ಪ್ರಗತಿವಾಹಿನಿ ಸುದ್ದಿ; ಬೀಜಿಂಗ್: ಗಡಿ ತಂಟೆ ತೆಗೆದು ಸದಾ ಭಾರತದ ಐಕ್ಯತೆ ಮತ್ತು ರಾಷ್ಟ್ರೀಯತೆಗೆ ಧಕ್ಕೆ ಉಂಟುಮಾಡುತ್ತಲೇ ಬರುತ್ತಿರುವ ಚೀನಾ ಈಗ ಕ್ರೀಡೆಯಲ್ಲೂ ರಾಜಕೀಯ ಮಾಡುವ ಮೂಲಕ ವಿಷ ಕಕ್ಕಿದೆ. ಚೀನಾದ ಈ ನಡೆಗೆ ಭಾರತ ಅಲ್ಲದೇ ಅಮೇರಿಕದ ಸೆನೆಟರ್‌ಗಳಿಂದಲೂ ವಿರೋಧ ವ್ಯಕ್ತವಾಗಿದೆ.
ಚೀನಾ ಈ ಬಾರಿಯ ವಿಂಟರ್ ಓಲಂಪಿಕ್ಸ್ ಜ್ಯೋತಿಯನ್ನು ಒಯ್ಯುವ ಗೌರವವನ್ನು ಈ ಹಿಂದೆ ಚೀನಾ ಭಾರತದ ಗಡಿಯ ಗುಲ್ವಾನ್‌ನಲ್ಲಿ ದಾಳಿ ನಡೆಸಿದ್ದ ಚೀನಾ ಸೇನೆಯ ಕಮಾಂಡರ್‌ಗೆ ನೀಡಿದೆ. 2020ರಲ್ಲಿ ನಡೆದಿದ್ದ ಭಾರತದ ಮೇಲಿನ ಚೀನಾದ ಈ ಆಕ್ರಮಣ ವಿಶ್ವದಾದ್ಯಂತ ಟೀಕೆಗೆ ಕಾರಣವಾಗಿತ್ತು. ಭಾರತೀಯ ಸೇನೆ ಚೀನಾವನ್ನು ಸಮರ್ಥವಾಗಿ ಹಿಮ್ಮೆಟ್ಟಿಸಿತ್ತು. ಆ ಸಂದರ್ಭದಲ್ಲಿ ಗಂಭೀರವಾಗಿ ಗಾಯಗೊಂಡಿದ್ದ ಚೀನಾ ಸೇನೆಯ ರೆಜಿಮೆಂಟ್ ಕಮಾಂಡರ್ ಕ್ವಿ ಫೆಬಾಬೊ ಅವರಿಗೆ ಬೀಜಿಂಗ್‌ನಲ್ಲಿ ನಡೆಯಲಿರುವ ಪ್ರಸಕ್ತ ಸಾಲಿನ ಚಳಿಗಾಲದ ಓಲಂಪಿಕ್ಸ್ ಜ್ಯೋತಿ ಹೊತ್ತೊಯ್ಯುವ ಗೌರವವನ್ನು ನೀಡಲಾಗಿದೆ.
ಚೀನಾದ ಈ ನಡೆಯನ್ನು ಅಮೇರಿಕಾ ಸೆನೆಟರ್ ಜಿಮ್ ರಿಸ್ಕ್ ಅವರು ಖಂಡಿಸಿದ್ದಾರೆ. ಭಾರತದ ರಾಷ್ಟ್ರೀಯ ಐಕ್ಯತೆಯನ್ನು ನಾವು ಗೌರವಿಸುತ್ತೇವೆ. ಗಡಿ ತಂಟೆ ತೆಗೆದು ದಾಳಿ ನಡೆಸಿದ ಮಿಲಿಟರಿ ಅಧಿಕಾರಿಗೆ ಈ ಗೌರವ ನೀಡಿರುವುದು ಖಂಡನೀಯ ಎಂದು ಅವರು ಟ್ವೀಟ್ ಮಾಡಿದ್ದಾರೆ.
ಉದ್ಘಾಟನಾ ಸಮಾರಂಭದ ಪ್ರಸಾರವಿಲ್ಲ
ಇನ್ನು ಚೀನಾ ಕ್ರೀಡೆಯಲ್ಲೂ ರಾಜಕೀಯದ ವಿಷ ಚೆಲ್ಲಿರುವ ಬಗ್ಗೆ ಕೇಂದ್ರ ಕ್ರೀಡಾ ಸಚಿವಾಲಯ ಖಂಡನೆ ವ್ಯಕ್ತಪಡಿಸಿದೆ. ಚಳಿಗಾಲದ ಓಲಂಪಿಕ್ಸ್ನ ಉದ್ಘಾಟನೆ ಮತ್ತು ಸಮಾರೋಪ ಸಮಾರಂಭದಲ್ಲಿ ಭಾರತದ ಕ್ರೀಡಾಪಟುಗಳು ಪಾಲ್ಗೊಳ್ಳುವುದಿಲ್ಲ ಎಂದು ತಿಳಿಸಲಾಗಿದೆ.
ಪ್ರಸಾರ ಭಾರತಿ ಸಹ ಡಿಡಿ ಚ್ಯಾನೆಲ್‌ನಲ್ಲಿ ಉದ್ಘಾಟನಾ ಸಮಾರಂಭ ಮತ್ತು ಸಮಾರೋಪ ಸಮಾರಂಭದ ಪ್ರಸಾರ ಮಾಡದಿರಲು ನಿರ್ಧರಿಸಿದೆ.
ವಿದ್ಯುತ್ ದ್ವಿಚಕ್ರ ವಾಹನಗಳ 1000 ತ್ವರಿತ ಚಾರ್ಜಿಂಗ್ ಸೌಲಭ್ಯ ಸ್ಥಾಪನೆಗೆ ಒಪ್ಪಂದ
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ