ಪ್ರಗತಿವಾಹಿನಿ ಸುದ್ದಿ; ನವದೆಹಲಿ: ಅಮಿತ್ ಶಾ ವಯಸ್ಸು -33, ಓಂ ಬಿರ್ಲಾ ವಯಸ್ಸು -26 ಎಂದಿರುವ ಕೋವಿಡ್ ಸರ್ಟಿಫಿಕೇಟ್ ವೈರಲ್ ಆಗಿದ್ದು, ಈ ಕುರಿತು ವೈದ್ಯಾಧಿಕಾರಿಗಳು ತನಿಖೆಗೆ ಆದೇಶಿಸಿದ್ದಾರೆ.
ಕೇಂದ್ರ ಸಚಿವರಾದ ಅಮಿತ್ ಶಾ, ನಿತಿನ್ ಗಡ್ಕರಿ, ಪಿಯುಷ್ ಗೋಯಲ್, ಲೋಕಸಭಾ ಸ್ಪೀಕರ್ ಓಂ ಬಿರ್ಲಾ ಹೆಸರಿರುವ ಸರ್ಟಿಫಿಕೇಟ್ ಫೋಟೋಗಳು ವೈರಲ್ ಆಗುತ್ತಿದ್ದು, ಇದರ ಹಿಂದೆ ಪಿತೂರಿ ನಡೆದಿರುವ ಅನುಮಾನ ವ್ಯಕ್ತವಾಗಿದೆ. ಉತ್ತರ ಪ್ರದೇಶದ ಇಟಾವಾ ಜಿಲ್ಲೆಯ ತಖಾ ತಹಶಿಲ್ ನಲ್ಲಿರುವ ಸಮುದಾಯ ಆರೋಗ್ಯ ಕೇಂದ್ರದ ಹೆಸರಿನ ಕೋವಿಡ್ ಸರ್ಟಿಫಿಕೇಟ್ ನಲ್ಲಿ ಅಮಿತ್ ಶಾ ವಯಸ್ಸು 33 ಹಾಗೂ ಓಂ ಬಿರ್ಲಾ ವಯಸ್ಸು 26 ಎಂದು ದಾಖಲಾಗಿದ್ದು ಇವರೆಲ್ಲರೂ ಡಿಸೆಂಬರ್ 12ರಂದು ಇಟಾವಾ ಆರೋಗ್ಯ ಕೇಂದ್ರದಲ್ಲಿ ಮೊದಲ ಡೋಸ್ ಪಡೆದಿದ್ದಾರೆ ಎಂದು ಸಾಮಾಜಿಕ ಜಾಲತಾಣಗಳಲ್ಲಿ ಸರ್ಟಿಫಿಕೆಟ್ ಹರಿದಾಡುತ್ತಿದೆ.
ಆದರೆ ತಖಾ ತಹಶೀಲ್ ನಲ್ಲಿರುವ ಆರೋಗ್ಯ ಕೇಂದ್ರದ ಅಧಿಕಾರಿಗಳು ತಾವು ಅಂತಹ ಯಾವುದೇ ಸರ್ಟಿಫಿಕೇಟ್ ನೀಡಿಲ್ಲ ಎಂದು ಹೇಳಿದ್ದಾರೆ. ಇನ್ನು ಇಟಾವಾ ಸಮುದಾಯ ಆರೋಗ್ಯ ಕೇಂದ್ರದ ಮುಖ್ಯಸ್ಥರು ನಮ್ಮ ಐಡಿಯನ್ನು ಡಿಸೆಂಬರ್ 12ರಂದು ಹ್ಯಾಕ್ ಮಾಡಿದ್ದಾರೆ ಎಂದು ಐಡಿ ಕ್ಲೋಸ್ ಮಾಡುವಂತೆ ಸಂಬಂಧ ಪಟ್ಟ ಅಧಿಕಾರಿಗಳಿಗೆ ಪತ್ರ ಬರೆದಿದ್ದೇವೆ ಎಂದು ಹೇಳಿದರು.
ಬೆಳಗಾವಿಯಲ್ಲಿ ಬಂಧಿತರಿಗೆ 14 ದಿನ ನ್ಯಾಯಾಂಗ ಬಂಧನ: ಹಿಂಡಲಗಾ ಜೈಲಿಗೆ ಶಿಫ್ಟ್
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ