Karnataka NewsLatest

ಘಟಪ್ರಭಾ : ನಿಯಂತ್ರಣ ತಪ್ಪಿ ಮರಕ್ಕೆ ಡಿಕ್ಕಿ ಹೊಡೆದ ಟ್ರ್ಯಾಕ್ಸ್

ಪ್ರಗತಿವಾಹಿನಿ ಸುದ್ದಿ,  ಗೋಕಾಕ :  ಮೂಡಲಗಿ ತಾಲೂಕಿನ ಅರಭಾಂವಿ ಹತ್ತಿರ ಟ್ರ್ಯಾಕ್ಸ್ (Tracks) ಒಂದು ಓವರ್ ಟೇಕ್ (Overtake) ಮಾಡುವ ಭರದಲ್ಲಿ ಚಾಲಕನ ನಿಯಂತ್ರಣ ತಪ್ಪಿ ರಸ್ತೆ ಬದಿಯ ಮರಕ್ಕೆ ಡಿಕ್ಕಿ ಹೊಡೆದ ಘಟನೆ ಶುಕ್ರವಾರ ರಾತ್ರಿ (Night) 8 ಗಂಟೆಯ ಸುಮಾರಿಗೆ ನಡೆದಿದೆ.
ಸುಕ್ಷೇತ್ರ ಸವದತ್ತಿ ರೇಣುಕಾ-ಯಲ್ಲಮ್ಮದೇವಿಯ ದರ್ಶನ ಪಡೆದು ಭಕ್ತಾಧಿಗಳು ತಮ್ಮ ಸ್ವಂತ ಊರಾದ ಹುಕ್ಕೇರಿ (Hukkeri) ತಾಲೂಕಿನ ಬೆಲ್ಲದ-ಬಾಗೇವಾಡಿಗೆ ಬರುತ್ತಿರಬೇಕಾದರೆ ಈ ಅವಘಡ ಸಂಭವಿಸಿದೆ.
ಟ್ರ್ಯಾಕ್ಸ್ ವಾಹನ ಚಾಲಕ (Driver) ಅರಭಾಂವಿ ಹತ್ತಿರ ಓವರ್ ಟೇಕ್ ಮಾಡುವಾಗ ಎದುರಿಗೆ ಅಡತಡೆಯಾದ ಹಿನ್ನಲೆಯಲ್ಲಿ ವಾಹನ ಆತನ ನಿಯಂತ್ರಣ (Out of control) ತಪ್ಪಿ ರಸ್ತೆಯ ಬದಿಯ ಮರಕ್ಕೆ ಡಿಕ್ಕಿ ಹೊಡೆದಿದೆ ಎಂದು ಹೇಳಲಾಗುತ್ತಿದೆ.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button