ಪ್ರಗತಿವಾಹಿನಿ ಸುದ್ದಿ; ಬೆಂಗಳೂರು: ಚಿನ್ನ ಬೆಳ್ಳಿ ಮೇಲೆ ಇನ್ವೆಸ್ಟ್ ಮಾಡುವ ಪ್ಲಾನ್ ಮಾಡಿದ್ದರೆ ದೈನಂದಿನ ದರ ಬದಲಾವಣೆಯನ್ನು ಗಮನಿಸಲೇ ಬೇಳು. ಹೊಸ ವರ್ಷದ ಹೊಸ್ತಿಲಲ್ಲಿ ಆಭರಣಗಳ ಬೆಲೆ ಎಷ್ಟಿರಬಹುದು ಎಂಬ ಕುತೂಹಲ ಎಲ್ಲರಲ್ಲೂ ಇದ್ದೇ ಇರುತ್ತದೆ.
ಹೂಡಿಕೆ ರೂಪದಲ್ಲಿಯೂ ಚಿನ್ನ, ಬೆಳ್ಳಿ ಉತ್ತಮ ಆಯ್ಕೆ ಆಪತ್ಕಾಲದಲ್ಲಿ ಉಪಯೋಗಕ್ಕೆ ಬರುತ್ತೆ ಎಂಬ ಕಾರಣಕ್ಕೆ ಬಹಳಷ್ಟು ಜನರು ಆಭರಣಗಳನ್ನು ಖರೀದಿಸುವಲ್ಲಿ ಆಸಕ್ತರಾಗಿರುತ್ತಾರೆ. ಹಾಗಾದರೆ ಇಂದು ಯಾವ ನಗರದಲ್ಲಿ ಚಿನ್ನ, ಬೆಳ್ಳಿ ದರ ಎಷ್ಟಿದೆ ಇಲ್ಲಿದೆ ಮಾಹಿತಿ.
ಇಂದು ಚಿನ್ನದ ದರದಲ್ಲಿ ಇಳಿಕೆಯಾಗಿದ್ದು, ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ 22 ಕ್ಯಾರಟ್ 10 ಗ್ರಾಂ ಚಿನ್ನಕ್ಕೆ 45,150 ರೂಪಾಯಿ ಇದೆ. 100 ಗ್ರಾಂ ಚಿನ್ನಕ್ಕೆ 4,51,500 ರೂಪಾಯಿ ಆಗಿದೆ. 24 ಕ್ಯಾರಟ್ 10 ಗ್ರಾಂ ಚಿನ್ನಕ್ಕೆ 49,260 ರೂಪಾಯಿ ಹಾಗೂ 100 ಗ್ರಾಂ ಚಿನ್ನಕ್ಕೆ 4,92,600 ರೂ ಆಗಿದೆ.
ಆದರೆ ಬೆಳ್ಳಿ ದರದಲ್ಲಿ ಏರಿಕೆ ಕಂಡಿದ್ದು, ಕೆಜಿ ಬೆಳ್ಳಿ ದರ 66,300 ರೂಪಾಯಿ ನಿಗದಿಯಾಗಿದೆ.
ಮುಂಬೈನಲ್ಲಿ 22 ಕ್ಯಾರಟ್ 10 ಗ್ರಾಂ ಚಿನ್ನಕ್ಕೆ 47,010 ರೂಪಾಯಿ ಹಾಗೂ 100 ಗ್ರಾಂ ಚಿನ್ನಕ್ಕೆ 4,70,100 ರೂಪಾಯಿ ಆಗಿದೆ. 24 ಕ್ಯಾರಟ್ 10 ಗ್ರಾಂ ಚಿನ್ನಕ್ಕೆ 49,010 ರೂಪಾಯಿ ಆಗಿದೆ. 100 ಗ್ರಾಂ ಚಿನ್ನಕ್ಕೆ 4,90,100 ರೂ.ಆಗಿದೆ. ದೈನಂದಿನ ದರದಲ್ಲಿ 7,900 ರೂ ಏರಿಕೆಯಾಗಿದೆ. ಇನ್ನು ಬೆಳ್ಳಿ ದರದಲ್ಲಿ ಕೆಜಿ ಬೆಳ್ಳಿಗೆ 62,500 ರೂಪಾಯಿ ಆಗಿದೆ.
ಚೆನ್ನೈಯಲ್ಲಿ 22 ಕ್ಯಾರಟ್ 10 ಗ್ರಾಂ ಚಿನ್ನಕ್ಕೆ 45,270 ರೂಪಾಯಿ ಹಾಗೂ 100 ಗ್ರಾಂ ಚಿನ್ನಕ್ಕೆ 4,52,700 ರೂಪಾಯಿ ನಿಗದಿಯಾಗಿದೆ. 24 ಕ್ಯಾರಟ್ 10 ಗ್ರಾಂ ಚಿನ್ನಕ್ಕೆ 49,390 ರೂಪಾಯಿ ಆಗಿದೆ. 100 ಗ್ರಾಂ ಚಿನ್ನಕ್ಕೆ 4,93,900 ರೂಪಾಯಿ ನಿಗದಿಯಾಗಿದೆ.
ಬೆಳ್ಳಿ ದರದಲ್ಲಿ ಕೆಜಿ ಬೆಳ್ಳಿಗೆ 66,300 ರೂಪಾಯಿ ಆಗಿದೆ.
ಹೈದರಾಬಾದ್ ನಲ್ಲಿ 22 ಕ್ಯಾರಟ್ 10 ಗ್ರಾಂ ಚಿನ್ನಕ್ಕೆ 45,150 ರೂಪಾಯಿ ಇದ್ದು, 100 ಗ್ರಾಂ ಚಿನ್ನಕ್ಕೆ 4,51,500 ರೂಪಾಯಿ ನಿಗದಿಯಾಗಿದೆ. 24 ಕ್ಯಾರಟ್ 10 ಗ್ರಾಂ ಚಿನ್ನಕ್ಕೆ 49,260 ರೂಪಾಯಿ ಇದೆ. 100 ಗ್ರಾಂ ಚಿನ್ನಕ್ಕೆ 4,92,600 ರೂಪಾಯಿ ನಿಗದಿಯಾಗಿದೆ. ದೈನಂದಿನ ದರದಲ್ಲಿ 2,200 ರೂಪಾಯಿ ಇಳಿಕೆಯಾಗಿದೆ.
ಬೆಳ್ಳಿದರದಲ್ಲಿ ಕೆಜಿ ಬೆಳ್ಳಿಗೆ 66,300 ರೂಪಾಯಿ ಆಗಿದೆ.
ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪ್ರಕಟ
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ