ಪ್ರಗತಿವಾಹಿನಿ ಸುದ್ದಿ, ಬೆಂಗಳೂರು – ಉತ್ತರ ಕರ್ನಾಟಕ ಮೂಲಕ ಶಾಸಕರೊಬ್ಬರಿಗೆ ಬ್ಲ್ಯಾಕ್ ಮೇಲ್ ಮಾಡಿ ಹಣ ವಸೂಲಿ ಯತ್ನ ನಡೆಸಿದ್ದ ಮಹಿಳೆ ಹಾಗೂ ಮೂವರನ್ನು ಬೆಂಗಳೂರು ಪೊಲೀಸರು ಹೈದರಾಬಾದ್ ನಲ್ಲಿ ಭಾನುವಾರ ರಾತ್ರಿ ವಶಕ್ಕೆ ಪಡೆದಿದ್ದಾರೆ ಎನ್ನುವ ಸುದ್ದಿದಟ್ಟವಾಗಿ ಹರಡಿದೆ.
ಕೆಲಸದ ನೆಪದಲ್ಲಿ ಶಾಸಕರೊಬ್ಬರನ್ನು ಪರಿಚಯ ಮಾಡಿಕೊಂಡು ನಂತರ ವಯಕ್ತಿಕ ಸಂಬಂಧಕ್ಕೂ ಇಳಿದಿದ್ದ ಯುವತಿ ಆ ಶಾಸಕರ ವಯಕ್ತಿಕ ವಿವರ ಮತ್ತು ಫೋಟೋ, ವಿಡೀಯೋಗಳನ್ನು ಇಟ್ಟುಕೊಂಡು ಬ್ಲ್ಯಾಕ್ ಮೇಲ್ ಮಾಡುತ್ತಿದ್ದಳು ಎನ್ನಲಾಗಿದೆ.
ಸುಮಾರು ಒಂದು ವರ್ಷದ ಹಿಂದೆಯೇ ನಡೆದಿದ್ದ ಈ ಘಟನೆ ಈಗ ಪೊಲೀಸ್ ಠಾಣೆ ಮೆಟ್ಟಿಲೇರಿದೆ. ಈಗಾಗಲೆ ಶಾಸಕರಿಂದ ಕೊಟ್ಯಾಂತರ ಹಣ ಪಡೆದಿರುವ ಮಹಿಳೆ ಇನ್ನಷ್ಟು ಹಣಕ್ಕಾಗಿ ಒತ್ತಡ ಮುಂದುವರಿಸಿದ್ದರಿಂದ ಶಾಸಕರು ನೇರವಾಗಿ ವಿಧಾನಸೌಧ ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾರೆ ಎನ್ನಲಾಗಿದೆ.
ತಕ್ಷಣ ಕಾರ್ಯಪ್ರವೃತ್ತರಾದ ಪೊಲೀಸರು ಹೈದರಾಬಾದ್ ನಲ್ಲಿ ಮಹಿಳೆ ಮತ್ತು ಆಕೆಯ ಸಹಚರರನ್ನು ವಶಕ್ಕೆ ಪಡೆದು ಬೆಂಗಳೂರಿಗೆ ಕರೆತರುತ್ತಿದ್ದಾರೆ ಎನ್ನುವ ಸುದ್ದಿ ಬೆಂಗಳೂರಿನಲ್ಲಿ ಹರಡಿದೆ.
ಈ ಸಂಬಂಧ ಇನ್ನಷ್ಟೆ ಹೆಚ್ಚಿನ ಮಾಹಿತಿ ಹೊರಬೀಳಬೇಕಿದೆ.
1948ರಲ್ಲಿ ತಿರಸ್ಕರಿಸಲ್ಪಟ್ಟಿದ್ದ ಲತಾ ಮಂಗೇಷ್ಕರ್ ಹಾಡುಗಳ ಯೂ ಟ್ಯೂಬ್ ವೀವ್ಸ್ ಎಷ್ಟು ಗೊತ್ತೆ?
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ