
ಪ್ರಗತಿವಾಹಿನಿ ಸುದ್ದಿ; ಕುಮಟಾ: ಸಂಸದ ಅನಂತ ಕುಮಾರ್ ಹೆಗಡೆ ಮತ್ತೊಮ್ಮೆ ರಾಜಕೀಯದಿಂದ ನಿವೃತ್ತಿಯಾಗುವ ಸುಳಿವು ನೀಡಿದ್ದು, ಮುಂದಿನ ರಾಜಕೀಯದ ಬಗ್ಗೆ ಆಸೆ ಇಟ್ಟುಕೊಂಡಿಲ್ಲ ಎಂದು ಹೇಳಿದ್ದಾರೆ.
2021ರ ಮಾರ್ಚ್ ತಿಂಗಳಿನಲ್ಲಿ ಕಾಲು ನೋವಿಗೆ ಶಸ್ತ್ರ ಚಿಕಿತ್ಸೆಗೆ ಒಳಗಾಗಿದ್ದ ಅವರು ರಾಜಕೀಯ ನಿವೃತ್ತಿಯ ಸುಳಿವು ನೀಡುವ ರೀತಿಯಲ್ಲಿ ಪ್ರಕಟಣೆ ಹೊರಡಿಸಿದ್ದರು. ಈಗ ಮತ್ತೆ ಅಂತಹುದೇ ರೀತಿಯಲ್ಲಿ ಮಾತನಾಡಿದ್ದಾರೆ.
ಒಂದಿಲ್ಲೊಂದು ಆರೋಗ್ಯ ಸಮಸ್ಯೆಯಿಂದ ಬಳಲುತ್ತಿರುವ ಅನಂತಕುಮಾರ ಹೆಗಡೆಗೆ ಸಂಸದರಾಗಿ ಸಕ್ರೀಯವಾಗಿ ಕ್ಷೇತ್ರದ ಕೆಲಸ ಕಾರ್ಯಗಳಲ್ಲಿ ತೊಡಗಿಸಿಕೊಳ್ಳಲು ಆಗುತ್ತಿಲ್ಲ. ಹಾಗಾಗಿ ರಾಜಕೀಯದಿಂದಲೇ ದೂರ ಸರಿಯುವ ಚಿಂತನೆ ನಡೆಸಿದ್ದಾರೆನ್ನಲಾಗಿದೆ.
ಕುಮಟಾ ತಾಲೂಕಿನ ಕಂದವಳ್ಳಿಯಲ್ಲಿ ಪ್ರಧಾನ ಮಂತ್ರಿ ಗ್ರಾಮ ಸಡಕ್ ಯೋಜನೆಯ ವಿವಿಧ ರಸ್ತೆ ಕಾಮಗಾರಿಗೆ ಶಂಕು ಸ್ಥಾಪನೆ ನೆರವೇರಿಸಿ ಮಾತನಾಡಿದ ಸಂಸದರು, ರಾಜಕಾರಣದಲ್ಲಿ ಹೀಗೇ ಆಗಬೇಕು ಎಂದು ನಾನೆಂದೂ ಕನಸು ಕಂಡಿಲ್ಲ. ಇಷ್ಟು ದಿನ ರಾಜಕೀಯದಲ್ಲಿ ಇದ್ದದ್ದೇ ನನ್ನ ಪುಣ್ಯ. ಇಷ್ಟು ವರ್ಷ ಪ್ರೀತಿ ವಿಶ್ವಾಸ ತೋರಿದ್ದೀರಿ. ಅದೇ ಸಂತೋಷ. ಮುಂದಿನ ರಾಜಕೀಯದ ಬಗ್ಗೆ ಆಸೆಯಿಲ್ಲ ಎಂದು ವೈರಾಗ್ಯದ ಮಾತುಗಳನ್ನಾಡಿದ್ದಾರೆ.
ವಿರೋಧ ವ್ಯಕ್ತವಾದರೂ ಪರವಾಗಿಲ್ಲ, ಜಿಲ್ಲೆಯಲ್ಲಿ ಬಂದರು, ನ್ಯಾಷನಲ್ ಹೈವೆ, ಏರ್ ಪೋರ್ಟ್, ರೈಲ್ವೆ ಕೆಲಸಗಳೇ ಅಗತ್ಯವಾಗಿ ಆಗಬೇಕಿದೆ. ಉತ್ತರ ಕನ್ನಡ ಜಿಲ್ಲೆ ಇನ್ನೂ ನೂರು ವರ್ಷಗಳ ಕಾಲ ಹಿಂದಿರುಗಿ ನೋಡಬಾರದು. ಅದಕ್ಕೆ ಪೂರಕವಾದ ಕೆಲಸಗಳಿಗೆ ಚಾಲನೆ ನೀಡಲಾಗಿದೆ ಎಂದರು.
ಅನಂತಕುಮಾರ ಹೆಗಡೆ ರಾಜಕೀಯ ನಿವೃತ್ತಿ?
ಸಿಎಂ ಬಸವರಾಜ ಬೊಮ್ಮಾಯಿ ಕೆಂಡಾಮಂಡಲವಾಗಿದ್ದೇಕೆ? ಯಾರ ವಿರುದ್ಧ ಈ ಆಕ್ರೋಶ? ಇಲ್ಲಿದೆ ಪೂರ್ಣ ಮಾಹಿತಿ
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ