Latest

ಆಭರಣ ಪ್ರಿಯರಿಗೆ ಶಾಕ್; ಹಬ್ಬದ ಸಂದರ್ಭದಲ್ಲಿ ಏರಿಕೆಯಾಯ್ತು ಬಂಗಾರದ ಬೆಲೆ

ಪ್ರಗತಿವಾಹಿನಿ ಸುದ್ದಿ; ಬೆಂಗಳೂರು: ದೈನಂದಿನ ದರ ಬದಲಾವಣೆಯಲ್ಲಿ ಚಿನ್ನ, ಬೆಳ್ಳಿ ದರ ಕೂಡ ಏರಿಳಿಕೆಯಾಗುವುದು ಸಹಜ. ವೈಕುಂಠ ಏಕಾದಶಿ ಸಂದರ್ಭ, ಮಕರ ಸಂಕ್ರಾಂತಿ ವೇಳೆಯಲ್ಲಿ ಆಭರಣ ಪ್ರಿಯರಿಗೆ ಬಂಗಾರದ ಬೆಲೆ ಎಷ್ಟಿರಬಹುದು ಎಂಬ ಕುತೀಹಲ ಇದ್ದೇ ಇರುತ್ತೆ.

ಹಾಗಾದರೆ ಚಿನ್ನ-ಬೆಳ್ಳಿ ದರ ಇಂದು ಯಾವ ನಗರದಲ್ಲಿ ಎಷ್ಟಿದೆ ಇಲ್ಲಿದೆ ಮಹತ್ವದ ಮಾಹಿತಿ. ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಚಿನದ ದರದಲ್ಲಿ ಏರಿಕೆಯಾಗಿದೆ. 22 ಕ್ಯಾರಟ್ 10 ಗ್ರಾಂ ಚಿನ್ನಕ್ಕೆ 44,800 ರೂಪಾಯಿ ಇದೆ. 100 ಗ್ರಾಂ ಚಿನ್ನಕ್ಕೆ 4,48,000 ರೂಪಾಯಿ ಆಗಿದೆ. 24 ಕ್ಯಾರಟ್ 10 ಗ್ರಾಂ ಚಿನ್ನಕ್ಕೆ 48,800 ರೂಪಾಯಿ ಹಾಗೂ 100 ಗ್ರಾಂ ಚಿನ್ನಕ್ಕೆ 4,88,800 ರೂ ಆಗಿದೆ.

ಬೆಳ್ಳಿ ದರದಲ್ಲಿ ಇಳಿಕೆಯಾಗಿದ್ದು, ಕೆಜಿ ಬೆಳ್ಳಿ ದರ 61,000 ರೂಪಾಯಿ ಆಗಿದೆ.

ಚೆನ್ನೈನಲ್ಲಿ 22 ಕ್ಯಾರಟ್ 10 ಗ್ರಾಂ ಚಿನ್ನಕ್ಕೆ 45,010 ರೂಪಾಯಿ ಹಾಗೂ 100 ಗ್ರಾಂ ಚಿನ್ನಕ್ಕೆ 4,50,000 ರೂಪಾಯಿ ಆಗಿದೆ. 24 ಕ್ಯಾರಟ್ 10 ಗ್ರಾಂ ಚಿನ್ನಕ್ಕೆ 49,010 ರೂಪಾಯಿ ಆಗಿದೆ. 100 ಗ್ರಾಂ ಚಿನ್ನಕ್ಕೆ 4,90,100 ರೂ.ಆಗಿದೆ.

ಇನ್ನು ಬೆಳ್ಳಿ ದರದಲ್ಲಿ ಕೆಜಿ ಬೆಳ್ಳಿಗೆ 61,100 ರೂಪಾಯಿ ಆಗಿದೆ.

ಹೈದರಾಬಾದ್ ನಲ್ಲಿ 22 ಕ್ಯಾರಟ್ 10 ಗ್ರಾಂ ಚಿನ್ನಕ್ಕೆ 44,800 ರೂಪಾಯಿ ಇದ್ದು, 100 ಗ್ರಾಂ ಚಿನ್ನಕ್ಕೆ 4,48,000 ರೂಪಾಯಿ ನಿಗದಿಯಾಗಿದೆ. 24 ಕ್ಯಾರಟ್ 10 ಗ್ರಾಂ ಚಿನ್ನಕ್ಕೆ 48,880 ರೂಪಾಯಿ ಇದೆ. 100 ಗ್ರಾಂ ಚಿನ್ನಕ್ಕೆ 4,88,800 ರೂಪಾಯಿ ನಿಗದಿಯಾಗಿದೆ.

ಮುಂಬೈನಲ್ಲಿ 22 ಕ್ಯಾರಟ್ 10 ಗ್ರಾಂ ಚಿನ್ನಕ್ಕೆ 46,940 ರೂಪಾಯಿ ಇದ್ದು, 100 ಗ್ರಾಂ ಚಿನ್ನಕ್ಕೆ 4,69,400 ರೂಪಾಯಿ ನಿಗದಿಯಾಗಿದೆ. 24 ಕ್ಯಾರಟ್ 10 ಗ್ರಾಂ ಚಿನ್ನಕ್ಕೆ 48,940 ರೂಪಾಯಿ ಇದೆ. 100 ಗ್ರಾಂ ಚಿನ್ನಕ್ಕೆ 4,89,400 ರೂಪಾಯಿ ನಿಗದಿಯಾಗಿದೆ.

ಬೆಳ್ಳಿದರದಲ್ಲಿ ಕೆಜಿ ಬೆಳ್ಳಿಗೆ 65,000 ರೂಪಾಯಿ ಆಗಿದೆ.
ಪಾದಯಾತ್ರೆ ಕೂಡಲೇ ನಿಲ್ಲಿಸಿ; ಕಾಂಗ್ರೆಸ್ ನಾಯಕರಿಗೆ ಹೈಕಮಾಂಡ್ ಸೂಚನೆ

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button