
ಪ್ರಗತಿವಾಹಿನಿ ಸುದ್ದಿ; ಮುಂಬೈ: ಹೊಸ ವರ್ಷದ ಸಂಭ್ರಮಾಚರಣೆಗೆ ಸಿದ್ಧತೆ ನಡೆಸಿರುವ ಮುಂಬೈ ಮಹಾನಗರದಲ್ಲಿ ಉಗ್ರರ ದಾಳಿ ಭೀತಿ ಎದುರಾಗಿದೆ. ಖಲಿಸ್ತಾನ ಉಗ್ರರು ದಾಳಿ ನಡೆಸುವ ಶಂಕೆ ಹಿನ್ನೆಲೆಯಲ್ಲಿ ಮುಂಬೈನಾದ್ಯಂತ ಹೈ ಅಲರ್ಟ್ ಘೋಷಿಸಲಾಗಿದೆ.
ಗುಪ್ತಚರ ಇಲಾಖೆ ಮಾಹಿತಿ ಹಿನ್ನೆಲೆಯಲ್ಲಿ ಮುಂಬೈನಲ್ಲಿ ಕಟ್ಟೆಚ್ಚರಕ್ಕೆ ಸೂಚಿಸಲಾಗಿದ್ದು, ಸಾರ್ವಜನಿಕ ಸ್ಥಳಗಳಲ್ಲಿ, ದಾದರ್, ಬಾಂದ್ರಾ ಚರ್ಚ್ ಗೇಟ್, ಸಿಎಸ್ ಎಂಟಿ, ಕುರ್ಲಾ ಹಾಗೂ ಪ್ರಮುಖ ನಿಲ್ದಾಣಗಳಲ್ಲಿ ಬಿಗಿ ಭದ್ರತೆ ಕೈಗೊಳ್ಳಲಾಗಿದೆ.
ನಾಳೆ ಎಲ್ಲಾ ಪೊಲೀಸರು ಕರ್ತವ್ಯದಲ್ಲಿರಲಿದ್ದು, ಪೊಲೀಸರ ರಜೆ, ವಾರದ ರಜೆ ರದ್ದು ಮಾಡಲಾಗಿದೆ. ಅಲ್ಲದೇ ನಾಳೆ ಕರ್ತವ್ಯಕ್ಕೆ 3000ಕ್ಕೂ ಹೆಚ್ಚು ರೈಲ್ವೆ ಅಧಿಕಾರಿಗಳನ್ನು ನಿಯೋಜಿಸಲಾಗಿದೆ ಎಂದು ಮುಂಬೈ ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.
ಬಾಲಿವುಡ್ ಬೆಡಗಿ ನೋರಾ ಫತೇಹಿಗೆ ಕೊರೊನಾ ಸೋಂಕು
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ