Latest

ಕನ್ನಡಿಗರ ಹೃದಯ ಗೆದ್ದಿದ್ದ ಲತಾ ಮಂಗೇಶ್ಕರ್; ಗಾನ ಕೋಗಿಲೆ ಹಾಡಿದ್ದ ಕನ್ನಡದ ಗೀತೆಗಳು

ಪ್ರಗತಿವಾಹಿನಿ ಸುದ್ದಿ; ಬೆಂಗಳೂರು: ಭಾರತ ರತ್ನ, ಗಾನಕೋಗಿಲೆ ಲತಾ ಮಂಗೇಶ್ಕರ್ ಅವರನ್ನು ಕಳೆದುಕೊಂಡಿರುವ ಭಾರತೀಯ ಚಿತ್ರರಂಗವೇ ಬಡವಾಗಿದೆ. ದೇಶದ 36ಕ್ಕೂ ಹೆಚ್ಚು ಭಾಷೆಗಳಲ್ಲಿ ಹಾಡು ಹಾಡಿದ್ದ ಲತಾ ಮಂಗೇಶ್ಕರ್ ಅವರ ಧ್ವನಿ, ಸ್ವರ ಮೋಡಿಗೆ ಮೂಕವಿಸ್ಮಿತರಾಗದವರೇ ಇಲ್ಲ.

ಲತಾ ಮಂಗೇಶ್ಕರ್ ಕನ್ನಡದ ಚಿತ್ರಗೀತೆಗಳಿಗೂ ಧ್ವನಿಯಾಗಿದ್ದರು. ಅವರ ಕಂಠ ಸಿರಿಯಲ್ಲಿ ಮೂಡಿ ಬಂದ ಕನ್ನಡದ ಹಾಡಿಗಳು ಇಂದಿಗೂ ಜನಪ್ರಿಯ. ಬೆಳ್ಳನೆ ಬೆಳಗಾಯಿತು ಎಂಬ ಹಾಡಿನ ಮೋಡಿಗೆ 5 ದಶಕಗಳು ಕಳೆದರೂ ಕೂಡ ಹಾಡಿನ ಮೋಡಿಗೆ ತಲೆಬಾಗದವರೇ ಇಲ್ಲ..

1967ರಲ್ಲಿ ತೆರೆಕಂಡ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಸಿನಿಮಾದ ಎರಡು ಹಾಡುಗಳನ್ನು ಲತಾ ಮಂಗೇಶ್ಕರ್ ಹಾಡಿದ್ದರು. ಲಕ್ಷ್ಮಣ್ ಬರಲೇಕರ್ ಸಂಗೀತ ನಿರ್ದೇಶನದಲ್ಲಿ ಬಿ.ಟಿ.ಅಥಣಿ ಗುರುಬಾಲ ಅವರ ನಿರ್ದೇಶನದಲ್ಲಿ ಮೂಡಿಬಂದ ಚಿತ್ರವದು. ಈ ಸಿನಿಮಾದಲ್ಲಿ ಒಟ್ಟು 7 ಹಾಡುಗಳಿದ್ದು ಅದರಲ್ಲಿ ಎರಡು ಹಾಡುಗಳನ್ನು ಲತಾ ಅವರು ಹಾಡಿದ್ದರು.

ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಚಿತ್ರದ ಬೆಳ್ಳನೆ ಬೆಳಗಾಯಿತು ಎಂಬ ಹಾಡು ಇಂದಿಗೂ ಕನ್ನಡಿಗರ ಮನದಲ್ಲಿ ಅಚ್ಚಳಿಯದೇ ಇರುವಂತಹ ಹಾಡು. ಇದೇ ಚಿತ್ರದ ಎಲ್ಲಾರೆ ಇರತೀರೋ… ಎಂದಾರೆ ಬರತೀರೋ…ಎಂಬ ಹಾಡು ಕೂಡ ಲತಾ ಅವರ ಸ್ವರದಲ್ಲಿ ಗಮನ ಸೆಳೆದಿದೆ.

ಲತಾ ಮಂಗೇಶ್ಕರ್ ಅವರ ಸಹೋದರಿಯರಾದ ಆಶಾ ಭೋಸ್ಲೆ, ಉಷಾ ಮಂಗೇಶ್ಕರ್ ಕೂಡ ಈ ಸಿನಿಮಾದ ಒಂದೊಂದು ಹಾಡಿಗೆ ಧ್ವನಿಯಾಗಿರುವುದನ್ನು ಕೂಡ ಇಲ್ಲಿ ನೆನಪಿಸಬಹುದು.

ಕನ್ನಡದಲ್ಲಿ ಲತಾ ಜೀವನ ಚರಿತ್ರೆ ಪುಸ್ತಕ
ಲತಾ ಮಂಗೇಶ್ಕರ್ ಅವರ ಜೀವನ ಸಾಧನೆ ಕುರಿತು ಹಾಡುಹಕ್ಕಿಯ ಹೃದಯಗೀತೆ ಎಂಬ ಪುಸ್ತಕವನ್ನು ಪತ್ರಕರ್ತ ವಸಂತ ನಾಡಿಗೇರ್ ರಚಿಸಿದ್ದಾರೆ. 2009ರಲ್ಲಿ ಈ ಪುಸ್ತಕ ಲೋಕಾರ್ಪಣೆಗೊಂಡಿತ್ತು.
ಲತಾ ಅವರ ಧ್ವನಿಯಲ್ಲಿನ ಆ ಹಾಡು ಕೇಳಿದರೆ ಇಂದಿಗೂ ಕಣ್ಣೀರು ಬರುತ್ತೆ, ದೇಶ ಭಕ್ತಿ ಉಕ್ಕಿ ಹರಿಯುತ್ತೆ…

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button