
ಪ್ರಗತಿ ವಾಹಿನಿ ಸುದ್ದಿ; ಬೆಂಗಳೂರು: ನಗರಸಭೆಗಳಲ್ಲಿ ಆಡಳಿತ ವ್ಯವಸ್ಥೆ ಬಲಪಡಿಸಲು ಸರಕಾರ ಹೊಸ ಹುದ್ದೆಯನ್ನೇ ಸೃಷ್ಟಿಮಾಡಿದೆ. ರಾಜ್ಯದ ಗ್ರೇಡ್ 2 ನಗರಸಭೆಗಳಲ್ಲಿ ಇನ್ನು ಮುಂದೆ ಲೆಕ್ಕಾಧಿಕಾರಿಗಳು ನಿಯೋಜನೆಗೊಳ್ಳಲಿದ್ದಾರೆ.
ರಾಜ್ಯದ ಒಟ್ಟು 44 ಗ್ರೇಡ್ 2 ನಗರಸಭೆಗಳಲ್ಲಿ ಸರಕಾರ ಲೆಕ್ಕಾಧಿಕಾರಿಗಳನ್ನು ನೇಮಕ ಮಾಡಲಿದೆ. ಈಗಾಗಲೇ ಲೆಕ್ಕಾಧಿಕಾರಿ ಹುದ್ದೆಯ ವೇತನ ಶ್ರೇಣಿ ಸಹ ನಿಗದಿಯಾಗಿದೆ. ನಗರಾಭಿವೃದ್ಧಿ ಇಲಾಖೆಯ ಅಧೀನ ಕಾರ್ಯದರ್ಶಿ ಕೆ. ಎಲ್. ಪ್ರಸಾದ ಈ ಕುರಿತು ಆದೇಶ ಹೊರಡಿಸಿದ್ದಾರೆ.
ಹೊರೆ ಕಡಿಮೆಯಾಗಲಿದೆ
ಪೌರಾಡಳಿತ ನಿರ್ದೇಶನಾಲಯದ ನಿರ್ದೇಶಕರು ಅಧಿಕಾರಿ ಮತ್ತು ನೌಕರರ ನೇಮಕಾತಿ ನಿಯಮಗಳನ್ನು ರಚಿಸಲು ಪ್ರಸ್ತಾವನೆ ಸಲ್ಲಿಸಿದ್ದರು. ಪ್ರಸ್ತಾವನೆಯಲ್ಲಿ ವಿವಿಧ ವೃಂದಗಳ ಒಟ್ಟು 1765 ಹುದ್ದೆಗಳನ್ನು ರದ್ದುಪಡಿಸಲು ಹಾಗೂ 958 ಹುದ್ದೆಗಳನ್ನು ಹೊಸದಾಗಿ ಸೃಜಿಸಲು ಉಲ್ಲೇಖಿಸಲಾಗಿತ್ತು. ಉಲ್ಲೇಖಿತ ಹುದ್ದೆಗಳನ್ನು ರದ್ದುಪಡಿಸಿದಲ್ಲಿ ವಾರ್ಷಿಕವಾಗಿ 63.44 ಕೋಟಿ ರೂ. ಉಳಿತಾಯವಾಗಲಿದ್ದು ಹೊಸ ಹುದ್ದೆಗಳ ಸೃಜನೆಯಿಂದ 37.50 ರೂ. ವೆಚ್ಚವಾಗಲಿದೆ. ಇದರಿಂದ ಸರಕಾರಕ್ಕೆ ಒಟ್ಟಾರೆ ಹೊರೆ ಕಡಿಮಯಾಗಲಿದೆ. ಈ ಪ್ರಸ್ತಾವನೆಯ ಆಧಾರದಲ್ಲಿ ಗ್ರೇಡ್ -2 ನಗರಸಭೆಗಳಿಗೆ ಲೆಕ್ಕಾಧಿಕಾರಿ ಹುದ್ದೆಗಳ ಸೃಜನೆಯಾಗಿದೆ. ಲೆಕ್ಕಾಧಿಕಾರಿ ಹುದ್ದೆಗಳಿಗೆ ವೇತನ ಶ್ರೇಣಿ 43,100-83900 ಆಗಿರುತ್ತದೆ.
1639 ಮಕ್ಕಳಿಗೆ ಕೊರೊನಾ ಸೋಂಕು; ಜಿಲ್ಲೆಯಲ್ಲಿ ಹೆಚ್ಚಿದ ಆತಂಕ