ಪ್ರಗತಿವಾಹಿನಿ ಸುದ್ದಿ; ಶಿವಮುಗ್ಗ: ಕೇಸರಿ ಶಾಲು ಹಾಗೂ ಹಿಜಾಬ್ ವಿವಾದ ಉಡುಪಿ, ಕುಂದಾಪುರ ಬಳಿಕ ಇದೀಗ ರಾಜ್ಯಾದ್ಯಂತ ವ್ಯಾಪಿಸುತ್ತಿದ್ದು, ಶಿವಮೊಗ್ಗ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಗಿದೆ.
ಶಿವಮೊಗ್ಗದ ಸರ್ಕಾರಿ ಪದವಿಪೂರ್ವ ಕಾಲೇಜಿಗೆ ಆಗಮಿಸಿದ ಹಿಂದೂ ವಿದ್ಯಾರ್ಥಿಗಳು ತರಗತಿಗೆ ಹೋಗದೇ ಕಾಲೇಜು ಧ್ವಜ ಸ್ತಂಭದ ಬಳಿ ಪ್ರತಿಭಟನೆ ನಡೆಸಿದ್ದಾರೆ. ಇದೇ ವೇಳೆ ಓರ್ವ ವಿದ್ಯಾರ್ಥಿ ಧ್ವಜ ಸ್ತಂಭ ಹತ್ತಿ ಕೇಸರಿ ಬಾವುಟ ಹಾರಿಸಿದ್ದಾನೆ. ರಾಷ್ಟ್ರಧ್ವಜ ಹಾರುವ ಜಾಗದಲ್ಲಿ ಕೇಸರಿ ಧ್ವಜ ಹಾರಿಸಿರುವುದು ಇದೀಗ ಮತ್ತಷ್ಟು ಆಕ್ರೋಶಗಳಿಗೂ ಕಾರಣವಾಗುತ್ತಿದೆ.
ಒಂದೆಡೆ ಮುಸ್ಲೀಂ ವಿದ್ಯಾರ್ಥಿ, ವಿದ್ಯಾರ್ಥಿನಿಯರು ಪ್ರತಿಭಟನೆ ನಡೆಸಿದ್ದರೆ ಮತ್ತೊಂದೆಡೆ ಹಿಂದೂ ವಿದ್ಯಾರ್ಥಿಗಳು ಕೇಸರಿ ಶಾಲು ಧರಿಸಿ ಪ್ರತಿಭಟನೆ ನಡೆಸಿದ್ದಾರೆ. ನಗರದ ಬಿ.ಹೆಚ್ ರಸ್ತೆ ಬಂದ್ ಮಾಡಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಇದೇ ವೇಳೆ ಕಾಲೇಜಿನ ಮೇಲೆ ಕಲ್ಲುತೂರಾಟದ ಘಟನೆ ಕೂಡ ನಡೆದಿದೆ. ಸ್ಥಳದಲ್ಲಿ ಪರಿಸ್ಥಿತಿ ಉದ್ವಿಗ್ನಗೊಂಡಿದ್ದು, ಪೊಲೀಸರು ದೌಡಾಯಿಸಿದ್ದಾರೆ.
ತಾರಕಕ್ಕೇರಿದ ಹಿಜಾಬ್ V/S ಕೇಸರಿ ಶಾಲು ವಿವಾದ; ಉಡುಪಿ ಎಂಜಿಎಂ ಕಾಲೇಜು ರಣಾಂಗಣ
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ