22.50 ಕೋಟಿ ವೆಚ್ಚದಲ್ಲಿ ನಿಪ್ಪಾಣಿ-ಕೊಟ್ಟಲಗಿ ರಸ್ತೆ ಅಭಿವೃದ್ಧಿ ಕಾಮಗಾರಿ: ಸಚಿವೆ ಶಶಿಕಲಾ ಜೊಲ್ಲೆ ಭರವಸೆ
ಪ್ರಗತಿವಾಹಿನಿ ಸುದ್ದಿ; ಚಿಕ್ಕೋಡಿ: ಸ್ಥಳೀಯ ವಿಧಾನಸಭಾ ಮತಕ್ಷೇತ್ರ ವ್ಯಾಪ್ತಿಯಲ್ಲಿ ೨೦೨೧-೨೨ನೇ ಸಾಲಿನ ಲೋಕೋಪಯೋಗಿ ಇಲಾಖೆಯ ರಾಜ್ಯ ಹೆದ್ದಾರಿ ಅಭಿವೃದ್ಧಿ ಯೋಜನೆ(ಎಸ್.ಎಚ್.ಡಿ.ಪಿ. ಫೇಸ್-೪ ಸ್ಟೇಜ್-೨) ಅಡಿಯಲ್ಲಿ ನಿಪ್ಪಾಣಿ-ಕೊಟ್ಟಲಗಿ ರಸ್ತೆಯ ಆಯ್ದ ಭಾಗಗಳಲ್ಲಿ ರೂ.೨೨.೫೦ ಕೋಟಿ ವೆಚ್ಚದಲ್ಲಿ ಸುಧಾರಣೆ ಕಾಮಗಾರಿ ನಡೆಯಲಿದೆ. ಟೆಂಡರ್ ಪ್ರಕ್ರಿಯೆ ನಡೆದಿದ್ದು ಶೀಘ್ರದಲ್ಲೆ ಕಾಮಗಾರಿ ಆರಂಭಗೊಳ್ಳಲಿದೆ ಎಂದು ಮುಜರಾಯಿ, ವಕ್ಫ್ ಮತ್ತು ಹಜ್ ಸಚಿವೆ ಶಶಿಕಲಾ ಜೊಲ್ಲೆ ಹೇಳಿದರು.
ನಗರದಲ್ಲಿ ಗುರುವಾರ ಹಮ್ಮಿಕೊಂಡಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ‘ಕ್ಷೇತ್ರದ ಸ್ಥಳೀಯ ನಗರದಿಂದ ಅಕ್ಕೋಳ, ಗಳತಗಾ, ನೇಜ್ ಕ್ರಾಸ್ ವರೆಗಿನ ಸುಮಾರು ೯.೬೭ ಕಿ.ಮೀ. ಉದ್ದ ಆಯ್ದ ಭಾಗದ ಸುಧಾರಣೆ ಮಾಡಲಾಗುವುದು. ಸ್ಥಳೀಯ ಸಂಗೊಳ್ಳಿ ರಾಯಣ್ಣಾ ವೃತ್ತದಿಂದ ಸೋಮನಾಥ ಮಂದಿರದವರೆಗೆ ೦.೬೫ ಕಿ.ಮೀ. ಉದ್ದ ರಸ್ತೆಯ ಡಾಂಬರೀಕರಣ(೧೩ ಮೀಟರ್ ಅಗಲ) ಮಾಡುವುದು, ಎರಡೂ ಬದಿಗೆ(ಪ್ರತಿ ಬದಿಗೆ ೨ ಮೀಟರ್‌ನಂತೆ) ಪೇವರ್ ಬ್ಲಾಕ್ ಅಳವಡಿಕೆ, ಆರ್.ಸಿ.ಸಿ. ಚರಂಡಿ ನಿರ್ಮಿಸಿ ಅದರ ಮೇಲೆ ಸ್ಲ್ಯಾಬ್ ಹಾಕಲಾಗುವುದು. ಸೋಮನಾಥ ಮಂದಿರದಿಂದ ಹಾಲಸಿದ್ಧನಾಥ ಮಂದಿರದವರೆಗೆ ಸುಮಾರು ೦.೮೫ ಕಿ.ಮೀ. ಉದ್ದ ರಸ್ತೆಯ ಡಾಂಬರೀಕರಣ(೧೫ ಮೀಟರ್ ಅಗಲ), ಎರಡೂ ಬದಿಗೆ (ಪ್ರತಿ ಬದಿಗೆ ೨ ಮೀಟರ್‌ನಂತೆ) ಪೇವರ್ ಬ್ಲಾಕ್ ಅಳವಡಿಕೆ, ಒಂದು ಬದಿಗೆ ಆರ್.ಸಿ.ಸಿ. ಚರಂಡಿ ನಿರ್ಮಿಸಿ ಸ್ಲಾö್ಯಬ್ ಹಾಕಲಾಗುವುದು’ ಎಂದರು.
ಹಾಲಸಿದ್ಧನಾಥ ಮಂದಿರದಿಂದ ಲಖನಾಪೂರ ಗ್ರಾಮದವರೆಗೆ ಸುಮಾರು ೨.೧೯ ಕಿ.ಮೀ. ಉದ್ದ ರಸ್ತೆಯ ಡಾಂಬರೀಕರಣ(ಅಗಲ ೭ ಮೀಟರ್), ಎರಡೂ ಬದಿಗೆ ಮುರುಂ ಶೋಲ್ಡರ್(ಪ್ರತಿ ಬದಿಗೆ ೧.೫೦ ಮೀಟರ್‌ನಂತೆ) ಹಾಕುವುದು. ಲಖನಾಪೂರ ಗ್ರಾಮ ಪರಿಮಿತಿಯಲ್ಲಿ ೦.೩೫ ಕಿ.ಮೀ. ರಸ್ತೆಯ ಡಾಂಬರೀಕರಣ(ಅಗಲ ೧೦ ಮೀಟರ್), ಎರಡೂ ಬದಿಗೆ ಮುರುಂ ಶೋಲ್ಡರ್(ಒಂದು ಬದಿಗೆ ೧.೫೦ ಮೀಟರ್‌ನಂತೆ), ಲಖನಾಪೂರ ಗ್ರಾಮದಿಂದ ಅಕ್ಕೋಳ ಗ್ರಾಮದವರೆಗೆ ಸುಮಾರು ೩.೮೯ ಕಿ.ಮೀ. ಉದ್ದ ರಸ್ತೆಯ ಡಾಂಬರೀಕರಣ(ಅಗಲ ೭ ಮೀಟರ್), ಎರಡೂ ಬದಿಗೆ ಮುರುಂ ಶೋಲ್ಡರ್(ಒಂದು ಬದಿಗೆ ೧.೫೦ ಮೀಟರ್‌ನಂತೆ), ಅಕ್ಕೋಳ ಗ್ರಾಮ ಪರಿಮಿತಿಯಲ್ಲಿ ೧.೨೫ ಕಿ.ಮೀ. ರಸ್ತೆಯ ಡಾಂಬರೀಕರಣ(ಅಗಲ ೧೦ ಮೀಟರ್), ಎರಡೂ ಬದಿಗೆ ಮುರುಂ ಶೋಲ್ಡರ್(ಒಂದು ಬದಿಗೆ ೧.೫೦ ಮೀಟರ್‌ನಂತೆ), ಎರಡೂ ಬದಿಗೆ ವಿದ್ಯುತ್ತೀಕರಣ, ಅಕ್ಕೋಳ ಗ್ರಾಮದಿಂದ ಮಮದಾಪೂರ ಗ್ರಾಮದವರೆಗೆ ಸುಮಾರು ೦.೪೯ ಕಿ.ಮೀ. ಉದ್ದ ಡಾಂಬರೀಕರಣ(ಅಗಲ ೭ ಮೀಟರ್), ಎರಡೂ ಬದಿಗೆ ಮುರುಂ ಶೋಲ್ಡರ್(ಒಂದು ಬದಿಗೆ ೧.೫೦ ಮೀಟರ್‌ನಂತೆ) ಹಾಕಲಾಗುವುದು’ ಎಂದರು.
‘ಈ ರಸ್ತೆ ಅಭಿವೃದ್ಧಿ ಮಧ್ಯೆ ೧೩ ಚಿಕ್ಕ ಸೇತುವೆಗಳನ್ನು ನಿರ್ಮಿಸಲಾಗುವುದು ಹಾಗೂ ಲಖನಾಪೂರ ಗ್ರಾಮದ ಬಳಿಯ ನಾಲಾ ಬದಿಗೆ ತಡೆಗೋಡೆ ನಿರ್ಮಿಸಲಾಗುವುದು’ ಎಂದರು.
ಲೋಕೋಪಯೋಗಿ ಇಲಾಖೆಯ ಕಾರ್ಯಕಾರಿ ಅಭಿಯಂತ ಭರತ ಬೆಡಕಿಹಾಳೆ ಮಾತನಾಡಿ ‘ಈ ರಸ್ತೆ ನಿರ್ಮಾಣಕ್ಕಾಗಿ ಸಚಿವೆ ಶಶಿಕಲಾ ಜೊಲ್ಲೆ ಮತ್ತು ಸಂಸದ ಅಣ್ಣಾಸಾಹೇಬ ಜೊಲ್ಲೆಯವರು ಮಂಜೂರಿ ಮಾಡಿಸಿಕೊಂಡು ಬಂದಿದ್ದಾರೆ. ರಸ್ತೆಯಲ್ಲಿ ಅತಿಕ್ರಮಣ ಮಾಡಿದ ಸಾರ್ವಜನಿಕರು ಸ್ವಇಚ್ಛೆಯಿಂದ ತೆರವುಗೊಳಿಸಿಬೇಕು. ಅತಿಕ್ರಮಣ ಮಾಡಿದವರಿಗೆ ಈಗಾಗಲೇ ನೋಟಿಸು ಕಳುಹಿಸಲಾಗಿದ್ದು ಕೂಡಲೇ ಮಾಡದಿದ್ದಲ್ಲಿ ಕಾನೂನು ಕ್ರಮ ಕೈಕೊಳ್ಳಲಾಗುವುದು’ ಎಂದರು.
ಬೆಳಗಾವಿಯಲ್ಲಿ ಒಂದೇ ದಿನ 276 ಜನರಿಗೆ ಸೋಂಕು; ಓರ್ವ ಸಾವು
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ