Kannada NewsLatest

ನಿಪ್ಪಾಣಿ: ವಿವಿಧ ಗ್ರಾಮಗಳಲ್ಲಿ ಉಜ್ವಲಾ ಯೋಜನೆಯಡಿ 1023 ಗ್ಯಾಸ್ ಸಿಲಿಂಡರ್ ವಿತರಣೆ

ಪ್ರಗತಿವಾಹಿನಿ ಸುದ್ದಿ; ಚಿಕ್ಕೋಡಿ : ಗ್ರಾಮೀಣ ಭಾಗದ ಸಾಮಾನ್ಯ ಜನರ ಕಷ್ಟಕ್ಕೆ ಸ್ಪಂದಿಸಿ ಕೇಂದ್ರ ಸರ್ಕಾರವು ಬಡಜನರಿಗೆ, ಹೊಗೆ ರಹಿತ ಅಡುಗೆ ಮನೆಯನ್ನಾಗಿಸಲು ಗ್ರಾಮೀಣ ಭಾಗದ ತಾಯಂದಿರಿಗಾಗಿ ಉಜ್ವಲಾ ಯೋಜನೆಯನ್ನು ಜಾರಿಗೆ ತರಲಾಗಿದೆ ಎಂದು ಮಾಜಿ ತಾ.ಪಂ ಸದಸ್ಯರಾದ ದಾದಾಸೋ ನರಗಟ್ಟೆ ಹೇಳಿದರು.

ನಿಪ್ಪಾಣಿ ಮತಕ್ಷೇತ್ರದ ಸೌಂದಲಗಾ, ಯಮಗರ್ಣಿ, ಭಿವಶಿ, ಯರನಾಳ, ಅಮಲಝರಿ, ಗವಾಣ, ಗೊಂದಿಕೊಪ್ಪಿ, ಜತ್ರಾಟ, ಶಿರಪೆವಾಡಿ, ಶಿರಗುಪ್ಪಿ, ಪಡಲಿಹಾಳ, ಕೊಡ್ನಿ, ಶೆಂಡೂರ, ಅಕ್ಕೋಳ, ಗಾಯಕನವಾಡಿ, ಕಾರದಗಾ, ಮಾಂಗೂರ ಗ್ರಾಮಗಳಲ್ಲಿ ಮುಜರಾಯಿ, ಹಜ್ ಮತ್ತು ವಕ್ಫ್ ಇಲಾಖೆಯ ಸಚಿವರಾದ ಶಶಿಕಲಾ ಜೊಲ್ಲೆ ಯವರ ಪ್ರಯತ್ನದಿಂದ ಪ್ರಧಾನಮಂತ್ರಿ ಉಜ್ವಲಾ ಯೋಜನೆಯಡಿ ೧೦೨೩ ಜನ ಅರ್ಹ ಫಲಾನುಭವಿಗಳಿಗೆ ಉಚಿತ ಗ್ಯಾಸ್‌ಗಳನ್ನು ವಿತರಿಸಿ ಮಾತನಾಡಿದ ಅವರು ಕೇಂದ್ರದಲ್ಲಿರುವ ನರೇಂದ್ರ ಮೋದಿಯವರ ಸರ್ಕಾರವು ದೇಶದ ಸಾಮಾನ್ಯ ಜನರಿಗೆ ಹಲವಾರು ಯೋಜನೆಗಳನ್ನು ಜಾರಿಗೆ ತರಲಾಗಿದೆ. ರೈತರಿಗಾಗಿ ಕೃಷಿ ಸಮ್ಮಾನ್, ಫಸಲ್ ಬೀಮಾ ಯೋಜನೆ, ವಿದ್ಯಾರ್ಥಿಗಳಿಗಾಗಿ ಕೌಶಲ್ಯ ಯೋಜನೆ, ಮಹಿಳೆಯರಿಗಾಗಿ ಸುಕನ್ಯಾ ಸಮೃದ್ಧಿ ಯೋಜನೆ, ಮಹಿಳೆಯರಿಗಾಗಿ ಉಜ್ವಲಾ ಯೋಜನೆ ಸೇರಿದಂತೆ ಹಲವಾರು ಯೋಜನೆಗಳನ್ನು ಜಾರಿಗೆ ತಂದು ಸದುಪಯೋಗಪಡಿಸಿಕೊಟ್ಟಿದ್ದಾರೆ ಎಂದರು.

ಈ ಸಂದರ್ಭದಲ್ಲಿ ಚಾಂದಶಿರದವಾಡ ಗ್ರಾಮ ಪಂಚಾಯತಿ ಸದಸ್ಯರಾದ ಅಣ್ಣಾ ಪಾಟೀಲ, ಶೀತಲ ಲಡಗೆ, ಬಾಳಾಬಾಯಿ ಪೂಜಾರಿ, ಸಂಜಯ ಪಾಟೀಲ, ಅಶೋಕ ಪಾಟೀಲ, ಅಪ್ಪಾಸೋ ಕೋಲ್ಹಾಪುರೆ, ರವಿಂದ್ರ ಸ್ವಾಮಿ, ಮಲಗೊಂಡ ಪಾಟೀಲ, ಸಿದ್ದೇಶ್ವರ ಪಾಟೀಲ, ಎ.ಪಿ.ಎಮ್.ಸಿ ಸದಸ್ಯರಾದ ನಿತೇಶ ಖೋತ, ಮಾಜಿ ತಾ.ಪಂ ಸದಸ್ಯರಾದ ದಾದಾಸೋ ನರಗಟ್ಟೆ, ಬಾಬಾಸಾಬ ಖರಾಡೆ, ಸೋಮಾ ಗಾವಡೆ, ದೇವಪ್ಪಾ ದೇವಕಾತೆ ಬಿಜೆಪಿ ಕಾರ್ಯಕರ್ತರು ಹಾಗೂ ಫಲಾನುಭವಿಗಳು ಉಪಸ್ಥಿತರಿದ್ದರು.
ಜೆಡಿಎಸ್ ನಿಂದ ಮಾಜಿ ಸಂಸದ ಎಲ್.ಆರ್.ಶಿವರಾಮೇಗೌಡ ಉಚ್ಛಾಟನೆ

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button