ಪ್ರಗತಿವಾಹಿನಿ ಸುದ್ದಿ, ಮುಂಬೈ – ಆಭರಣ ಮಳಿಗೆಯಿಂದ ೮.೧೯ ಕೋಟಿ ರೂ ಮೌಲ್ಯದ ಬಂಗಾರದ ಆಭರಣಗಳನ್ನು ಕದ್ದಿದ್ದ ೧೦ ಕಳ್ಳರನ್ನು ಮುಂಬೈ ಪೊಲೀಸರು ಬಂಧಿಸಿದ್ದಾರೆ. ಬಂಧಿತರು ರಾಜಸ್ತಾನ ಮತ್ತು ಮಧ್ಯ ಪ್ರದೇಶ ಮೂಲದವರಾಗಿದ್ದಾರೆ. ಬಂಧಿತರಲ್ಲಿ ಓರ್ವ ಅದೇ ಆಭರಣ ಮಳಿಗೆಯಲ್ಲಿ ಕೆಲಸ ಮಾಡುತ್ತಿದ್ದ ಸಿಬ್ಬಂದಿಯಾಗಿದ್ದಾರೆ.
ದಕ್ಷಿಣ ಮುಂಬೈನ ಆಭರಣ ಮಳಿಗೆಯೊಂದರಲ್ಲಿ ಜ.೧೪ರಂದು ಕಳುವಾಗಿತ್ತು. ಚಾಲಾಕಿ ಕಳ್ಳರು ಮಳಿಗೆಯಲ್ಲಿ ಅಳವಡಿಸಿದ್ದ ಸಿಸಿಟಿವಿಯನ್ನೂ ಸಹ ಹೊತ್ತೊಯ್ದಿದ್ದರು. ಆದರೆ ಕಳುವಾದ ಮಾರನೇ ದಿನದಿಂದ ಅಂಗಡಿಯ ಸಿಬ್ಬಂದಿ ಗಣೇಶ ಕುಮಾರ್ ಕೆಲಸಕ್ಕೆ ಬಾರದ ಹಿನ್ನೆಲೆಯಲ್ಲಿ ಅನುಮಾನಗೊಂಡ ಪೊಲೀಸರು ಆ ಸಿಬ್ಬಂದಿಯ ಮೊಬೈಲ್ ಟ್ರ್ಯಾಕ್ ಮಾಡಿದಾಗ ರಾಜಸ್ತಾನದಲ್ಲಿರುವುದು ಪತ್ತೆಯಾಗಿದೆ.
ಸಿಬ್ಬಂದಿಯನ್ನು ಹೆಡೆಮುರಿಕಟ್ಟಿದ ಪೊಲೀಸರು ಬಾಯ್ಬಿಡಿಸಿದಾಗ ಇನ್ನುಳಿದವರ ಪತ್ತೆಯಾಗಿದೆ. ಆರೋಪಿಗಳಾದ ರಾಜೇಶ ಪ್ರಜಾಪತಿ, ಕೈಲಾಶ್‌ಕುಮಾರ್ ಭಟ್, ಹಿಮ್ಮತ್‌ಸಿಂಗ್ ಬಾಲಿಯಾ, ಲೋಕೇಂದ್ರ ರಜಪೂತ್, ಪ್ರಹ್ಲಾದ್‌ಸಿಂಗ್ ಚೌಹಾನ್, ಕಿಶನ್ ಚೌಹಾಣ್, ಶ್ಯಾಮಲಾಲ್ ಸೋನಿ, ವಿಕ್ರಂ ಕುಮಾರ್ ಮತ್ತು ಉತ್ತಮ್ ಗಂಚಿ ಎಂಬುವವರನ್ನು ಪೊಲೀಸರು ಬಂಧಿಸಿದ್ದಾರೆ.
ಡಾ.ಸೌಂದರ್ಯ ಆತ್ಮಹತ್ಯೆಗೆ ಕಾರಣವಾಯ್ತಾ ಬಾಣಂತಿ ಸನ್ನಿ?
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ