ಪ್ರಗತಿವಾಹಿನಿ ಸುದ್ದಿ; ಬೆಂಗಳೂರು: ರಾಜ್ಯದಲ್ಲಿ ಹೆಚ್ಚುತ್ತಿರುವ ಕೊರೊನಾ ಸೋಂಕು ನಿಯಂತ್ರಿಸಲು ಸರ್ಕಾರ ಕಠಿಣ ನಿಯಮಗಳನ್ನು ಜಾರಿಗೆ ತಂದಿದ್ದು, ಸಭೆ, ಸಮಾರಂಭಗಳಿಗೂ ನಿರ್ಬಂಧ ವಿದಿಸಿದೆ. ಇದರ ಬೆನ್ನಲ್ಲೇ ಜನವರಿ 7ರಿಂದ ನಡೆಯಬೇಕಿದ್ದ ಬಿಜೆಪಿ ಚಿಂತನಾ ಶಿಬಿರ ಮುಂದೂಡಿಕೆಯಾಗಿದೆ.
ಚಿಕ್ಕಬಳ್ಳಾಪುರ ಜಿಲ್ಲೆ ನಂದಿ ಬೆಟ್ಟದಲ್ಲಿ ಜನವರಿ 7ರಿಂದ ಮೂರು ದಿನಗಳ ಕಾಲ ನಿಗದಿಯಾಗಿದ್ದ ಬಿಜೆಪಿ ಚಿಂತನಾ ಶಿಬಿರ ಮುಂದೂಡಿಕೆಯಾಗಿದೆ ಎಂದು ತಿಳಿದುಬಂದಿದೆ. ಕೋವಿಡ್ ನಿಯಂತ್ರಣ ನಿಟ್ಟಿನಲ್ಲಿ ವೀಕೆಂಡ್ ಕರ್ಫ್ಯೂ ಜಾರಿಯಾಗುತ್ತಿರುವ ಹಿನ್ನೆಲೆಯಲ್ಲಿ ಚಿಂತನಾ ಶಿಬಿರವನ್ನು ಮುಂದೂಡಲಾಗಿದೆ.
ಕೊರೊನಾ ಕಾರಣದಿಂದ ಶಿಬಿರ ಮುಂದೂಡಿಕೆಯಾಗಿರುವುದರಿಂದ ಹೈಕಮಾಂಡ್ ಗೆ ಸಲ್ಲಿಕೆಯಾಗಬೇಕಿದ್ದ ಸಚಿವರ ಮೌಲ್ಯಮಾಪನ ವರದಿ, ಸಂಪುಟ ಪುನರಚನಾ ಪ್ರಕ್ರಿಯೆ ವಿಚಾರ ಕೂಡ ಮುಂದಕ್ಕೆ ಹೋಗಿದ್ದು, ಸಚಿವರು ನಿರಾಳರಾಗಿದ್ದಾರೆ.
ನಂದಿ ಬೆಟ್ಟ ಆತಂಕ: ಬಿಜೆಪಿಯಲ್ಲಿ ತಲ್ಲಣ; ಜಾರಕಿಹೊಳಿ ಸಹೋದರರ ಮುಂದಿನ ನಡೆ ಏನು?
ಇದು ನಾಚಿಕೆಗೇಡಿನ ಸಂಗತಿ; ಪ್ರಜಾತಂತ್ರದ ಮೇಲಿನ ದಾಳಿ ಎಂದು ಗುಡುಗಿದ ಕಂಗನಾ ರಾಣಾವತ್
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ