
ಪ್ರಗತಿವಾಹಿನಿ ಸುದ್ದಿ; ಯಾದಗಿರಿ: ಡೆತ್ ನೋಟ್ ಬೆರೆದಿಟ್ಟು ಶಿಕ್ಷಕರೊಬ್ಬರು ರೈಲಿಗೆ ತಲೆಕೊಟ್ಟು ಆತ್ಮಹತ್ಯೆಗೆ ಶರಣಾಗಿರುವ ಘಟನೆ ಯಾದಗಿರಿ ಸರ್ಕಾರಿ ಪದವಿ ಕಾಲೇಜು ಬಳಿ ನಡೆದಿದೆ.
ಸಂಗನಬಸಯ್ಯ (50) ಆತ್ಮಹತ್ಯೆಗೆ ಶರಣಾದ ಶಿಕ್ಷಕ. ಸಾವಿಗೂ ಮುನ್ನ ಶಿಕ್ಷಕ ಡೆತ್ ನೋಟ್ ಬರೆದಿಟ್ಟಿದ್ದು, ಮುಖ್ಯಶಿಕ್ಷಕಿ ವಿರುದ್ಧ ಆರೋಪಿಸಿದ್ದಾರೆ.
ತನ್ನ ಸಾವಿಗೆ ಮುಖ್ಯಶಿಕ್ಷಕಿ ಮಲ್ಲಮ್ಮ ಬಿರಾದಾರ್ ಕಾರಣ ಎಂದು ಬರೆದಿಟ್ಟು, ಶಿಕ್ಷಕ ಆತ್ಮಹತ್ಯೆಗೆ ಶರಣಾಗಿದ್ದಾರೆ. ರಾಯಚೂರು ರೈಲ್ವೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.
ಹಿಜಾಬ್ ವಿವಾದ; ಅನಗತ್ಯ ಪ್ರತಿಕ್ರಿಯೆ ಕೊಡುವುದು ನಿಲ್ಲಿಸಿ; ಸಿಎಂ ಖಡಕ್ ತಾಕೀತು