ಪ್ರಗತಿವಾಹಿನಿ ಸುದ್ದಿ; ಬೆಳಗಾವಿ: ಬೆಳಗಾವಿ ಜಿಲ್ಲೆಯಲ್ಲಿ ಕೋವಿಡ್ ಅಟ್ಟಹಾಸ ಹೆಚ್ಚುತ್ತಿದ್ದು, ಮಕ್ಕಳು, ವಿದ್ಯಾರ್ಥಿಗಳಲ್ಲಿ ಕೊರೊನಾ ಸೋಂಕು ವ್ಯಾಪಕವಾಗಿ ಹರಡುತ್ತಿದೆ. ಈ ನಡುವೆ ಜಿಲ್ಲಾಸ್ಪತ್ರೆ ಬಿಮ್ಸ್ ಗೆ ದಾಖಲಾಗಿದ್ದ ಮೂವರು ಪುಟ್ಟ ಮಕ್ಕಳು ನಿಗೂಢವಾಗಿ ಸಾವನ್ನಪ್ಪಿರುವುದು ಆತಂಕ ಇಮ್ಮಡಿಗೊಂಡಿದೆ.
ಬೆಳಗಾವಿ ಜಿಲ್ಲಾಸ್ಪತ್ರೆ ಬಿಮ್ಸ್ ಗೆ ಮೂರು ದಿನಗಳ ಹಿಂದೆ ದಾಖಲಾಗಿದ್ದ ಮೂವರು ಮಕ್ಕಳು ಇದೀಗ ಏಕಾಏಕಿ ಸಾವನ್ನಪ್ಪಿದ್ದಾರೆ ಎಂದು ತಿಳಿದುಬಂದಿದೆ.
ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದ 1 ವರ್ಷದ 1 ತಿಂಗಳ ಮಗು ಪವಿತ್ರ, 1 ವರ್ಷದ 2 ತಿಂಗಳ ಮಗು ಉಮೇಶ್ ಹಾಗೂ ಒಂದುವರೆ ವರ್ಷದ ಮಗು ಚೇತನ ಪೂಜಾರಿ ಎಂಬ ಪುಟಾಣಿ ಮಕ್ಕಳು ಇದೀಗ ಮೃತಪಟ್ಟಿದ್ದು, ತನಿಖೆ ಮುಂದುವರೆದಿದೆ.
ಮೂರು ದಿನಗಳ ಹಿಂದೆ ಮಕ್ಕಳಿಗೆ ರೂಬೆಲ್ಲಾ ಚುಚ್ಚು ಮದ್ದು ನೀಡಲಾಗಿತ್ತು. ಚುಚ್ಚು ಮದ್ದು ಬಳಿಕ ಮಕ್ಕಳು ಅಸ್ವಸ್ಥರಾಗಿದ್ದರು ಎನ್ನಲಾಗಿದೆ. ಮಕ್ಕಳಿಗೆ ಹಾಕಿರುವ ಯಾವುದೋ ಲಸಿಕೆಯಿಂದಾಗಿಯೇ ಮಕ್ಕಳು ಮೃತಪಟ್ಟಿದ್ದಾರೆ ಎಂದು ಕುಟುಂಬಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಮಕ್ಕಳ ಮರಣೋತ್ತರ ಪರೀಕ್ಷೆ ಬಳಿಕ ಪುಟ್ಟ ಮಕ್ಕಳ ನಿಗೂಢ ಸಾವಿನ ಬಗ್ಗೆ ಕಾರಣ ತಿಳಿಯಲಿದೆ.
ಬೆಳಗಾವಿ ಮಾರುಕಟ್ಟೆಯಲ್ಲಿ ಕೋವಿಡ್ ರೂಲ್ಸ್ ಬ್ರೇಕ್; ವೀಕೆಂಡ್ ಕರ್ಫ್ಯೂಗೂ ಡೋಂಟ್ ಕೇರ್
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ