ಪ್ರಗತಿವಾಹಿನಿ ಸುದ್ದಿ; ಕೊಟ್ಟಾಯಂ: ಲೈಂಗಿಕ ಚಟುವಟಿಕೆಗಾಗಿ ಪತ್ನಿಯರನ್ನೇ ಬದಲಾಯಿಸಿಕೊಳ್ಳುವ ವಿನಿಮಯ ದಂಧೆಗೆ ಒತ್ತಾಯಿಸುತ್ತಿದ್ದ ವ್ಯಕ್ತಿಯೊಬ್ಬನನ್ನು ಬಂಧಿಸಿರುವ ಪೊಲೀಸರು 6 ಜನರನ್ನು ವಶಕ್ಕೆ ಪಡೆದಿರುವ ಘಟನೆ ಕೇರಳದ ಕೊಟ್ಟಾಯಂ ನಲ್ಲಿ ನಡೆದಿದೆ.
ಫೇಸ್ ಬುಕ್ ಸೇರಿದಂತೆ ಇನ್ನಿತರ ಸಾಮಾಜಿಕ ಜಾಲತಾಣಗಳ ಮೂಲಕ ಇಂಥಹ ದಂಧೆಯನ್ನು ವ್ಯಕ್ತಿ ನಡೆಸುತ್ತಿದ್ದ ಎನ್ನಲಾಗಿದೆ. ಪೊಲೀಸರು ನೀಡಿದ ಮಾಹಿತಿ ಪ್ರಕಾರ ಮಹಿಳೆಯೊಬ್ಬರು ತನ್ನ ಪತಿ ವಿರುದ್ಧ ದೂರು ನೀಡಿದ್ದಳು. ಇಂತಹ ಚಟುವಟಿಕೆಗಾಗಿ ಪತಿ ತನ್ನನ್ನು ಆನ್ ಲೈನ್ ಮೂಲಕ ತನ್ನ ಸ್ನೇಹಿತರಿಗೆ ಪರಿಚಯಿಸಿ ಪ್ರಚೋದಿಸುತ್ತಿದ್ದಾನೆ. ಎಂದು ದೂರಿದ್ದರು. ಪ್ರಕರಣ ದಾಖಲಿಸಿಕೊಂಡು ಕಾರ್ಯಾಚರಣೆ ನಡೆಸಿದಾಗ ಈ ಬಗ್ಗೆ ಕೆಲ ಮಾಹಿತಿ ಸಿಕ್ಕಿದೆ.
ಮಹಿಳೆಯ ಪತಿ ಗಲ್ಫ್ ರಾಷ್ಟ್ರದಿಂದ ವಾಪಸ್ ಆಗಿದ್ದ. ಇದೀಗ ಮಹಿಳೆಯ ಪತಿ ಸೇರಿದಂತೆ 7 ಜನರನ್ನು ಬಂಧಿಸಲಾಗಿದೆ. ಲೈಂಗಿಕತೆಗಾಗಿ ಪಾಲುದಾರರ ವಿನಿಮಯ ಬೃಹತ್ ಜಾಲವೇ ಪತ್ತೆಯಾಗಿದ್ದು, ಅಸಹಜ ಲೈಂಗಿಕತೆಯಲ್ಲಿ ತೊಡಗಿಸಿಕೊಳ್ಳಲು ಅವಕಾಶ ನೀಡಿದ್ದರು. ವಕೀಲರು, ವೈದ್ಯರು ಸೇರಿದಂತೆ ಅನೇಕ ವೃತ್ತಿಪರರು ನಕಲಿ ಗುರುತು ಬಳಸಿಕೊಂಡು ಈ ದಂಧೆಯಲ್ಲಿ ಭಾಗಿಯಾಗಿದ್ದರಲ್ಲದೇ ಕೆಲವರು ಸ್ವಯಂ ಪ್ರೇರಣೆಯಿಂದ ಇಂತಹ ಲೈಂಗಿಕ ಚಟುವಟಿಕೆಯಲ್ಲಿ ತೊಡಗಿದ್ದರು. ಇನ್ನು ಕೆಲವರು ಬಲವಂತದಿಂದ ಭಾಗಿಯಾಗಿದ್ದಾಗಿ ತನಿಖೆ ವೇಳೆ ಬಹಿರಂಗವಾಗಿದೆ.
ಪುಟ್ಟ ಮಗನನ್ನೇ ಕೊಚ್ಚಿ ಕೊಲೆಗೈದ ಹೆತ್ತ ತಾಯಿ
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ