ಪೌರಾಣಿಕ ಪಾತ್ರದಲ್ಲಿ ಧೋನಿ

 

ಟೀಂ ಇಂಡಿಯಾ ಮಾಜಿ ನಾಯಕನ ಹೊಸ ಅವತಾರ

 ಮುಂಬೈ – ಟೀಂ ಇಂಡಿಯಾ ಮಾಜಿ ನಾಯಕ ಎಂ. ಎಸ್. ಧೋನಿ ಈಗ ಪೌರಾಣಿಕ ಪಾತ್ರವೊಂದರಲ್ಲಿ ಮಿಂಚಲು ಸಿದ್ಧತೆ ನಡೆಸಿದ್ದಾರೆ. ಗ್ರಾಫಿಕ್ ಕಾದಂಬರಿಯೊಂದನ್ನು ಅವರು ತಮ್ಮದೇ ಸಂಸ್ಥೆಯಾದ ಧೋನಿ ಎಂಟರ್‌ಟೇನ್ಮೆಂಟ್ ಅಡಿಯಲ್ಲಿ ನಿರ್ಮಿಸುತ್ತಿದ್ದು ಅದರ ಮೊದಲ ಪೋಸ್ಟರ್ ಅನ್ನು ಬುಧವಾರ ಬಿಡುಗಡೆಗೊಳಿಸಿದ್ದಾರೆ.

ಅಥರ್ವ ಹೆಸರಿನ ಈ ಗ್ರಾಫಿಕ್ ಕಾದಂಬರಿಯ ಸರಣಿಯಲ್ಲಿ ಧೋನಿ ಅಥರ್ವನ ಪಾತ್ರ ನಿರ್ವಹಿಸಲಿದ್ದಾರೆ. ರಮೇಶ ತಮೀಳಮಣಿ ಎಂಬುವವರ ಮೊದಲ ಕಾದಂಬರಿ ಇದಾಗಿದೆ.

ಈ ಕುರಿತು ಮಾಧ್ಯಮಗಳಿಗೆ ಮಾಹಿತಿ ನೀಡಿರುವ ಧೋನಿ ಎಂಟರ್‌ಟೇನ್ಮೆಂಟ್‌ನ ಮ್ಯಾನೇಜಿಂಗ್ ಡೈರೆಕ್ಟರ್ ಕೂಡ ಆಗಿರುವ ಎಂ. ಎಸ್. ಧೋನಿ ಅವರ ಪತ್ನಿ ಸಾಕ್ಷಿ ಸಿಂಗ್ ಧೋನಿ, ಇದೊಂದು ಅಘೋರಿಗಳನ್ನು ಆಧರಿಸಿದ ಕಾಲ್ಪನಿಕ ಕಥೆಯಾಗಿದ್ದು ಅಥರ್ವ ಎಂಬ ಅಘೋರಿ ದುಷ್ಟ ಶಕ್ತಿಗಳ ವಿರುದ್ಧ ಹೋರಾಡುವ ರೋಚಕ ಕತೆ ಹೊಂದಿದೆ ಎಂದು ವಿವರಿಸಿದ್ದಾರೆ.

೨೦೨೦ರಿಂದಲೇ ಯೋಜನೆ

ಎರಡು ವಿಶ್ವಕಪ್‌ಗಳನ್ನು ಗೆದ್ದು ಟೀಂ ಇಂಡಿಯಾದ ಯಶಸ್ವಿ ನಾಯಕರಾಗಿದ್ದ ಎಂ. ಎಸ್. ಧೋನಿ ೨೦೧೯ರಲ್ಲಿ ಅಂತಾರಾಷ್ಟ್ರೀಯ ಕ್ರಿಕೇಟ್‌ಗೆ ವಿಧಾಯ ಹೇಳಿದರು. ಬಳಿಕ ೨೦೨೦ರಿಂದಲೇ ಗ್ರಾಫಿಕ್ ಸರಣಿಯ ಯೋಜನೆ ಅವರು ಪ್ರಾರಂಭಿಸಿದ್ದರು. ಪ್ರಸ್ತುತ ಗ್ರಾಫಿಕ್ ಸರಣಿ ನಿರ್ಮಾಣ ಕಾರ್ಯ ಅಂತಿಮ ಹಂತ ತಲುಪಿದೆ. ಧೋನಿ ಅವರು ಅಘೋರಿಯ ಪಾತ್ರದಲ್ಲಿ ನೋಡಲು ಅವರ ಅಭಿಮಾನಿಗಳು ಕಾತರರಾಗಿದ್ದಾರೆ.

ಟೀಂ ಇಂಡಿಯಾದ ಪ್ರಮುಖ ಆಟಗಾರರಿಗೆ ಕೋವಿಡ್ ಪಾಸಿಟಿವ್ ; ಸಂಕಷ್ಟದಲ್ಲಿ ತಂಡ

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button