Kannada NewsKarnataka News

ಸುಳೇಬಾವಿ ಲಕ್ಷ್ಮಿ ದೇವಿಗೆ ಕುಟುಂಬ ಸಮೇತ ಉಡಿ ತುಂಬಿದ ಲಕ್ಷ್ಮಿ ಹೆಬ್ಬಾಳಕರ್

ಪ್ರಗತಿವಾಹಿನಿ ಸುದ್ದಿ, ​ಬೆಳಗಾವಿ ಬೆಳಗಾವಿ ಗ್ರಾಮೀಣ ಕ್ಷೇತ್ರದ ಸುಳೇಭಾವಿ ಗ್ರಾಮದ ಆದಿಶಕ್ತಿ ಶ್ರೀ ಮಹಾಲಕ್ಷ್ಮಿ ದೇವಸ್ಥಾನಕ್ಕೆ​ ಶಾಸಕಿ ಲಕ್ಷ್ಮಿ ಹೆಬ್ಬಾಳಕರ್ ಕುಟುಂಬ ಸಮೇತ ತೆರಳಿ ದೇವಿಗೆ ಉಡಿ ತುಂಬಿದರು. 
 
 ತಾಯಿ​ ಗಿರಿಜಾ ಹಟ್ಟಿಹೊಳಿ, ಸಹೋದರ ಹಾಗೂ ವಿಧಾನ ಪರಿಷತ್ ಸದಸ್ಯ​ ಚನ್ನರಾಜ ಹಟ್ಟಿಹೊಳಿ, ಪುತ್ರ ​ಮೃಣಾಲ ಹೆಬ್ಬಾಳಕರ್​ ಸೊಸೆ ನಂದಿನಿ ಜೊತೆ ತೆರಳಿ ಶ್ರೀ ಮಹಾಲಕ್ಷ್ಮಿ ದೇವಿಗೆ ಉಡಿ ತುಂ​ಬಿ​ದರು.
 ದೇವಸ್ಥಾನದ ಕಮೀಟಿಯವ​ರು ಹೆಬ್ಬಾಳಕರ್ ಕುಟುಂಬವನ್ನು ಸನ್ಮಾನಿಸಿದರು.
ಈ ಸಂದರ್ಭದಲ್ಲಿ ಮಹಾಲಕ್ಷ್ಮಿ ದೇವಿಯ ಅನುಗ್ರಹ​ ಕ್ಷೇತ್ರದ ಜನರ ಮೇಲಿರಲಿ ಹಾಗೂ ನಾಡಿನ​ ಜನರಿಗೆಲ್ಲ​ ಒಳಿತಿಗಾಗಿ​ ಎಂದು ಪ್ರಾರ್ಥಿಸಿದೆ​ ಎಂದು ಹೆಬ್ಬಾಳಕರ್ ತಿಳಿಸಿದರು.​

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button