Kannada NewsKarnataka News

ಸವದತ್ತಿ ಯಲ್ಲಮ್ಮ ಸೇರಿ ಬೆಳಗಾವಿ ಜಿಲ್ಲೆಯ 9 ದೇವಸ್ಥಾನಗಳು ಓಪನ್: ಷರತ್ತು ಅನ್ವಯ

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ –  ಕೋವಿಡ್-೧೯ ನಿಯಂತ್ರಿಸುವ ಹಿನ್ನಲೆಯಲ್ಲಿ ಜಿಲ್ಲೆಯ ಪ್ರಮುಖ ದೇವಸ್ಥಾನಗಳಿಗೆ ವಿಧಿಸಲಾಗಿದ್ದ ನಿಬಂಧವನ್ನು ತೆರವುಗೊಳಿಸಿ ಸಾರ್ವಜನಿಕರಿಗೆ ಷರತ್ತುಬದ್ಧ ದರ್ಶನಕ್ಕೆ ಅವಕಾಶ ಕಲ್ಪಿಸಿ ಜಿಲ್ಲಾಧಿಕಾರಿ ಎಂ.ಜಿ ಹಿರೇಮಠ ಆದೇಶ ಹೊರಡಿಸಿರುತ್ತಾರೆ.

ಸವದತ್ತಿ ಯಲ್ಲಮ್ಮನಗುಡ್ಡದ ರೇಣುಕಾ ಯಲ್ಲಮ್ಮ ದೇವಸ್ಥಾನ, ಹಾಗೂ ಜೋಗಳಭಾವಿ ಸತ್ತೆಮ್ಮ ದೇವಿ ದೇವಸ್ಥಾನ, ರಾಮದುರ್ಗದ ಗೊಡಚಿ ವೀರಭದ್ರೇಶ್ವರ ದೇವಸ್ಥಾನ, ರಾಯಬಾಗದ ಚಿಂಚಲಿ ಮಾಯಕ್ಕದೇವಿ ದೇವಸ್ಥಾನ, ಬೆಳಗಾವಿಯ ಪಂತಬಾಳೇಕುಂದ್ರಿ ದತ್ತ ದೇವಸ್ಥಾನ, ಹುಕ್ಕೇರಿಯ ಬಡಕುಂದ್ರಿ ಹೊಳೆಮ್ಮ ದೇವಿ ದೇವಸ್ಥಾನ, ಕಾಗವಾಡದ ಮಂಗಸೂಳಿ ಮಲ್ಲಯ್ಯ ದೇವಸ್ಥಾನ, ಅಥಣಿಯ ಖಿಳೇಗಾಂವ ಬಸವೇಶ್ವರ ದೇವಸ್ಥಾನ, ಹಾಗೂ ಕೊಕಟನೂರ ರೇಣುಕಾ ಯಲ್ಲಮ್ಮ ದೇವಸ್ಥಾನಗಳಿಗೆ ಕೋವಿಡ್ ನಿಯಮಾವಳಿ ಅನುಸಾರ ಭಕ್ತರಿಗೆ ಪ್ರವೇಶಕ್ಕಾಗಿ ಸೂಚಿಸಲಾಗಿದೆ.

ಎರಡೂ ಡೋಸ್ ಕೋವಿಡ್ ಲಸಿಕೆ ಪಡೆದವರು ಮಾತ್ರವೇ ಸಾಮಾಜಿಕ ಅಂತರ ಕಾಯ್ದುಕೊಂಡು ಸರದಿ ಸಾಲಿನಲ್ಲಿ ನಿಂತು ನಿಗದಿತ ಸಮಯದಲ್ಲಿ ದೇವಸ್ಥಾನಗಳಿಗೆ ಭೇಟಿ ನೀಡಿ ದರ್ಶನ ಪಡೆದುಕೊಳ್ಳುವುದಕ್ಕೆ ಅವಕಾಶ ಕಲ್ಪಿಸಿಲಾಗಿದೆ.

ಈ ಮೊದಲು ಫೆಬ್ರುವರಿ ೨೮ ವರೆಗೆ ದೇವಸ್ಥಾನಗಳಿಗೆ ವಿಧಿಸಲಾಗಿದ್ದ ನಿಬಂಧಿತ ನಿಯಮಗಳನ್ನ ಭಾಗಶಃ ಸಡಿಲಗೊಳಿ ಜ.೩೧ ರಿಂದ ಅನ್ವಯ ಆಗುವಂತೆ ಆದೇಶ ಹೊಡಿಸಿರುವ ಜಿಲ್ಲಾಧಿಕಾರಿಗಳು ಶೇ. ೫೦ ರ? ಭಕ್ತರಿಗೆ ಮಾತ್ರವೇ ದರ್ಶನಕ್ಕೆ ಅನುಮತಿ ನೀಡಲಾಗಿದೆ ಇನ್ನುಳಿದಂತೆ ಜಿಲ್ಲೆಯಲ್ಲಿ ವಿಶೇ? ಉತ್ಸವ, ಜಾತ್ರೆ ಹಾಗೂ ಯಾವುದೇ ಧಾರ್ಮಿಕ ಕಾರ್ಯಕ್ರಮಗಳ ನಿ?ಧಾಜ್ಞೆ ಮುಂದಿನ ಆದೇಶದವರೆಗೆ ಜಾರಿಯಲ್ಲಿರುತ್ತದೆ.

ಷರತ್ತುಗಳು:

ದೇವಾಲಯಗಳಲ್ಲಿ ಜನಸಂದಣಿ ಸೇರುವಂತಹ ಎಲ್ಲಾ ಸೇವೆ, ವಿಶೇ? ಉತ್ಸವ, ಜಾತ್ರೆ ಕಾರ್ಯಕ್ರಮಗಳನ್ನು ಮುಂದಿನ ಆದೇಶದವರೆಗೆ ನಿಬಂಧಿಸಲಾಗಿದೆ.

ದರ್ಶನಕ್ಕೆ ಆಗಮಿಸುವ ಸಾರ್ವಜನಿಕ ಭಕ್ತಾದಿಗಳಿಗೆ ಸಾಮಾಜಿಕ ಅಂತರದೊಂದಿಗೆ ಸರತಿ ಸಾಲಿನಲ್ಲಿ ಸರಾಗವಾಗಿ ಸಾಗಲು ವ್ಯವಸ್ಥೆ ಕಲ್ಪಿಸಬೇಕು ಹಾಗೂ ಇನ್ನಿತರೆ ಎಲ್ಲ ಅಗತ್ಯ ಮೂಲಭೂತ ವ್ಯವಸ್ಥೆಗಳನ್ನು ಕಲ್ಪಿಸತಕ್ಕದ್ದು.

ಸರ್ಕಾರದ ಮಾರ್ಗಸೂಚಿಯ ಅನ್ವಯ ಲಸಿಕೆ ಪಡೆದ ೫೦ ಜನರನ್ನು ಮೀರಬಾರದು. ದೇವಾಲಯಗಳ ಪ್ರಾಂಗಣ ಪ್ರವೇಶ ಪೂರ್ವದಲ್ಲಿ ಸಾರ್ವಜನಿಕರ/ಭಕ್ತಾಧಿಗಳ ದೇಹದ ಉಷ್ಣಾಂಶ ಪರಿಶೀಲಿಸಿ, ದೇಹದ ಉಷ್ಣಾಂಶ ಸುಸ್ಥಿತಿಯಲ್ಲಿರುವವರಿಗೆ ಮಾತ್ರ ದರ್ಶನಕ್ಕೆ ಅವಕಾಶ ಕಲ್ಪಿಸಬೇಕು.

ದಿನನಿತ್ಯ ಸಾರ್ವಜನಿಕ ಭಕ್ತಾಧಿಗಳ ಜನಜಂಗುಳಿಗೆ ಅವಕಾಶ ಇರುವುದಿಲ್ಲ.ಕೋವಿಡ್ -೧೯ ಮಾರ್ಗಸೂಚಿಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು.

ದರ್ಶನಕ್ಕೆ ಮುಕ್ತಗೊಳಿಸಿದ ತರುವಾಯ ಮಾರ್ಗಸೂಚಿಗಳ ಉಲ್ಲಂಘನೆ ಕಂಡುಬಂದಲ್ಲಿ , ಸದರಿ ಆದೇಶವನ್ನು ರದ್ದುಪಡಿಸಿ ದರ್ಶನ ನಿಬಂಧಿಸಲಾಗುವುದು.

ದೇವಾಲಯಗಳ ದರ್ಶನಕ್ಕೆ ಮುಕ್ತಗೊಳಿಸಿದ ತರುವಾಯ ಅವಶ್ಯವಿದ್ದಲ್ಲಿ ಪರಿಸ್ಥಿತಿ ಅವಲೋಕನೆಯಿಂದ ಯಾವುದೇ ಹೆಚ್ಚುವರಿ ಷರತ್ತುಗಳನ್ನು ವಿಧಿಸಲಾಗುವುದು.

ಕೋವಿಡ್ -೧೯ (ಕರೋನಾ) ವೈರಾಣುವಿನ ಹರಡುವಿಕೆಯನ್ನು ನಿಯಂತ್ರಿಸಲು ಹೊರಡಿಸಿರುವ ಸರ್ಕಾರದ ಮಾರ್ಗಸೂಚಿಗಳನ್ನು ಉಲ್ಲಂಘಿಸಿದಲ್ಲಿ ಸಂಬಂಧಿಸಿದವರ ವಿರುದ್ಧ ರಾಷ್ಟ್ರೀಯ ವಿಪತ್ತು ನಿರ್ವಹಣಾ ಕಾಯ್ದೆ ೨೦೦೫ ರ ನಿಯಮಗಳಂತೆ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಜಿಲ್ಲಾಧಿಕಾರಿಗಳಾದ ಎಂ.ಜಿ ಹಿರೇಮಠ ಅವರು ಆದೇಶದಲ್ಲಿ ತಿಳಿಸಿದ್ದಾರೆ.

ಆದೇಶದ ಪೂರ್ಣ ಪ್ರತಿಗೆ ಇಲ್ಲಿ ಕ್ಲಿಕ್ ಮಾಡಿ –  Opening of temples

 

ಜೆಡಿಎಸ್ ನಿಂದ ಮಾಜಿ ಸಂಸದ ಎಲ್.ಆರ್.ಶಿವರಾಮೇಗೌಡ ಉಚ್ಛಾಟನೆ

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button