್ಲಿ ಗೆಲುವು ಸಾಧಿಸಿದ್ದರೆ, ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು 11 ಕ್ಷೇತ್ರಗಳಲ್ಲಿ ಗೆಲುವು ಸಾಧಿಸಿದ್ದಾರೆ. ಜೆಡಿಎಸ್ ಮತ್ತು ಪಕ್ಷೇತರ ಅಭ್ಯರ್ಥಿ ಒಂದೊಂದು ಕ್ಷೇತ್ರದಲ್ಲಿ ಸಾಧಿಸಿದ್ದಾರೆ.

ಡಿಸೆಂಬರ್ 10, 2021ರಂದು ನಡೆದಂತ 25 ಕ್ಷೇತ್ರಗಳ ವಿಧಾನಸಭಾ ಚುನಾವಣೆಯ ಮತಎಣಿಕೆ ಕಾರ್ಯ ಇಂದು ನಡೆಯಿತು. ಈ ಚುನಾವಣೆಯಲ್ಲಿ ಕಾಂಗ್ರೆಸ್ ಮತ್ತು ಬಿಜೆಪಿ ನಡುವೆ ತೀವ್ರ ಪೈಪೋಟಿ ಉಂಟಾಗಿತ್ತು. ಇದರ ನಡುವೆಯೂ ಪರಿಷತ್ ಕದನದ ಬಿಗ್ ಪೈಟ್ ಫಲಿತಾಂಶ ಹೊರ ಬಿದ್ದಿದೆ.

ಕುತೂಹಲ ಮೂಡಿಸಿದ್ದಂತ ಶಿವಮೊಗ್ಗದಲ್ಲಿ ಮೊದಲ ಬಾರಿಗೆ ಡಿ.ಹೆಚ್ ಶಂಕರ್ ಮೂರ್ತಿಯವರ ಪುತ್ರ ಡಿ.ಎಸ್ ಅರುಣ್ ಗೆಲುವು ಸಾಧಿಸಿದ್ದರೇ, ಬೆಳಗಾವಿಯಲ್ಲಿ ಲಕ್ಷ್ಮೀ ಹೆಬ್ಬಾಳ್ಕರ್ ಅವರ ಸಹೋದರ ಚನ್ನರಾಜ ಹಟ್ಟಿಹೊಳಿ ಗೆಲುವು ಸಾಧಿಸಿದ್ದಾರೆ. ಹಾಗಾದ್ರೆ ಯಾವ ಕ್ಷೇತ್ರದಲ್ಲಿ ಯಾರು ಸೋಲು ಎನ್ನುವ ಬಗ್ಗೆ ಸಂಪೂರ್ಣ ಪಟ್ಟಿ ಈ ಕೆಳಗಿನಂತಿದೆ.

ವಿಧಾನಪರಿಷತ್ ಚುನಾವಣೆಯಲ್ಲಿ ಗೆದ್ದ ಕಾಂಗ್ರೆಸ್ ಅಭ್ಯರ್ಥಿಗಳ ಪಟ್ಟಿ

ಬೆಳಗಾವಿ – ಚನ್ನರಾಜ ಹಟ್ಟಿಹೊಳಿ
ಮಂಡ್ಯ ಕ್ಷೇತ್ರ – ದಿನೇಶ್ ಗೂಳಿಗೌಡ ಗೆಲುವು
ಧಾರವಾಡ – ಗದಗ ಹಾವೇರಿ ಕ್ಷೇತ್ರ –  ಸಲೀಂ ಅಹ್ಮದ್ ಗೆಲುವು
ರಾಯಚೂರು ಕ್ಷೇತ್ರ – ಶರಣಗೌಡ ಪಾಟೀಲ್ ಗೆಲುವು
ಬೀದರ್ ಕ್ಷೇತ್ರ –  ಭೀಮರಾವ್ ಪಾಟೀಲ್ ಗೆಲುವು
ಬೆಂಗಳೂರು ಗ್ರಾಮಾಂತರ ಕ್ಷೇತ್ರ –  ಎಸ್ ರವಿ ಗೆಲುವು
ಮೈಸೂರು-ಚಾಮರಾಜನಗರ ಕ್ಷೇತ್ರ –  ಡಾ.ಡಿ.ತಿಮ್ಮಯ್ಯ ಗೆಲುವು
ಕೋಲಾರ- ಚಿಕ್ಕಬಳ್ಳಾಪುರ ಕ್ಷೇತ್ರ – ಎಂ ಎಲ್ ಅನೀಲ್ ಕುಮಾರ್ ಗೆಲುವು
ದಕ್ಷಿಣ ಕನ್ನಡ ಉಡುಪಿ ಕ್ಷೇತ್ರ – ಮಂಜುನಾಥ್ ಬಂಢಾರಿ ಗೆಲುವು
ತುಮಕೂರು ಕ್ಷೇತ್ರ – ರಾಜೇಂದ್ರ ಗೆಲುವು
ಕೋಲಾರ – ಚಿಕ್ಕಬಳ್ಳಾಪುರ ಕ್ಷೇತ್ರ – ಎಂ ಎಲ್ ಅನೀಲ್ ಕುಮಾರ್ ಗೆಲುವು

ವಿಧಾನಪರಿಷತ್ ಚುನಾವಣೆಯಲ್ಲಿ ಗೆದ್ದ ಬಿಜೆಪಿ ಅಭ್ಯರ್ಥಿಗಳ ಪಟ್ಟಿ

ದಕ್ಷಿಣ ಕನ್ನಡ – ಉಡುಪಿ ಕ್ಷೇತ್ರದಿಂದ ಕೋಟಾ ಶ್ರೀನಿವಾಸ್ ಪೂಜಾರಿ ಗೆಲುವು
ಧಾರವಾಡ ಗದಗ ಹಾವೇರಿ ಕ್ಷೇತ್ರ – ಪ್ರದೀಶ್ ಶೆಟ್ಟರ್ ಗೆಲುವು
ಕೊಡಗು ಕ್ಷೇತ್ರ – ಸುಜಾ ಕುಶಾಲಪ್ಪ ಗೆಲುವು
ಬೆಂಗಳೂರು ನಗರ ಕ್ಷೇತ್ರ – ಹೆಚ್ ಎಸ್ ಗೋಪಿನಾಥ ರೆಡ್ಡಿ ಗೆಲುವು
ಉತ್ತರ ಕನ್ನಡ ಕ್ಷೇತ್ರ – ಗಣಪತಿ ಉಳ್ವೇಕರ್ ಗೆಲುವು
ಚಿತ್ರದುರ್ಗ – ದಾವಣಗೆರೆ – ಕೆ ಎಸ್ ನವೀನ್ ಗೆಲುವು
ವಿಜಯಪುರ -ಬಾಗಲಕೋಟೆ ಕ್ಷೇತ್ರ – ಪಿ ಹೆಚ್ ಪೂಜಾರ್ ಗೆಲುವು
ಚಿಕ್ಕಮಗಳೂರು ಕ್ಷೇತ್ರ – ಎಂ.ಕೆ.ಪ್ರಾಣೇಶ್
ಕಲಬುರ್ಗಿ ಕ್ಷೇತ್ರ – ಬಿ.ಜಿ.ಪಾಟೀಲ್ ಗೆಲುವು
ಬಳ್ಳಾರಿ ಕ್ಷೇತ್ರ – ವೈ ಎಂ ಸತೀಶ್ ಗೆಲುವು
ಶಿವಮೊಗ್ಗ ಕ್ಷೇತ್ರ – ಡಿಎಸ್ ಅರುಣ್ ಗೆಲುವು

ಹಾಸನ ಕ್ಷೇತ್ರ – ಸೂರಜ್ ರೇವಣ್ಣ ಗೆಲುವು(ಜೆಡಿಎಸ್)
ಬೆಳಗಾವಿ – ಲಖನ್ ಜಾರಕಿಹೊಳಿ (ಪಕ್ಷೇತರ)

2023ರ ವಿಧಾನಸಭೆ ಚುನಾವಣೆಯೇ ನಮ್ಮ ಗುರಿ. ಈಗಲೂ ನಾನು ಅದನ್ನೇ ಹೇಳುತ್ತೇನೆ. ಜೊತೆಗೆ ಈ ನಿಟ್ಟಿನಲ್ಲಿ ನಮ್ಮ ತಯಾರಿ ನಡೆದಿದೆ. ಆದರೂ ಈ ಚುನಾವಣೆಯಲ್ಲಿ ಪ್ರಯತ್ನ ಮಾಡಿದ್ದೇವೆ. ದೊಡ್ಡ ಪಕ್ಷಗಳ ಹಣ ಹಂಚಿಕೆ ನಡುವೆ ನಾವು ಹಿಂದೆ ಬಿದ್ದಿದ್ದೇವೆ ಎಂದು ರಾಷ್ಟ್ರೀಯ ಪಕ್ಷಗಳ ವಿರುದ್ಧ  ಮಾಜಿ ಮುಖ್ಯ ಮಂತ್ರಿ ಕುಮಾರ ಸ್ವಾಮಿ ಆರೋಪಿಸಿದ್ದಾರೆ.

ಚುನಾವಣೆ ಎಂದರೆ ಸೋಲು-ಗೆಲುವು ಸಹಜ. ಗೆಲುವಿಗಾಗಿ ನಮ್ಮ ಪಕ್ಷದ ಮುಖಂಡರು, ಕಾರ್ಯಕರ್ತರು ಪ್ರಾಮಾಣಿಕವಾಗಿ ಶ್ರಮಿಸಿದ್ದಾರೆ. ಅವರೇ ನಮ್ಮ ಶಕ್ತಿ. ಅವರೆಲ್ಲರಿಗೂ ನನ್ನ ಕೃತಜ್ಞತೆಗಳು. ಇನ್ನೂ ಮುಂದೆ ಪಕ್ಷ ಸಂಘಟನೆಗೆ ಹೆಚ್ಚು ಒತ್ತು ನೀಡುತ್ತಿದ್ದೇವೆ. ಹಣಬಲದಿಂದ ಎದುರಾಗುವ ಇಂಥ ಸೋಲುಗಳಿಗೆ ಜೆಡಿಎಸ್ ಎಂದಿಗೂ ಧೃತಿಗೆಡುವುದಿಲ್ಲ ಎಂದು ಅಭಿಮತ ವ್ಯಕ್ತಪಡಿಸಿದರು.

ಈ ಚುನಾವಣೆಯಲ್ಲಿ ಸ್ಥಳೀಯ ಸಂಸ್ಥೆಗಳ ಪ್ರತಿನಿಧಿಗಳು ಮತದಾರರಾಗಿದ್ದರು. ಆದ್ದರಿಂದ ಜೆಡಿಎಸ್ ಸೋಲು ಅನುಭವಿಸಿದೆ. ಆದರೆ ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಜನರೇ ನೇರವಾಗಿ ಹಕ್ಕು ಚಲಾಯಿಸುವುದರಿಂದ ಜೆಡಿಎಸ್ ಶಕ್ತಿ ಏನೆಂಬುದು ತಿಳಿಯಲಿದೆ. ಪಕ್ಷ ಮತ್ತೆ ಅಧಿಕಾರಕ್ಕೆ ಬರಲಿದೆ. ಜನರಲ್ಲಿ ಜೆಡಿಎಸ್ ಬಗೆಗಿನ ವಿಶ್ವಾಸವನ್ನು ಅಳಿಸಲಾಗದು ಎಂದ ಅವರು ಜಯ ಗಳಿಸಿದ ಎಲ್ಲ ಪಕ್ಷದ ಅಭ್ಯರ್ಥಿಗಳಿಗೂ ಶುಭ ಕೋರಿದರು.

ಪರಿಷತ್ ಫಲಿತಾಂಶ ಸಮಾಧಾನ ತಂದಿದೆ. ನಮ್ಮ ಪಕ್ಷದ ಮುಖಂಡರು ಕಾರ್ಯಕರ್ತರು ಒಗ್ಗಟ್ಟಾಗಿ ಕೆಲಸ ಮಾಡಿದ್ದಾರೆ. ಹಲವು ಕಡೆ ಕೊನೆ ಕ್ಷಣಕ್ಕೆ ಅಭ್ಯರ್ಥಿ ಹಾಕಿ ಅಲ್ಪ ಮತದಿಂದ ಸೋತಿದ್ದೇವೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಹೇಳಿದ್ದಾರೆ.

ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಚುನಾವಣೆಯಲ್ಲಿ ನಮ್ಮ ಅಭ್ಯರ್ಥಿಗಳು ಪೈಪೋಟಿ ನೀಡಿದ್ದಾರೆ. ಆಡಳಿತಾರೂಢ ಪಕ್ಷಕ್ಕೆ ಒಂದು ಅಡ್ವಾಂಟೇಜ್ ಇದ್ದು, ಅದನ್ನು ಅವರು ಸಂಪೂರ್ಣ ದುರ್ಬಳಕೆ ಮಾಡಿಕೊಂಡಿದ್ದಾರೆ. ಕಳೆದ ಬಾರಿ ಸೋತ ಕಡೆ ಈ ಬಾರಿ ನಾವು ಗೆದ್ದಿದ್ದೇವೆ, ಕೆಲವು ಕಡೆ ಸೀಟು ಕಳೆದು ಕೊಂಡಿದ್ದೇವೆ. ಪರಿಷತ್‍ನಲ್ಲಿ ಬಹುಮತಕ್ಕಾಗಿ ನಾವು ಹೋರಾಟ ಮಾಡಿಲ್ಲ. ಅದನ್ನೆಲ್ಲಾ ನಾವು ಲೆಕ್ಕ ಹಾಕಿಲ್ಲ, ಉತ್ತಮ ಫಲಿತಾಂಶ ನಿರೀಕ್ಷೆ ಮಾಡಿದ್ದೇವು ಇದು ನಮಗೆ ಸಮಾಧಾನ ತಂದಿದೆ ಎಂದಿದ್ದಾರೆ.

ಮತಾಂತರ ನಿಷೇಧ ಕಾಯ್ದೆಯನ್ನು ಪ್ರಬಲವಾಗಿ ವಿರೋಧಿಸುತ್ತೇವೆ. ಅನಗತ್ಯ ಗೊಂದಲ ಮೂಡಿಸಲು ಬಿಜೆಪಿ ಹೊರಟಿದೆ. ಕ್ರೈಸ್ತ ಸಮುದಾಯದಲ್ಲಿ ಭೀತಿ ಹುಟ್ಟಿಸುವ ಪ್ರಯತ್ನ ನಡೆಯುತ್ತಿದೆ. ಇಷ್ಟೋಂದು ಆಸ್ಪತ್ರೆ, ವಿದ್ಯಾಸಂಸ್ಥೆಗಳು ಸೇವೆ ನೀಡುತ್ತಾ ಬಂದಿದೆ, ಅವರ ಸೇವೆಯನ್ವು ನಾವು ಸ್ಮರಿಸಲೇಬೇಕು. ಅವರೆಲ್ಲಾ ಮತಾಂತರ ಆದ್ರಾ? ಅರ್ಥಹೀನ ಪ್ರಯತ್ನ ಇದಾಗಿದೆ. ಬಿಜೆಪಿಯ ಈ ಪ್ರಯತ್ನ ಅವರಿಗಲ್ಲ ಇಡೀ ರಾಜ್ಯದ ಭವಿಷ್ಯಕ್ಕೆ ಪೆಟ್ಟು ಬೀಳುತ್ತದೆ. ರಾಜ್ಯದಲ್ಲಿ ಬಂಡವಾಳ ಹೂಡಿಕೆಗೂ ಹಿನ್ನಡೆಯಾಗಬಹುದು, ಇದು ಒಳ್ಳೆಯ ಬೆಳವಣಿಗೆ ಅಲ್ಲ ಎಂದು ಆಡಳಿತ ಪಕ್ಷದ ವಿರುದ್ಧವಾಗಿ ಕಿಡಿಕಾರಿದ್ದಾರೆ.

ವಿಧಾನ ಪರಿಷತ್‌ ಚುನಾವಣೆಯಲ್ಲಿ ಸಾವಿರಾರು ಕೋಟಿ ಆದಾಯ ಘೋಷಿಸಿಕೊಂಡಿದ್ದ ಕೆಜಿಎಫ್‌ ಬಾಬು ಎಂದೇ ಪ್ರಸಿದ್ಧಿ ಪಡೆದಿದ್ದ ಯೂಸೂಫ್‌ ಷರೀಫ್‌ ಸೋಲನ್ನು ಅನುಭವಿಸಿದ್ದಾರೆ.

ಬೆಂಗಳೂರು ನಗರ ಕ್ಷೇತ್ರದಿಂದ ಕಣಕ್ಕೆ ಇಳಿದಿದ್ದ ಯೂಸೂಫ್‌ ಷರೀಫ್‌ 830 ಮತಗಳನ್ನು ಪಡೆದರೆ ಬಿಜೆಪಿಯ ಗೋಪಿನಾಥ್ ರೆಡ್ಡಿ 1227 ಮತಗಳನ್ನು ಪಡೆದಿದ್ದಾರೆ. ಈ ಮೂಲಕ ಗೋಪಿನಾಥ್ ರೆಡ್ಡಿ 397 ಮತಗಳಿಂದ ಗೆದ್ದು ಮೇಲ್ಮನೆಗೆ ಆಯ್ಕೆ ಆಗಿದ್ದಾರೆ. ಈ ಮೂಲಕ ಕಾಂಗ್ರೆಸ್‌ ತೆಕ್ಕೆಯಲ್ಲಿದ್ದ ಸ್ಥಾನವನ್ನು ಬಿಜೆಪಿ ಗೆದ್ದುಕೊಂಡಿದೆ.

ಒಟ್ಟು 2,057 ಮತಗಳನ್ನು ಎಣಿಕೆ ಮಾಡಿದ್ದು 13 ಮತಗಳನ್ನು ತಿರಸ್ಕೃತಗೊಳಿಸಲಾಗಿದೆ. ಪಕ್ಷೇತರ ಅಭ್ಯರ್ಥಿ ಶೀನಪ್ಪಗೆ ಒಂದು ಮತ ಬಿದ್ದಿಲ್ಲ. 2015ರ ಚುನಾವಣೆಯಲ್ಲಿ ಕಾಂಗ್ರೆಸ್ ನ ಎಂ.ನಾರಾಯಣ ಸ್ವಾಮಿಗೆ 1,384 ಮತಗಳು ಬಿದ್ದಿದ್ದರೆ ಬಿಜೆಪಿಯ ದೊಡ್ಡ ಬಸವರಾಜ 1,302 ಮತಗಳನ್ನು ಪಡೆದಿದ್ದರು.ಗೋಪಿನಾಥ್ ರೆಡ್ಡಿ 2009 ರ ಚುನಾವಣೆಯಲ್ಲಿ ಸ್ಪರ್ಧಿಸಿದ್ದರು. ಈ ವೇಳೆ 9 ಮತಗಳ ಅಂತರದಲ್ಲಿ ಸೋತಿದ್ದರು. 2015ರ ಚುನಾವಣೆಯಲ್ಲಿ ಗೋಪಿನಾಥ್ ರೆಡ್ಡಿಗೆ ಟಿಕೆಟ್ ಸಿಕ್ಕಿರಲಿಲ್ಲ.
ನಾಮಪತ್ರ ಸಲ್ಲಿಸುವ ವೇಳೆ ಯೂಸೂಫ್‌ ಷರೀಫ್‌ ಬರೋಬ್ಬರಿ 1,743 ಕೋಟಿ ರೂ. ಆಸ್ತಿ ಘೋಷಣೆ ಮಾಡಿದ್ದರು. ಇಲ್ಲಿಯವರೆಗೆ ರಾಜ್ಯದ ಚುನಾವಣೆಯ ಇತಿಹಾಸದಲ್ಲಿ ಹೊಸಕೋಟೆ ಉಪಚುನಾವಣೆಯಲ್ಲಿ ಸ್ಪರ್ಧಿಸಿದ್ದ ಎಂಟಿಬಿ ನಾಗರಾಜ್‌ ಶ್ರೀಮಂತ ಅಭ್ಯರ್ಥಿ ಎನಿಸಿಕೊಂಡಿದ್ದರು. 2019 ರಲ್ಲಿ ನಡೆದ ಉಪಚುನಾವಣೆಯ ವೇಳೆ ಎಂಟಿಬಿ 1200 ಕೋಟಿ ರೂ. ಆಸ್ತಿ ಘೋಷಿಸಿದ್ದರು. ಈಗ ಎಂಟಿಬಿ ಹೆಸರಿನಲ್ಲಿದ್ದ ʼಶ್ರೀಮಂತ ಅಭ್ಯರ್ಥಿʼ ದಾಖಲೆಯನ್ನು ಯೂಸುಫ್‌ ಷರೀಫ್‌ ತಮ್ಮ ಹೆಸರಿಗೆ ವರ್ಗಾಯಿಸಿಕೊಂಡಿದ್ದಾರೆ.

ಕುಂದಾ ನಗರಿಯ ಜಿದ್ದಾ ಜಿದ್ದಿನ ಕಣದಲ್ಲಿ ಲಕ್ಷ್ಮಿ ಹೆಬ್ಬಾಳ್ಕರ್ ಗೆಲುವಿನ ನಗೆ ಬೀರಿದ್ದಾರೆ. ಪಿಎಲ್‌ಡಿ ಬ್ಯಾಂಕ್ ಚುನಾವಣೆ ನಂತರ ಎರಡನೇ ಬಾರಿ ರಮೇಶ್ ಜಾರಕಿಹೊಳಿಗೆ ಲಕ್ಷ್ಮಿ ಹೆಬ್ಬಾಳ್ಕರ್‌ರಿಂದ ಮುಖಭಂಗವಾಗಿದೆ.

ಲಕ್ಷ್ಮಿ ಹೆಬ್ಬಾಳ್ಕರ್ ಸಹೋದರ ಚೆನ್ನರಾಜ್ ರವರನ್ನು ಸೋಲಿಸಲೇಬೇಕೆಂಬ ಹಟದಲ್ಲಿ ಸಹೋದರ ಲಖನ್ ಅವರನ್ನು ರಮೇಶ್ ಜಾರಕಿಹೋಳಿ ಅಖಾಡಕ್ಕೆ ನಿಲ್ಲಿಸಿದ್ದರು. ಇಬ್ಬರು ಘಟಾನುಘಟಿ ನಾಯಕರ ಫೈಟ್‌ನಲ್ಲಿ ಬಿಜೆಪಿ ಅಭ್ಯರ್ಥಿ ಮಹಾಂತೇಶ ಕವಟಗಿ ಮಠ  ಸೋತಿದ್ದಾರೆ. ಈ ಮೂಲಕ ಸಾಹುಕಾರನಿಗೆ ಸವಾಲು ಹಾಕಿ ಲಕ್ಷ್ಮಿ ಹೆಬ್ಬಾಳ್ಕರ್ ವಿಜಯದ ನಗೆ ಬೀರಿದ್ದಾರೆ.

ಮೊದಲ ಪ್ರಾಶಸ್ತ್ಯದ ಮತ ಎಣಿಕೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಚೆನ್ನರಾಜ ಜಯಗಳಿಸಿದ್ದಾರೆ. ಎರಡನೇ ಸ್ಥಾನವನ್ನು ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ಲಖನ್ ಜಾರಕಿಹೊಳಿ ಪಡೆದಿದ್ದಾರೆ. ಬಿಜೆಪಿ ಅಭ್ಯರ್ಥಿ ಮಹಾಂತೇಶ ಕವಟಗಿಮಠ ಮೂರನೇ ಸ್ಥಾನಕ್ಕೆ ತೃಪ್ತಿ ಪಟ್ಟಿದ್ದಾರೆ.

ಪರಿಷತನ್‌ನಲ್ಲಿ ಮುಖ್ಯ ಸಚೇತಕರಾಗಿದ್ದ ಮಹಾಂತೇಶ ಕವಟಗಿಮಠ ಅವರನ್ನು ಗೆಲ್ಲಿಸಲು ರಮೇಶ್‌ ಜಾರಕಿಹೊಳಿ ಜೊತೆ ಬಿಜೆಪಿ ನಾಯಕರು ಭಾರೀ ಪ್ರಯತ್ನ ನಡೆಸಿದ್ದರು. ಆದರೆ ಚುನಾವಣೆಯಲ್ಲಿ ಈ ಪ್ರಯತ್ನ ವಿಫಲವಾಗಿದೆ.

ಬಾಗಲಕೋಟೆ-ವಿಜಯಪುರ ದ್ವಿಸದಸ್ಯ ವಿಧಾನ ಪರಿಷತ್ ಚುನಾವಣೆ ಮತ ಎಣಿಕೆ ಕಾರ್ಯ ಮುಂದುವರೆದಿದೆ. ಮೊದಲ ಪ್ರಾಶಸ್ತ್ಯದ ಮತ ಎಣಿಕೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಸುನೀಲ್ ಗೌಡ್ ಪಾಟೀಲ್ ಜಯಭೇರಿ ಬಾರಿಸಿದ್ದಾರೆ.

ವಿಜಯಪುರ-ಬಾಗಲಕೋಟೆ ದ್ವಿಸದಸ್ಯ ವಿಧಾನ ಪರಿಷತ್ ಚುನಾವಣೆ ಮತ ಎಣಿಕೆ ಕಾರ್ಯ ಇಂದು ಬೆಳಗ್ಗಿನಿಂದ ನಡೆಯುತ್ತಿದೆ. ಈಗಾಗಲೇ ಮೊದಲ‌ ಪ್ರಾಶಸ್ತ್ಯ ಮತಗಳಲ್ಲಿಯೇ ಕಾಂಗ್ರೆಸ್ ಅಭ್ಯರ್ಥಿ ಸುನೀಲಗೌಡ ಪಾಟೀಲ್ ಜಯಗಳಿಸಿದ್ದಾರೆ.

ಪಿ.ಹೆಚ್.ಪೂಜಾರಿಗೆ ಜಯ:

ದ್ವಿ ಸದಸ್ಯತ್ವ ಕ್ಷೇತ್ರದಲ್ಲಿ 2ನೇ ಪ್ರಾಶಸ್ತ್ಯ ಮತಗಳಿಂದ ಬಿಜೆಪಿ ಅಭ್ಯರ್ಥಿ ಪಿ.ಹೆಚ್.ಪೂಜಾರಿ ಜಯ ಗಳಿಸಿದರು. ಈ ಮೂಲಕ ಕಾಂಗ್ರೆಸ್ ಹಾಗೂ ಬಿಜೆಪಿ ತಲಾ ಒಂದು ಸ್ಥಾನ ತನ್ನದಾಗಿಸಿ ಕೊಂಡಿವೆ. ಇವರಿಗೆ 2222 ಮತಗಳು ಲಭಿಸಿವೆ.

ಧಾರವಾಡ-ಹಾವೇರಿ-ಗದಗ್‌ ದ್ವಿಸದಸ್ಯ ಕ್ಷೇತ್ರದ ಪರಿಷತ್ ಚುನಾವಣೆಯಲ್ಲಿ ಕಾಂಗ್ರೆಸ್‌ನ ಸಲೀಂ ಅಹ್ಮದ್‌ ಮತ್ತು ಬಿಜೆಪಿಯ ಪ್ರದೀಪ್‌ ಶೆಟ್ಟರ್‌ ಗೆಲುವಿನ ನಗೆ ಬೀರಿದ್ದಾರೆ.

2,500 ಮತಗಳನ್ನ ಪಡೆದು ಮೊದಲ ಪ್ರಾಶಸ್ತ್ಯ ಮತದಲ್ಲಿ ಸಲೀಂ ಅಹ್ಮದ್ ಜಯಭೇರಿ ಬಾರಿಸಿದ್ದಾರೆ. ಬಿಜೆಪಿಯ ಪ್ರದೀಪ್ ಶೆಟ್ಟರ್ 2472 ಮತ ಗಳಿಸಿ ದ್ವಿತೀಯ ಪ್ರಾಶಸ್ತ್ಯದ ಮತದಲ್ಲಿ ಗೆದ್ದಿದ್ದಾರೆ.

ಈ ಕ್ಷೇತ್ರ ಧಾರವಾಡ, ಹಾವೇರಿ, ಗದಗ ಜಿಲ್ಲೆಯನ್ನೊಳಗೊಂಡಿದೆ. ಕೃಷಿ ವಿವಿಯಲ್ಲಿ‌ ಮತ ಎಣಿಕೆ ಕಾರ್ಯ ನಡೆದಿದೆ. ಧಾರವಾಡ ಕ್ಷೇತ್ರದಲ್ಲಿ ಎರಡು‌ ಸ್ಥಾನಗಳಿಗೆ ಸಲೀಂ ಅಹ್ಮದ್ ಮತ್ತು ಪ್ರದೀಪ್ ಶೆಟ್ಟರ್ ಆಯ್ಕೆಯಾಗಿದ್ದಾರೆ.
ಒಟ್ಟು 10 ಅಭ್ಯರ್ಥಿಗಳು ಕಣದಲ್ಲಿದ್ದರು. ಪ್ರದೀಪ್ ಶೆಟ್ಟರ್, ಸಲೀಂ ಅಹ್ಮದ್, ಮಲ್ಲಿಕಾರ್ಜುನ ಹಾವೇರಿ ಪ್ರಮುಖ ಅಭ್ಯರ್ಥಿಗಳಾಗಿದ್ದರು. ಒಟ್ಟು ಚಲಾವಣೆಯಾದ ಮತ 7452. ಎರಡು ಕೊಠಡಿಗಳಲ್ಲಿನ 14 ಟೇಬಲ್‌ಗಳಲ್ಲಿ ಮತ ಎಣಿಕೆ ಕಾರ್ಯ ನಡೆಯಿತು. 77 ಸಿಬ್ಬಂದಿ ಎಣಿಕೆಗೆ ನಿಯೋಜನೆ ಮಾಡಲಾಗಿತ್ತು.‌ ಬಂದೋಬಸ್ತ್ಗೆ 230 ಪೊಲೀಸರನ್ನು ನಿಯೋಜಿಸಲಾಗಿದೆ.

ಕಾಂಗ್ರೆಸ್-3,206
ಬಿಜೆಪಿ-2,472.
ಪಕ್ಷೇತರ-1,153.

ಬಿಜೆಪಿ, ಕಾಂಗ್ರೆಸ್ ಹಾಗೂ ಜೆಡಿಎಸ್ ಪಾಲಿಗೆ ಪರಿಷತ್ ಚುನಾವಣೆ ಪ್ರತಿಷ್ಠೆಯ ಕದನವಾಗಿ ಬದಲಾಗಿದೆ. ಸದ್ಯ ಇಂದು ಮತ ಎಣಿಕೆ ಕಾರ್ಯ ನಡೆಯುತ್ತಿದ್ದು 25 ಸ್ಥಾನ, 3 ಪಕ್ಷ ಮತ್ತು 90 ಅಭ್ಯರ್ಥಿಗಳ ಹಣೆಬರಹ ಒಂದೊಂದಾಗಿ ಹೊರ ಬೀಳುತ್ತಿದೆ. ಸದ್ಯ ಈಗ ಬೆಂಗಳೂರು ನಗರ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಹೆಚ್.ಎಸ್. ಗೋಪಿನಾಥ್ ಗೆಲುವು ಸಾಧಿಸಿದ್ದು ಕಾಂಗ್ರೆಸ್ ಅಭ್ಯರ್ಥಿ, ಸಾವಿರಾರು ಕೋಟಿಯ ಒಡೆಯ ಯೂಸಫ್ ಷರೀಫ್ ಮತ್ತು ಪಕ್ಷೇತರ ಅಭ್ಯರ್ಥಿ ಶೀನಪ್ಪ ಸೋಲು ಕಂಡಿದ್ದಾರೆ.

ಬಿಜೆಪಿ ಅಭ್ಯರ್ಥಿಯಾಗಿ ಎಚ್‌.ಎಸ್‌.ಗೋಪಿನಾಥ್, ಕಾಂಗ್ರೆಸ್‌ ಅಭ್ಯರ್ಥಿಯಾಗಿ ಯೂಸಫ್‌ ಷರೀಫ್‌ ಮತ್ತು ಪಕ್ಷೇತರ ಅಭ್ಯರ್ಥಿ ಶೀನಪ್ಪ ಕಣದಲ್ಲಿದ್ದರು. ಆದರೆ, ಗೋಪಿನಾಥ್‌ ಮತ್ತು ಯೂಸಫ್‌ ಷರೀಫ್‌ ನಡುವೆ ನೇರ ಹಣಾಹಣಿ ಇತ್ತು. ಗೋಪಿನಾಥ್‌ ಈ ಹಿಂದೆ ಕೂಡ ಚುನಾವಣಾ ಕಣಕ್ಕಿಳಿದಿದ್ದು, ಕೆಲವೇ ಮತಗಳ ಅಂತರಲ್ಲಿ ಸೋಲನ್ನು ಅನುಭವಿಸಿದ್ದರು. ಬಿಇ ಪದವೀಧರ ಆಗಿರುವ ಗೋಪಿನಾಥ್‌ ಅವರು ಬಿಜೆಪಿಯಲ್ಲಿ ಹಲವು ಹುದ್ದೆ ನಿರ್ವಹಿಸಿದ್ದರು. ಪಕ್ಷವೇ ಆಡಳಿತದಲ್ಲಿರುವ ಕಾರಣ ಸರ್ಕಾರದ ಅಭಿವೃದ್ಧಿ ಕಾರ್ಯ ಮುಂದಿಟ್ಟು ಮತ ಕೇಳಿ ಜಯ ಗಳಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಕಾಂಗ್ರೆಸ್‌ನ ಯೂಸಫ್‌ ಷರೀಫ್‌ ಅಲಿಯಾಸ್ ಕೆಜಿಎಫ್ ಬಾಬು ರಾಜಕೀಯದಲ್ಲಿ ಅತ್ಯಂತ ಶ್ರೀಮಂತ ವ್ಯಕ್ತಿ ಎನಿಸಿಕೊಂಡಿದ್ದಾರೆ. ಆದ್ರೆ ಪರಿಷತ್ ಚುನಾವಣೆಯಲ್ಲಿ ಸೋಲುಂಡಿದ್ದಾರೆ. ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಹಾಗೂ ಸಚಿವ ಎಂಟಿಬಿ ನಾಗರಾಜ್ ಅವರನ್ನೂ ಮೀರಿಸಿ 1743 ಕೋಟಿ ರು. ಆಸ್ತಿಯ ಒಡೆಯನಾಗಿರುವುದು ಚುನಾವಣಾ ಅಖಾಡದಲ್ಲಿ ಗಮನ ಸೆಳೆದಿತ್ತು. ಅವರ ವಿರುದ್ಧದ ಹಳೆಯ ಪ್ರಕರಣವೊಂದನ್ನು ಸಹಕಾರ ಸಚಿವ ಎಸ್‌.ಟಿ.ಸೋಮಶೇಖರ್‌ ಕೆದಕಿದ್ದರಿಂದ ಸಾಕಷ್ಟು ಚರ್ಚೆಯನ್ನು ಅದು ಹುಟ್ಟು ಹಾಕಿತ್ತು. 2015ರಲ್ಲಿ ಬಿಜೆಪಿಯ ದೊಡ್ಡ ಬಸವರಾಜು ವಿರುದ್ಧ ಜಯಗಳಿಸಿದ್ದ ಕಾಂಗ್ರೆಸ್‌ನ ಎಂ.ನಾರಾಯಣಸ್ವಾಮಿ ಈ ಬಾರಿ ಚುನಾವಣೆಯಲ್ಲಿ ಸ್ಪರ್ಧಿಸಲು ಹಿಂದೇಟು ಹಾಕಿದ್ದರಿಂದ ಕಾಂಗ್ರೆಸ್‌ ಯೂಸಫ್‌ಗೆ ಟಿಕೆಟ್‌ ನೀಡಿತ್ತು. ಬಿಜೆಪಿಯ ಮತದಾರರು ಹೆಚ್ಚಿದ್ದರೂ ಕಾಂಗ್ರೆಸ್‌ಗೆ ಗೆಲ್ಲುವ ಆತ್ಮ ವಿಶ್ವಾಸ ಇತ್ತು. ಆದರೆ ನಿರೀಕ್ಷೆ ಹುಸಿಯಾಗಿ ಬಿಜೆಪಿ ಐತಿಹಾಸಿಕ ಗೆಲುವು ಪಡೆದಿದೆ.

ಹಾಸನದಲ್ಲಿ ತೀವ್ರ ಕುತೂಹಲ ಕೆರಳಿಸಿದ್ದ ಹಾಸನ ವಿಧಾನಪರಿಷತ್ ಚುನಾವಣೆ ಫಲಿತಾಂಶ ಹೊರಬಿದ್ದಿದ್ದು, ಜೆಡಿಎಸ್ ಅಭ್ಯರ್ಥಿ ಸೂರಜ್ ರೇವಣ್ಣ ಭಾರಿ ಬಹುಮತದಿಂದ ಗೆಲುವಿನ ನಗೆ ಬೀರಿದ್ದಾರೆ.

ವಿಧಾನಪರಿಷತ್ ಚುನಾವಣೆಯಲ್ಲಿ ಜೆಡಿಎಸ್ ಅಭ್ಯರ್ಥಿಯಾಗಿ ಸೂರಜ್ ರೇವಣ್ಣ ಸ್ಪರ್ಧಿಸಿದ್ದರು. ಇಂದು ಮತ ಎಣಿಕೆಯಲ್ಲಿ ಆರಂಭದಿಂದಲೂ ಕೊನೆಯವರೆಗೂ ಎಲ್ಲ ಟೇಬಲ್‌ಗಳಲ್ಲೂ ಡಾ.ಸೂರಜ್ ರೇವಣ್ಣ ಮುನ್ನಡೆ ಕಾಯ್ದುಕೊಂಡು ಬಂದರು. ಅಂತಿಮವಾಗಿ ಮೊದಲ ಪ್ರಾಶಸ್ತ್ಯದ ಮತಗಳಿಂದ ಅಂದರೆ 1433 ಮತಗಳ ಅಂತರದಿಂದ ಸೂರಜ್ ರೇವಣ್ಣ ಗೆಲುವಿನ ನಗೆ ಬೀರಿದ್ದು, ಕ್ಷೇತ್ರದಲ್ಲಿ ಜೆಡಿಎಸ್ ಕಾರ್ಯಕರ್ತರು ಸಂಭ್ರಮಿಸಿದರು.

ಸೂರಜ್ ರೇವಣ್ಣ 2242 ಮತ ಪಡೆಯುವ ಮೂಲಕ ಕಾಂಗ್ರೆಸ್ ಅಭ್ಯರ್ಥಿ ಎನ್.ಶಂಕರ್ ಅವರನ್ನು ಸೋಲಿಸಿದ್ದಾರೆ. ಫಲಿತಾಂಶ ಇಂದು ಸಂಜೆ ವೇಳೆಗೆ ಪೂರ್ಣ ಪ್ರಮಾಣದಲ್ಲಿ ಹೊರಬೀಳಲಿದೆ. ಎನ್. ಶಂಕರ್ 731 ಮತಗಳನ ಪಡೆದು 2ನೇ ಸಾನಕ್ಕಿಳಿದರೆ, ಬಿಜೆಪಿ ಅಭ್ಯರ್ಥಿ ವಿಶ್ವನಾಥ್ 354 ಮತಪಡೆದು ಹೀನಾಯ ಸೋಲು ಕಂಡಿದ್ದಾರೆ.
ವಿಧಾನ ಪರಿಷತ್ ಚುನಾವಣೆಯಲ್ಲಿ ಸೂರಜ್ ರೇವಣ್ಣ ಗೆಲುವು ಸಾಧಿಸಿದ್ದು, ಮಾಜಿ ಪ್ರಧಾನಿ ಹೆಚ್.ಡಿ. ದೇವೇಗೌಡರ ಮೂರನೇ ಕುಡಿ ವಿಧಾನಸೌಧ ಪ್ರವೇಶಿಸಿದೆ.

ಬಹು ಕುತೂಹಲಕ್ಕೆ ಕಾರಣವಾಗಿದ್ದ ಬೆಂಗಳೂರು ನಗರ ಪರಿಷತ್ ಚುನಾವಣೆ ಫಲಿತಾಂಶ ಹೊರ ಬಿದ್ದಿದೆ. ಕಾಂಗ್ರೆಸ್ ಅಭ್ಯರ್ಥಿ ಕೆಜಿಎಫ್ ಬಾಬು ವಿರುದ್ಧ ಬಿಜೆಪಿ ಅಭ್ಯರ್ಥಿ ಗೋಪಿನಾಥ ರೆಡ್ಡಿ ಗೆಲುವು ಸಾಧಿಸಿದ್ದಾರೆ.
ಜಿದ್ದಾಜಿದ್ದಿನ ಕಣವಾಗಿದ್ದ ಬೆಂಗಳೂರು ನಗರ ವಿಧಾನ ಪರಿಷತ್ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ಗೋಪಿನಾಥ ರೆಡ್ಡಿ, ಕಾಂಗ್ರೆಸ್‌ನ ಯೂಸೂಫ್ ಷರೀಫ್ ವಿರುದ್ಧ 400 ಮತಗಳ ಅಂತರದಿಂದ ಭರ್ಜರಿ ಗೆಲುವು ಸಾಧಿಸಿದ್ದಾರೆ.

ಈ ಕುರಿತು ಗೋಪಿನಾಥ್ ರೆಡ್ಡಿ ಹೇಳಿಕೆ ನೀಡಿದ್ದಾರೆ. ಎಲ್ಲಾ ಮತ ಎಣಿಕೆ ಕಾರ್ಯ ‌ಮುಗಿದಿದೆ. ನನಗೆ 1200ಕ್ಕೂ ಹೆಚ್ಚು ‌ಮತಗಳು ಬಂದಿದೆ. ಕೆಲವೇ ಕ್ಷಣದಲ್ಲಿ ಚುನಾವಣಾ ‌ಆಯೋಗ ಫಲಿತಾಂಶ ‌ಘೋಷಣೆ ಮಾಡುತ್ತದೆ.

ಇದು ವೈಯಕ್ತಿಕ ಗೆಲುವಷ್ಟೇ ಅಲ್ಲ, ಪಕ್ಷದ ಗೆಲುವು ಆಗಿದೆ. ಬೈರತಿ ಬಸವರಾಜ್, ಸೋಮಶೇಖರ್, ಲಿಂಬಾವಳಿ ಸೇರಿದಂತೆ ಹಲವು‌ ಮುಖಂಡರ ಶ್ರಮವಿದೆ ಎಂದು ಹೇಳಿದರು.

ಬೆಂಗಳೂರು ನಗರ ವಿಧಾನ ಪರಿಷತ್ ಕ್ಷೇತ್ರ ಮತದಾನದ ವಿವರ ಈ ಕೆಳಗಿನಂತಿವೆ

ಒಟ್ಟು ಚಲಾವಣೆ ಮತ- 2070
ಅಸಿಂಧು -13
ಸಿಂಧುವಾದ ಮತಪತ್ರ – 2057
ಬಿಜೆಪಿಯ ಗೋಪಿನಾಥ ರೆಡ್ಡಿ- 1227
ಕಾಂಗ್ರೆಸ್‌ನ ಯೂಸೂಫ್ ಷರೀಪ್- 830
ಜಿ.ಎಂ ಶೀನಪ್ಪ-0
397 ಮತಗಳ ಅಂತರದಿಂದ ಗೋಪಿನಾಥ ರೆಡ್ಡಿ ಗೆಲುವು

ವಿಧಾನ ಪರಿಷತ್ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಭೀಮಣ್ಣ ನಾಯ್ಕ್ ವಿರುದ್ಧ 183 ಮತಗಳ ಅಂತರದಿಂದ ಬಿಜೆಪಿ ಅಭ್ಯರ್ಥಿ ಗಣಪತಿ ಉಳ್ವೇಕರ್ ಗೆಲುವು ಸಾಧಿಸಿದ್ದಾರೆ.
ಬಿಜೆಪಿಯ ಗಣಪತಿ ಉಳ್ವೇಕರ್ಗೆ ಗೆಲುವು..

ಗಣಪತಿ ಉಳ್ವೇಕರ್ 1514 ಮತಗಳನ್ನು ಪಡೆದಿದ್ದರೇ ಕಾಂಗ್ರೆಸ್‌ನ ಭೀಮಣ್ಣ ನಾಯ್ಕ ಅವರಿಗೆ 1331 ಮತಗಳು ಬಂದಿದೆ. ಉಳಿದಂತೆ ಪಕ್ಷೇತರ ಅಭ್ಯರ್ಥಿಗಳಾದ ಈಶ್ವರಗೌಡ 4, ದತ್ತಾತ್ರೇಯ ನಾಯ್ಕ 3 ಹಾಗೂ ಸೋಮಶೇಖರ್ ವಿಎಸ್ 1 ಮತ ಪಡೆದಿದ್ದಾರೆ.

ಒಟ್ಟು 2915 ಮತಗಳ ಪೈಕಿ 2907 ಮತ ಚಲಾವಣೆಗೊಂಡಿದ್ದವು. ಈ ಪೈಕಿ 54 ಮತಗಳು ತಿರಸ್ಕೃತಗೊಂಡಿವೆ. ಆದರೆ, ಕೊನೆವರೆಗೂ ಕಾಂಗ್ರೆಸ್-ಬಿಜೆಪಿ ನಡುವೆ ಏರ್ಪಟ್ಟಿದ್ದ ನೇರಾನೇರ ಹಣಾಹಣಿಯಲ್ಲಿ ಬಿಜೆಪಿಯ ಗಣಪತಿ ಉಳ್ವೇಕರ್ ಗೆಲುವಿನ ನಗೆ ಬೀರಿದ್ದಾರೆ.

ಕಳೆದ ಬಾರಿಯ ವಿಧಾನ ಪರಿಷತ್ ಚುನಾವಣೆಯಲ್ಲಿ ಸೋಲು ಕಂಡಿದ್ದ ಉಳ್ವೇಕರ್ ಈ ಬಾರಿ ಗೆಲುವು ಕಂಡಿದ್ದಾರೆ. ಇದರೊಂದಿಗೆ ಇತಿಹಾಸದಲ್ಲಿ ಮೊದಲ ಬಾರಿಗೆ ಜಿಲ್ಲೆಯಲ್ಲಿ ಬಿಜೆಪಿ ಎಂಎಲ್ಸಿ ಚುನಾವಣೆಯಲ್ಲಿ ಗೆಲುವಿನ ನಗೆ ಬೀರಿದೆ. ಆದರೆ, ಮೂರು ವಿಧಾನಸಭಾ ಚುನಾವಣೆಗಳಲ್ಲಿ ಸೋಲು ಕಂಡಿದ್ದ ಕಾಂಗ್ರೆಸ್ ಅಭ್ಯರ್ಥಿ ಭೀಮಣ್ಣ ನಾಯ್ಕ ಮತ್ತೊಂದು ಸೋಲುಂಡಿದ್ದಾರೆ.

ದಕ್ಷಿಣ ಕನ್ನಡ ದ್ವಿಸದಸ್ಯ ಕ್ಷೇತ್ರಕ್ಕೆ ನಡೆದ ವಿಧಾನ ಪರಿಷತ್ ಚುನಾವಣೆಯಲ್ಲಿ ಬಿಜೆಪಿ ಮತ್ತು ಕಾಂಗ್ರೆಸ್ ಅಭ್ಯರ್ಥಿಗಳು ವಿಜಯ ಗಳಿಸಿದ್ದಾರೆ. ಬಿಜೆಪಿ ಅಭ್ಯರ್ಥಿ ಕೋಟ ಶ್ರೀನಿವಾಸ ಪೂಜಾರಿ ಮತ್ತು ಕಾಂಗ್ರೆಸ್ ಅಭ್ಯರ್ಥಿ ಮಂಜುನಾಥ ಭಂಡಾರಿ ಗೆಲುವಿನ ನಗೆ ಬೀರಿದ್ದಾರೆ.

ಒಟ್ಟು 5955 ಮತಗಳು ಸಿಂಧು ಮತಗಳಾಗಿದ್ದು ಇದರ ಪ್ರಕಾರ ಪ್ರಥಮ ಪ್ರಾಶಸ್ತ್ಯದಲ್ಲಿ ಗೆಲ್ಲಲು 1,986 ಮತಗಳು ಬೇಕಿದ್ದವು‌. ಬಿಜೆಪಿ ಅಭ್ಯರ್ಥಿ ಕೋಟ ಶ್ರೀನಿವಾಸ ಪೂಜಾರಿ ಅವರು 3,672 ಮತಗಳನ್ನು ಪಡೆದರೆ, ಕಾಂಗ್ರೆಸ್ ಅಭ್ಯರ್ಥಿ 2,079 ಮತಗಳನ್ನು ಪಡೆದು ಪ್ರಥಮ ಪ್ರಾಶಸ್ತ್ಯ ಮತದಲ್ಲೇ ವಿಜಯಿಯಾಗಿದ್ದಾರೆ.
ಚಲಾವಣೆಯಾದ ಮತಗಳಲ್ಲಿ 56 ಮತಗಳು ಅಸಿಂಧುವಾಗಿದ್ದವು. ಇನ್ನೋರ್ವ ಅಭ್ಯರ್ಥಿ ಎಸ್ಡಿಪಿಐನ ಶಾಫಿ ಬೆಳ್ಳಾರೆ 204 ಮತಗಳನ್ನು ಪಡೆದಿದ್ದಾರೆ

ಚಿಕ್ಕಮಗಳೂರು ಕ್ಷೇತ್ರದ ವಿಧಾನ ಪರಿಷತ್ ಹಣಾಹಣಿಯಲ್ಲಿ ಬಿಜೆಪಿ ಅಭ್ಯರ್ಥಿಯಾಗಿರುವ ಎಂ ಕೆ ಪ್ರಾಣೇಶ್ ಗೆಲುವಿನ ನಗೆ ಬೀರಿದ್ದಾರೆ.
ಜಿಲ್ಲೆಯಲ್ಲಿ ಬಿಜೆಪಿ ಹಾಗೂ ಕಾಂಗ್ರೆಸ್ ಪಕ್ಷದ ನಡುವಿನ ಅಭ್ಯರ್ಥಿಗಳ ನಡುವೆ ನೇರ ಸ್ಪರ್ಧೆ ಇತ್ತು. ಬಿಜೆಪಿ ಅಭ್ಯರ್ಥಿ ಎಂ.ಕೆ. ಪ್ರಾಣೇಶ್ ಅವರು ಕಾಂಗ್ರೆಸ್ನ ಗಾಯತ್ರಿ ಶಾಂತೇಗೌಡ ವಿರುದ್ಧ ಜಯ ಸಾಧಿಸಿದ್ದಾರೆ.

ಕೇವಲ 6 ಮತಗಳ ಅಂತರದಲ್ಲಿ ಪ್ರಾಣೇಶ್ಗೆ ಗೆಲುವು ಒಲಿದಿದೆ. ಕ್ಷೇತ್ರದಲ್ಲಿ ಗೆಲುವಿಗೆ 1,186 ಮತ ಅಗತ್ಯವಿತ್ತು, ಇದರಲ್ಲಿ ಪ್ರಾಣೇಶ್ 1188 ಮತ ಪಡೆದರೆ, 1,182 ಮತಗಳು ಕೈ ಅಭ್ಯರ್ಥಿ ಗಾಯತ್ರಿ ಶಾಂತೇಗೌಡ ಪಾಲಾಗಿವೆ. ಚಲಾವಣೆಯಾದ ಮತಗಳಲ್ಲಿ 39 ಅಸಿಂಧುವಾಗಿದ್ದರೆ, 7 ಸದಸ್ಯರು ಮತ ಹಾಕಿರಲಿಲ್ಲ, ಇದೂ ಕೂಡ ಫಲಿತಾಂಶದಲ್ಲಿ ಪ್ರಮುಖ ಪಾತ್ರ ವಹಿಸಿದಂತಾಗಿದೆ.

ಕಾಫಿ ನಾಡಿನಲ್ಲಿ ಗೆಲುವಿನ ಬಳಿಕ ಒಂದೆಡೆ ಬಿಜೆಪಿ ಸಂಭ್ರಮಾಚರಣೆ ನಡೆಸಿದರೆ, ಮತ್ತೊಂದೆಡೆ ಎಣಿಕೆ ಕೇಂದ್ರದ ಮುಂಭಾಗ ಕಾಂಗ್ರೆಸ್ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು. ಮರು ಮತ ಎಣಿಕೆಗೆ ಆಗ್ರಹಿಸಿದರು.

ಬೀದರ್ ನಲ್ಲಿ ಕುತೂಹಲ ಮೂಡಿಸಿದ್ದ ವಿಧಾನ ಪರಿಷತ್‍ನ 25 ಸ್ಥಾನಗಳ ಚುನಾವಣೆಯ ಫಲಿತಾಂಶ ಇಂದು ಪ್ರಕಟವಾಗುತ್ತಿದೆ. ಬೀದರ್ನಲ್ಲಿ ಕಾಂಗ್ರೆಸ್ ಅಭ್ಯರ್ಥಿ ಭೀಮರಾವ್ ಪಾಟೀಲ್ 227 ಮತಗಳ ಅಂತರದಿಂದ ಗೆಲುವು ಸಾಧಿಸಿದ್ದಾರೆ.

ಕಾಂಗ್ರೆಸ್ ಅಭ್ಯರ್ಥಿ ಭೀಮರಾವ್ ಪಾಟೀಲ್ 1789 ಮತ ಪಡೆದು ಜಯಭೇರಿ ಬಾರಿಸಿದ್ದಾರೆ. ಬಿಜೆಪಿಯ ಪ್ರಕಾಶ್ ಖಂಡ್ರೆ 1562 ಮತಗಳನ್ನು ಪಡೆದು ಪರಾಭವಗೊಂಡಿದ್ದಾರೆ.

ಮಂಡ್ಯ ಜಿಲ್ಲೆಯ ಪರಿಷತ್ ಚುನಾವಣೆಯಲ್ಲಿ ಜೆಡಿಎಸ್ ನ ಅಪ್ಪಾಜಿಗೌಡ ಅವರನ್ನು ಕೈ ಅಭ್ಯರ್ಥಿ ದಿನೇಶ್ ಗೂಳಿಗೌಡ ಸೋಲಿಸಿ, ಭರ್ಜರಿ ಗೆಲುವು ಸಾಧಿಸಿದ್ದಾರೆ.

ಮಂಡ್ಯ ಕ್ಷೇತ್ರದಲ್ಲಿ ಜೆಡಿಎಸ್ ಪಕ್ಷಕ್ಕೆ ಭಾರೀ ಮುಖಭಂಗ ಅನುಭವಿಸಿದೆ. ಪರಿಷತ್ ಚುನಾವಣೆಯಲ್ಲಿ ಜೆಡಿಎಸ್ ನ ಅಭ್ಯರ್ಥಿ ಅಪ್ಪಾಜಿಗೌಡ ಅವರು ಸೋಲು ಕಂಡಿದ್ದಾರೆ. ಕಾಂಗ್ರೆಸ್ ನ ಅಭ್ಯರ್ಥಿ ಎಂ.ಜಿ.ದಿನೇಶ್ ಗೂಳಿಗೌಡ ಅವರು ಭರ್ಜರಿ ಗೆಲುವು ಸಾಧಿಸಿದ್ದಾರೆ.

ಮತ್ತೊಂದೆಡೆ ಹಳೆ ಮೈಸೂರು ಭಾಗವಾದಂತ ಮೈಸೂರಿನಲ್ಲಿಯೂ ಬಿಜೆಪಿ ಸೋಲು ಕಂಡು, ಕಾಂಗ್ರೆಸ್ ಅಭ್ಯರ್ಥಿ ಡಾ.ಡಿ.ತಿಮ್ಮಯ್ಯ ಅವರು ಗೆಲುವು ಸಾಧಿಸಿದ್ದಾರೆ.

ಕೊಪ್ಪಳ-ರಾಯಚೂರು ವಿಧಾನ ಪರಿಷತ್ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಶರಣಗೌಡ ಬಯ್ಯಾಪೂರ ಗೆಲುವು ಸಾಧಿಸಿದ್ದಾರೆ.
ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಶರಣಗೌಡ ಬಯ್ಯಾಪುರ ಹಾಗೂ ಬಿಜೆಪಿ ಅಭ್ಯರ್ಥಿ ವಿಶ್ವನಾಥ ಬನಹಟ್ಟಿ ನಡುವೆ ತೀವ್ರ ಪೈಪೋಟಿ ಏರ್ಪಡಿತ್ತು.
ಇಂದು ನಡೆದ ಮತ ಎಣಿಕೆಯಲ್ಲಿ ಕೊನೆಯವರೆಗೂ ಇಬ್ಬರು ಅಭ್ಯರ್ಥಿಗಳ ನಡುವೆ ಭಾರಿ ಪೈಪೋಟಿ ನಡೆದಿತ್ತು. ಆದ್ರೆ, ಕೊನೆಯಲ್ಲಿ ಸುಮಾರು 400 ಅಧಿಕ ಮತಗಳ ಅಂತರದಿಂದ ಶರಣಗೌಡ ಅವರು ಜಯ ಸಾಧಿಸಿದ್ದಾರೆ.

ಮೈಸೂರು ಕ್ಷೇತ್ರದಲ್ಲಿ ವಿಧಾನ ಪರಿಷತ್ ಚುನಾವಣೆಯಲ್ಲಿ ಮೈಸೂರು, ಮಂಡ್ಯದಲ್ಲಿ ಕಾಂಗ್ರೆಸ್ ಭರ್ಜರಿ ಗೆಲುವು ಸಾಧಿಸಿದೆ.
ಮೈಸೂರು-ಚಾಮರಾಜನಗರ ದ್ವಿಸದಸ್ಯ ಕ್ಷೇತ್ರದಲ್ಲಿ ಸಿದ್ದರಾಮಯ್ಯ ಆಪ್ತ ಕಾಂಗ್ರೆಸ್‍ನ ಡಾ. ಡಿ.ತಿಮ್ಮಯ್ಯ ಗೆಲುವು ಸಾಧಿಸಿದ್ದಾರೆ. ಎರಡನೇ ಸ್ಥಾನಕ್ಕೆ ಜೆಡಿಎಸ್-ಬಿಜೆಪಿ ನಡುವೆ ಪೈಪೋಟಿ ನಡೆಯುತ್ತಿದೆ. ಬಿಜೆಪಿಯಿಂದ ಆರ್.ರಘು (ಕೌಟಿಲ್ಯ), ಜೆಡಿಎಸ್‍ನಿಂದ ಸಿ.ಎನ್.ಮಂಜೇಗೌಡ ಕಣದಲ್ಲಿದ್ದರು.

ಇನ್ನು ಜೆಡಿಎಸ್ ಭದ್ರಕೋಟೆಯೇ ಆಗಿದ್ದ ಮಂಡ್ಯದಲ್ಲಿ ಜೆಡಿಎಸ್ ಸೋಲನುಭವಿಸಿದೆ. ಪಕ್ಷದ ಅಭ್ಯರ್ಥಿ ಅಪ್ಪಾಜಿಗೌಡ ಸೋತಿದ್ದು, ಕಾಂಗ್ರೆಸ್‍ನ ದಿನೇಶ್ ಗೂಳಿಗೌಡ ಗೆಲುವು ಸಾಧಿಸಿದ್ದಾರೆ.

ತೀವ್ರ ಕುತೂಹಲ ಮೂಡಿಸಿದ್ದ ಚಾಮರಾಜನಗರ-ಮೈಸೂರು ಚುನಾವಣೆಯ ದ್ವಿಸದಸ್ಯ ಕ್ಷೇತ್ರದಲ್ಲಿ ಮೊದಲ ಪ್ರಾಶಸ್ತ್ಯದ ಫಲಿತಾಂಶ ಹೊರ ಬಂದಿದೆ. ಕಾಂಗ್ರೆಸ್ ಅಭ್ಯರ್ಥಿ ಡಾ.ಡಿ.ತಿಮ್ಮಯ್ಯ 2800ಕ್ಕೂ ಅಧಿಕ ಮೊದಲ ಪ್ರಾಶಸ್ತ್ಯ ಮತಗಳನ್ನು ಪಡೆಯುವ ಮೂಲಕ ಗೆಲುವು ಸಾಧಿಸಿದ್ದಾರೆ.

 

ಬೆಳಗಾವಿಯಲ್ಲಿ ಈಶ್ವರಪ್ಪ ಹೇಳಿಕೆ

ಇಷ್ಟು ಕೆಟ್ಟದಾಗಿ ಚುನಾವಣೆ ನಡೆದಿರೋದು ಅಪಮಾನ. ಮೇಲ್ಮನೆ ಚಾವಡಿಯಲ್ಲೇ ತೀರ್ಮಾನವಾಗಲಿ ಎಂದು ಸಚಿವ ಕೆ ಎಸ್ ಈಶ್ವರಪ್ಪ ತಿಳಿಸಿದ್ದಾರೆ.

ಇಂದಿಲ್ಲಿ  ನನ್ನ ಜೀವನದಲ್ಲಿ ಇಂಥ ಪರಿಷತ್ ಚುನಾವಣೆ ನೋಡಿಲ್ಲ. ನೀನು ಎಷ್ಟು ಕೊಡ್ತೀಯಾ, ನಾನು ಎಷ್ಟು ಕೊಡ್ತೀನಿ ಅಂತಾ ಚುನಾವಣೆ ನಡೆದಿದೆ. ಇಷ್ಟು ಕೆಟ್ಟದಾಗಿ ಚುನಾವಣೆ ಮಾಡಿರುವುದು ಬಹಳ ಅಪಮಾನದ ವಿಷಯ. ಚಿಂತಕರ ಚಾವಡಿಯಾದ ವಿಧಾನ ಪರಿಷತ್ ಈಗ ಶ್ರೀಮಂತರ ಚಾವಡಿಯಾಗಿದೆ. ರಾಜಕಾರಣ ಬೇಕು ನಿಜ. ಈಗ ನಡೆದ ಚುನಾವಣೆಯನ್ನು ಈವರೆಗೆ ನಾನು ನೋಡಿಲ್ಲ. ಈ ಬಗ್ಗೆ ಪ್ರಾಮಾಣಿಕ ಚರ್ಚೆ ಆಗಬೇಕು. ಪರಿಷತ್ ಚುನಾವಣೆಗೆ ಹಣದ ಹೊಳೆ ಸುರಿಸಲಾಗಿದೆ ಎಂದು ವಿಷಾದ ವ್ಯಕ್ತಪಡಿಸಿದರು.

ಮೇಲ್ಮನೆ ಬೇಕಾ ಎಂಬುದನ್ನು ಚಿಂತಕರ ಚಾವಣಿಯ ಸದಸ್ಯರೇ ಚರ್ಚಿಸಬೇಕು. ಈ ಬಾರಿಯ ಚುನಾವಣೆಯಲ್ಲಿ ಅಭ್ಯರ್ಥಿಗಳು ಕೋಟಿ ಕೋಟಿ ಹಣ ಖರ್ಚು ಮಾಡಿದ್ದಾರೆ. ಚುನಾವಣಾ ಆಯೋಗ ಬದುಕಿದೆಯೋ ಸತ್ತಿದೆಯೋ ಅನ್ನೋ ಚರ್ಚೆ ಆರಂಭವಾಗಿದೆ ಎಂದರು.

ಬಹುಮತ ಪಡೆಯುತ್ತೇವೆ : ಇಂದು ವಿಧಾನ ಪರಿಷತ್ ಚುನಾವಣೆ ಫಲಿತಾಂಶ ಬರುತ್ತಿದೆ. ಮೊದಲ‌ ಸುತ್ತಿನಲ್ಲಿ ಕೊಡಗಿನಲ್ಲಿ ಬಿಜೆಪಿ ಅಭ್ಯರ್ಥಿ ಕುಶಾಲಪ್ಪ ಗೆಲುವು ಸಾಧಿಸಿದ್ದಾರೆ. ವಿಧಾನ ಪರಿಷತ್‌ನಲ್ಲಿ 15 ಸ್ಥಾನ ಗೆಲ್ಲುವ ವಿಶ್ವಾಸ ಇದೆ ಎಂದು ಸಚಿವ ಈಶ್ವರಪ್ಪ ತಿಳಿಸಿದರು.

ವಿಧಾನ ಪರಿಷತ್‌ನಲ್ಲಿ ಪೂರ್ಣ ಬಹುಮತ ಬೇಕು ಅನ್ನೋದು ರಾಜ್ಯದ ಜನರ ಬಯಕೆ.‌ ವಿಧಾನ ಪರಿಷತ್‌ನಲ್ಲಿ ಪೂರ್ಣ ಬಹುಮತ ಪಡೆಯುತ್ತೇವೆ. ಯಾವುದೇ ಚುನಾವಣೆಗಳು ಮುಂದಿನ ಚುನಾವಣೆಗಳಿಗೆ ಸಂಬಂಧ ಇರಲ್ಲ. ವಿಧಾನಸಭಾ ಚುನಾವಣೆಯಲ್ಲೂ ಪೂರ್ಣ ಬಹುಮತದಿಂದ ಗೆಲ್ಲುತ್ತೇವೆ ಎಂದರು.

ಎಂಇಎಸ್‌ನವರಿಗೆ ಬೇರೆ ಉದ್ಯೋಗ ಇಲ್ಲ : ಎಂಇಎಸ್ ಬೆಳಗಾವಿ ಬಂದ್ ವಿಚಾರವಾಗಿ ಪ್ರತಿಕ್ರಿಯಿಸಿದ ಸಚಿವರು, ಎಂಇಎಸ್‌ನವರಿಗೆ ಪ್ರಜಾಪ್ರಭುತ್ವದಲ್ಲಿ ನಂಬಿಕೆ ಇಲ್ಲ. ಜನರು ಅವರನ್ನು ತಿರಸ್ಕಾರ ಮಾಡಿದ್ದಾರೆ ಎಂದು ಕಿಡಿ ಕಾರಿದರು. ಜೀವಂತ ಇದ್ದೇವೆ ಅಂತಾ ಅಲ್ಲೊಂದು ಇಲ್ಲೊಂದು ಪ್ರತಿಭಟನೆ ಮಾಡುತ್ತಾರೆ. ರಾಜ್ಯ ಸರ್ಕಾರ ಅವರಿಗೆ ಯಾವುದೇ ರೀತಿಯ ಸೊಪ್ಪು ಹಾಕಲ್ಲ ಎಂದು ತಿಳಿಸಿದ

ಹಣ ಬಲ ಮತ್ತು ಜನ ಬಲದ ನಡುವಿನ ಹೋರಾಟದಲ್ಲಿ ಜನ ಬಲಕ್ಕೆ ಸೋಲಾಗಿರುವುದು ಬೇಸರ ತಂದಿದೆ ಎಂದು ಮಾಜಿ ಮುಖ್ಯಮಂತ್ರಿ ಎಚ್‌ಡಿ ಕುಮಾರಸ್ವಾಮಿ ತಿಳಿಸಿದರು.

ವಿಧಾನ ಪರಿಷತ್ ಚುನಾವಣೆಯಲ್ಲಿ ಜೆಡಿಎಸ್ ಹೀನಾಯ ಸೋಲನುಭವಿಸಿದರ ಕುರಿತು ಟ್ವೀಟ್ ಮಾಡಿರುವ ಅವರು, ರಾಷ್ಟ್ರೀಯ ಪಕ್ಷಗಳ ಹಣದ ಅಬ್ಬರದಲ್ಲಿ ಜೆಡಿಎಸ್ ಹಿನ್ನಡೆ ಅನುಭವಿಸಿದೆ. ಆಣೆ, ಪ್ರಮಾಣಗಳ ನಡುವೆಯೂ ನೈತಿಕ ನೆಲೆಯಲ್ಲಿ ಸೆಣಸಾಟ ನಡೆಸಿದ್ದೇವೆ ಎಂದು ಬೇಸರ ವ್ಯಕ್ತಪಡಿಸಿದರು.

ಪಂಚಮಸಾಲಿ ಪೀಠದ ಸ್ವಾಮೀಜಿಯಾಗಿರುವ ಜಯಮೃತ್ಯುಂಜಯ ಸ್ವಾಮೀಜಿಯವರಿಗೆ ಬಸವಣ್ಣನವರ ಹೆಸರು ಹೇಳುವ ನೈತಿಕತೆಯೇ ಇಲ್ಲ. ಅಲ್ಲದೇ ಸ್ವಾಮೀಜಿ ಆದವರು ಅನ್ನದಾಸೋಹ ಮಾಡಬೇಕು ವಿನಃ ಅನ್ನ ಕಿತ್ತುಕೊಳ್ಳುವ ಕೆಲಸಕ್ಕೆ ಕೈ ಹಾಕುವುದು ನಾಚಿಕೆಗೇಡಿನ ಸಂಗತಿಯಾಗಿದೆ ಎಂದು ಕರ್ನಾಟಕ ರಾಜ್ಯ ಕಾಯಕ ಸಮಾಜ ಒಕ್ಕೂಟದ ಅಧ್ಯಕ್ಷ ಹಾಗೂ ಪರಿಷತ್ ಮಾಜಿ ಸದಸ್ಯ ಕೆ.ಸಿ.ಪುಟ್ಟಸಿದ್ಧಶೆಟ್ಟಿ ಆಕ್ರೋಶ ವ್ಯಕ್ತಪಡಿಸಿದರು.

ಇಂದು ಸುದ್ದಿಗೋಷ್ಟಿ ನಡೆಸಿ ಮಾತನಾಡಿದ ಅವರು, ಸ್ವಾಮೀಜಿ ಆದವರು ಅನ್ನದಾಸೋಹದ ಮೂಲಕ ಮತ್ತೊಬ್ಬರಿಗೆ ಅನ್ನಹಾಕುವ ಕೆಲಸ ಮಾಡಬೇಕು. ಅದನ್ನು ಬಿಟ್ಟು 2ಎ ಸೇರ್ಪಡೆಗೆ ಹೋರಾಟ ಮಾಡುವ ಮೂಲಕ 102 ಜಾತಿಯ ಕಾಯಕ ಸಮಾಜದ ಅನ್ನವನ್ನು ಕಿತ್ತುಕೊಳ್ಳುವ ಕೆಲಸವನ್ನು ಮಾಡುತ್ತಿರುವುದು ನಿಜಕ್ಕೂ ಸಮಾಜ ಬಾಹಿರ ಕಾರ್ಯವಾಗಿದೆ ಎಂದರು. ಇದನ್ನೂ ಓದಿ: ಎದೆ ಮೇಲೆ ತಲೈವಾ ಭಾವಚಿತ್ರದ ಟ್ಯಾಟು ಹಾಕಿಸಿಕೊಂಡ ಹರ್ಭಜನ್ ಸಿಂಗ್

ಪಂಚಮಸಾಲಿ ಸಮಾಜದವರು ಈಗ 5% ಮೀಸಲಾತಿ ಪಡೆಯುತ್ತಿದ್ದಾರೆ. ಅದನ್ನು ಹೆಚ್ಚಿಸಿಕೊಳ್ಳಲಿ ಅದಕ್ಕೆ ನಮ್ಮ ವಿರೋಧವಿಲ್ಲ. ಆದರೆ 2ಎ ಗೆ ಪಂಚಮಸಾಲಿ ಸಮುದಾಯವನ್ನು ಸೇರ್ಪಡೆ ಮಾಡಲು ನೀವು ನಡೆಸುತ್ತಿರುವ ಹೋರಾಟ ಇದು ಬಡ ಜಾತಿಗಳ ಬದಕುವ ಹಕ್ಕನ್ನು ಕಿತ್ತುಕೊಳ್ಳುವ ಷಡ್ಯಂತ್ರ ಮಾಡಿದಂತಾಗಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು. ಇದನ್ನೂ ಓದಿ: 1,743 ಕೋಟಿ ಆಸ್ತಿಯ ಒಡೆಯ ಕೆಜಿಎಫ್‌ ಬಾಬುಗೆ ಸೋಲು

ಇದೇ ವೇಳೆ ಸಿಎಂ ಬಸವರಾಜ ಬೊಮ್ಮಾಯಿ ಅವರು ಪಂಚಮಸಾಲಿ ಸ್ವಾಮೀಜಿಯ ರಾಜಕೀಯ ತಂತ್ರಗಾರಿಕೆ ಮಾತುಗಳಿಗೆ ಒಳಗಾಗಿ ಯಾವುದೇ ರೀತಿಯಲ್ಲಿ 2ಎ ಸೇರ್ಪಡೆ ಮಾಡಕೂಡದು. ಒಂದು ವೇಳೆ ಮಾಡಿದ್ದೇ ಆದಲ್ಲಿ ಮುಂಬರುವ ದಿನಗಳಲ್ಲಿ ಉಗ್ರ ಹೋರಾಟವನ್ನು ಮಾಡಲಾಗುತ್ತದೆ ಎಂದು ಎಚ್ಚರಿಕೆ ನೀಡಿದರು.

ಬಿಜೆಪಿಗೆ ಧಮ್ ಇಲ್ಲ; ರಾಜ್ಯದಲ್ಲಿ ಕಾಂಗ್ರೆಸ್ ಪರ ಅಲೆ ಎಂದ ಸಿದ್ದರಾಮಯ್ಯ

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button