ಪ್ರಗತಿವಾಹಿನಿ ಸುದ್ದಿ; ಬೆಂಗಳೂರು: ದೈನಂದಿನ ದರ ಬದಲಾವಣೆಯಲ್ಲಿ ಚಿನ್ನ, ಬೆಳ್ಳಿ ದರ ಕೂಡ ಏರಿರ್ಳಿಕೆಯಾಗುವುದು ಸಹಜ. ಕೋರೊನಾ ಮೂರನೇ ಅಲೆ, ಒಮಿಕ್ರಾನ್ ಭೀತಿ ನಡುವೆ ರಾಜ್ಯದಲ್ಲಿ ವೀಕೆಂಡ್ ಕರ್ಫ್ಯೂ ಕೂಡ ಜಾರಿಯಲ್ಲಿತ್ತು. ಕರ್ಫ್ಯೂ ಮುಗಿದ ಬೆನ್ನಲ್ಲೇ ಇಂದು ಸೋಮವಾರ ಚಿನ್ನ, ಬೆಳ್ಳಿ ದರದಲ್ಲಿ ಯಾವೆಲ್ಲ ರೀತಿ ಬದಲಾವಣೆಗಳಾಗಿವೆ ಎಂಬ ಕುತೂಹಲ ಎಲ್ಲರಲ್ಲೂ ಇದ್ದೇ ಇರುತ್ತದೆ.
ಅಂದಹಾಗೇ ಚಿನ್ನದ ದರದಲ್ಲಿ ಕೊಂಚ ಏರಿಕೆ ಕಂಡುಬಂದಿದ್ದು, ಬೆಳ್ಳಿ ದರ ಸ್ಥಿರತೆ ಕಾಯ್ದುಕೊಂಡಿದೆ. ದೇಶದ ಯಾವ ಭಾಗದಲ್ಲಿ ಚಿನ್ನಾಭರಣಗಳ ಬೆಲೆ ಇಂದು ಎಷ್ಟಿದೆ ಇಲ್ಲಿದೆ ಮಾಹಿತಿ.
ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ 22 ಕ್ಯಾರಟ್ 10 ಗ್ರಾಂ ಚಿನ್ನಕ್ಕೆ 44,610 ರೂಪಾಯಿ ಇದೆ. 100 ಗ್ರಾಂ ಚಿನ್ನಕ್ಕೆ 4,46,100 ರೂಪಾಯಿ ಆಗಿದೆ. 24 ಕ್ಯಾರಟ್ 10 ಗ್ರಾಂ ಚಿನ್ನಕ್ಕೆ 48,660 ರೂಪಾಯಿ ಹಾಗೂ 100 ಗ್ರಾಂ ಚಿನ್ನಕ್ಕೆ 4,86,600 ರೂ ಆಗಿದೆ.
ಆದರೆ ಬೆಳ್ಳಿ ದರದಲ್ಲಿ ಸ್ಥಿರತೆ ಕಂಡುಬಂದಿದ್ದು, ಕೆಜಿ ಬೆಳ್ಳಿ ದರ 6೦,700 ರೂಪಾಯಿ ಆಗಿದೆ.
ಮುಂಬೈನಲ್ಲಿ 22 ಕ್ಯಾರಟ್ 10 ಗ್ರಾಂ ಚಿನ್ನಕ್ಕೆ 46,610 ರೂಪಾಯಿ ಹಾಗೂ 100 ಗ್ರಾಂ ಚಿನ್ನಕ್ಕೆ 4,66,100 ರೂಪಾಯಿ ಆಗಿದೆ. 24 ಕ್ಯಾರಟ್ 10 ಗ್ರಾಂ ಚಿನ್ನಕ್ಕೆ 48,610 ರೂಪಾಯಿ ಆಗಿದೆ. 100 ಗ್ರಾಂ ಚಿನ್ನಕ್ಕೆ 4,86,100 ರೂ.ಆಗಿದೆ.
ಇನ್ನು ಬೆಳ್ಳಿ ದರದಲ್ಲಿ ಕೆಜಿ ಬೆಳ್ಳಿಗೆ 60,700 ರೂಪಾಯಿ ಆಗಿದೆ.
ಹೈದರಾಬಾದ್ ನಲ್ಲಿ 22 ಕ್ಯಾರಟ್ 10 ಗ್ರಾಂ ಚಿನ್ನಕ್ಕೆ 44,610 ರೂಪಾಯಿ ಇದ್ದು, 100 ಗ್ರಾಂ ಚಿನ್ನಕ್ಕೆ 4,46,100 ರೂಪಾಯಿ ನಿಗದಿಯಾಗಿದೆ. 24 ಕ್ಯಾರಟ್ 10 ಗ್ರಾಂ ಚಿನ್ನಕ್ಕೆ 48,660 ರೂಪಾಯಿ ಇದೆ. 100 ಗ್ರಾಂ ಚಿನ್ನಕ್ಕೆ 4,86,600 ರೂಪಾಯಿ ನಿಗದಿಯಾಗಿದೆ.
ಬೆಳ್ಳಿದರದಲ್ಲಿ ಕೆಜಿ ಬೆಳ್ಳಿಗೆ 64,600 ರೂಪಾಯಿ ಆಗಿದೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ